Hiring Reporter’s For more Information Contact Above Number 876 225 4007 . Program producer
Home / Breaking News / ‘ಕೋಲುಮಂಡೆ’ ಹಾಡು : ‘ಚೆಂದನ್ ಶೆಟ್ಟಿ’ ವಿರುದ್ಧ ಭುಗಿಲೆದ್ದ ಆಕ್ರೋಶ

‘ಕೋಲುಮಂಡೆ’ ಹಾಡು : ‘ಚೆಂದನ್ ಶೆಟ್ಟಿ’ ವಿರುದ್ಧ ಭುಗಿಲೆದ್ದ ಆಕ್ರೋಶ

Spread the love

ಬೆಂಗಳೂರು : ಕಳೆದ ಮೈಸೂರು ದಸರಾ ಸಂದರ್ಭದಲ್ಲಿ ದಸರಾ ಸಾಂಸ್ಕೃತಿಕ ವೇದಿಕೆಯಲ್ಲಿಯೇ ನಿಶ್ಚಿತಾರ್ಥ ಮಾಡಿಕೊಂಡು ಸುದ್ದಿಯಾಗಿ ವಿವಾದಕ್ಕೆ ಸಿಲುಕ್ಕಿದ್ದಂತ ಚೆಂದನ್ ಶೆಟ್ಟಿ, ಇದೀಗ ಮತ್ತೆ ವಿವಾದಕ್ಕೆ ಸಿಲುಕಿದ್ದಾರೆ. ಅದೂ ಅವರು ಹೊರತಂದಿರುವ ಕೋಲುಮಂಡೆ ಆಲ್ಬಂ ಮೂಲಕವಾಗಿದೆ. ಇಂತಹ ಚೆಂದನ್ ಶೆಟ್ಟಿ ವಿರುದ್ಧ ಮಲೆಮಹದೇಶ್ವರ ಭಕ್ತರ ಆಕ್ರೋಶ ಭುಗಿಲೆದ್ದಿದೆ. ಅಷ್ಟಕ್ಕೂ ಯಾಕೆ..? ಏನ್ ಕಾರಣ ಅಂತ ಮುಂದೆ ಓದಿ.

Ramping ಹಾಡುಗಳ ಮೂಲಕ ಪ್ರಸಿದ್ಧಿಯಾಗಿರುವಂತ ಚೆಂದನ್ ಶೆಟ್ಟಿ ಇತ್ತೀಚೆಗೆ ಕೋಲುಮಂಡೆ ಎನ್ನುವಂತ ವೀಡಿಯೋ ಆಲ್ಬಂ ಹೊರ ತಂದಿದ್ದರು. ಈ ವೀಡಿಯೋ ಆಲ್ಪಂ ನಲ್ಲಿ ಶರಣೆ ಸಂಕಮ್ಮ, ಮಾದಪ್ಪನ ಬಗ್ಗೆ ಅವಹೇಳನಕಾರಿಯಾಗಿ ಚಿತ್ರಿಸಲಾಗಿದೆಯಂತೆ. ಸಂಕಮ್ಮ, ಮಾದಪ್ಪನನ್ನು ಕೆಟ್ಟದಾಗಿ ಚಿತ್ರೀಕರಣ ಮಾಡಿರುವುದೇ ಮಲೆ ಮಹದೇಶ್ವರ ಭಕ್ತರ ಆಕ್ರೋಶಕ್ಕೆ ಕಾರಣವಾಗಿರೋದು.

ಮಲೆ ಮಹದೇಶ್ವರನ ಭಕ್ತರು ಈ ಸಂಬಂಧ ಕಿಡಿಕಾರಿದ್ದು, ಸಂಕಮ್ಮ, ಮಾದಪ್ಪನನ್ನ ಕೆಟ್ಟದಾಗಿ ಚಿತ್ರೀಕರಣ ಮಾಡಲಾಗಿದೆ. ಜಾನಪದ ಹಾಡಿಗೆ Ramp ಸಾಂಗ್ ಟಚ್ ಕೊಡಲಾಗಿದೆ. ಸಂಕಮ್ಮನನ್ನು ಕೆಟ್ಟದಾಗಿ ತೋರಿಸಿದ್ದಾರೆ. ಚೆಂದನ್ ಶೆಟ್ಟಿ ತಂಡ ಕ್ಷಮೆ ಕೇಳಬೇಕೆಂದು ಆಗ್ರಹಿಸಿದ್ದಾರೆ. ಈ ಮೂಲಕ ಇದೀಗ ಚೆಂದನ್ ಶೆಟ್ಟಿ ಮತ್ತೆ ವಿವಾದಕ್ಕೆ ಗುರಿಯಾಗಿದ್ದಾರೆ.

Check Also

ವಾಹನ ಸವಾರರಿಗೆ ಮತ್ತೊಂದು ಗುಡ್ ನ್ಯೂಸ್

Spread the loveಮೋಟಾರು ವಾಹನ ನಿಯಮಗಳಲ್ಲಿ ಕೇಂದ್ರ ಸರ್ಕಾರ ಬದಲಾವಣೆ ತಂದಿದ್ದು ಅಕ್ಟೋಬರ್ 1 ರಿಂದ ವಾಹನ ನಿಯಮಗಳಲ್ಲಿ ಬದಲಾವಣೆಯಾಗಲಿದೆ. …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Hiring Reporter’s For more Information Contact Above Number 876 225 4007 . Program producer
error: Content is protected !!