Breaking News
Hiring Reporter’s For more Information Contact Above Number 876 225 4007 . Program producer
Home / ಕ್ರೀಡೆ / ಕ್ರಿಕೆಟ್ / ತಮಿಳುನಾಡು ತಂಡ ಮಣಿಸಿ ಹಜಾರೆ ಟ್ರೋಫಿಗೆ ಮುತ್ತಿಕ್ಕಿದ ಕರ್ನಾಟಕ.

ತಮಿಳುನಾಡು ತಂಡ ಮಣಿಸಿ ಹಜಾರೆ ಟ್ರೋಫಿಗೆ ಮುತ್ತಿಕ್ಕಿದ ಕರ್ನಾಟಕ.

 

ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ತಮಿಳುನಾಡು ತಂಡದ ವಿರುದ್ಧ ನಡೆದ ವಿಜಯ್​ ಹಜಾರೆ ಫೈನಲ್​ ಪಂದ್ಯದಲ್ಲಿ ಕರ್ನಾಟಕ 60ರನ್​ಗಳ ಅಂತರದ ಗೆಲುವಿನ ನಗೆ ಬೀರಿದ್ದು, 4ನೇ ಬಾರಿಗೆ ಟ್ರೋಫಿಗೆ ಮುತ್ತಿಕ್ಕಿದೆ. ತಮಿಳುನಾಡು ನೀಡಿದ್ದ 252ರನ್​ಗಳ ಗುರಿ ಬೆನ್ನತ್ತಿದ್ದ ಕರ್ನಾಟಕ ಮಯಾಂಕ್​ ಅಗರವಾಲ್​​ ಅಜೇಯ (69) ಹಾಗೂ ಕೆಎಲ್​ ರಾಹುಲ್​​ ಅಜೇಯ(52) ರನ್​ಗಳ ನೆರವಿನಿಂದ 23 ಓವರ್​ಗಳಲ್ಲಿ ಕೇವಲ ಒಂದು ವಿಕೆಟ್​ ಕಳೆದುಕೊಂಡ 146ರನ್​ಗಳಿಕೆ ಮಾಡಿತ್ತು. ಈ ವೇಳೆ ಮಳೆ ಸುರಿದ ಕಾರಣ ವಿಜಿಡಿ ನಿಯಮದ ಪ್ರಕಾರ ಕರ್ನಾಟಕ ತಂಡ ವಿಜೇತ ಎಂದು ಘೋಷಣೆ ಮಾಡಲಾಯಿತು. ಪಂದ್ಯದಲ್ಲಿ ಅದ್ಭುತ ಪ್ರದರ್ಶನ ನೀಡಿರುವ ಕೆಎಲ್​ ರಾಹುಲ್​ ಹಾಗೂ ಮಯಾಂಕ್​ ಅಗರವಾಲ್​ಗೆ ಐಪಿಎಲ್​ ಪ್ರಾಂಚೈಸಿ ಕಿಂಗ್ಸ್​ ಇವೆಲೆನ್​ ಪಂಜಾಬ್​ ತಂಡ ಅಭಿನಂದನೆ ಸಲ್ಲಿಸಿ ಟ್ವೀಟ್​ ಮಾಡಿದೆ.
ಇದರ ಮಧ್ಯೆ ಕರ್ನಾಟಕ ತಂಡದ ಕ್ಯಾಪ್ಟನ್​​ ಮನೀಷ್​ ಪಾಂಡೆಗೂ ಸನ್​ರೈಸರ್ಸ್​ ಹೈದರಾಬಾದ್​ ಪ್ರಾಂಚೈಸಿ ಅಭಿನಂದನೆ ಸಲ್ಲಿಕೆ ಮಾಡಿ ಟ್ವೀಟ್​ ಮಾಡಿದೆ.
ಅಬ್ಬರಿಸಿದ್ದ ಕೆಎಲ್​ ಅಜೇಯ 88ರನ್​ಗಳಿಕೆ ಮಾಡಿದರೆ, ​ಮಯಾಂಕ್​ ಅಗರವಾಲ್​​ 33 ಎಸೆತಗಳಲ್ಲಿ 47ರನ್​ಗಳಿಕೆ ಮಾಡಿ ಗಮನ ಸೆಳೆದಿದ್ದರು.

Share

About Vijayalakshmi

Check Also

ಅಂತರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಘೋಷಿಸಿದ ಕ್ರಿಕೆಟಿಗ.

ರಾವಲ್ಪಿಂಡಿ : ಪಾಕಿಸ್ತಾನದ ವಿರುದ್ಧ ರಾವಲ್ಪಿಂಡಿಯಲ್ಲಿ ಟಿ20 ಸರಣಿ ಮುಗಿಯುತ್ತಿದ್ದಂತೆ ಜಿಂಬಾಬ್ವೆ ಮಾಜಿ ನಾಯಕ ಹಾಗೂ ಅನುಭವಿ ಆಲ್​ರೌಂಡರ್ ಎಲ್ಟನ್ ಚಿಗುಂಬುರ …

Leave a Reply

Your email address will not be published. Required fields are marked *

error: Content is protected !!