Breaking News
Hiring Reporter’s For more Information Contact Above Number 876 225 4007 . Program producer
Home / ಸುದ್ದಿ / ಹುಬ್ಬಳ್ಳಿ / ಗಂಡು ಮೆಟ್ಟಿದ ನಾಡಿನಲ್ಲಿ ಕನ್ನಡದ ಕಂಪು ಸೂಸುತ್ತಿರುವ ಬಸ್ ಗಳು.‌

ಗಂಡು ಮೆಟ್ಟಿದ ನಾಡಿನಲ್ಲಿ ಕನ್ನಡದ ಕಂಪು ಸೂಸುತ್ತಿರುವ ಬಸ್ ಗಳು.‌

 

ಹುಬ್ಬಳ್ಳಿ: ಸಾಮಾನ್ಯವಾಗಿ ಬಸ್ ಎಂದರೆ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಕರೆದೊಯ್ಯುವ ಸಾರಿಗೆ, ಅದರಲ್ಲಿ ಸೀಟುಗಳು, ಅಲ್ಲಲ್ಲಿ ಬೊರ್ಡ್ ಗಳು ಅಲ್ಲದೇ ಕೇಲವು ಬಿತ್ತಿ ಚಿತ್ರಗಳನ್ನು ನಾವು ನೋಡಬಹುದು. ಇದಕ್ಕೆ ಅಪವಾದ ಎಂಬಂತೆ ನಗರದ ಕೆಲವು ಬಸ್ಸುಗಳು ಕನ್ನಡದ ತಾಣವಾಗಿದೆ.
ಹೌದು, ಕನ್ನಡ ಕನ್ನಡ ಬರ್ರೀ ನಮ್ಮ ಸಂಗಡ ಎನ್ನುತಾ ನಗರದ ಗ್ರಾಮೀಣ ಸಾರಿಗೆ, ನಗರ ಸಾರಿಗೆಯ ಕೇಲವು ನಿರ್ವಾಹಕ ಮತ್ತು ಸಿಬ್ಬಂದಿಗಳು ಕನ್ನಡ ಸಾರಿಗೆಯ ತೇರು ಎಳೆಯುತ್ತಾ ಪ್ರಯಾಣಿಕರಿಗೆ ಕನ್ನಡವ ಉಣಬಡಿಸುತಿದ್ದಾರೆ. ನಗರ ಸಾರಿಗೆ ಘಟಕ ಒಂದರ ಕರಿಯಪ್ಪ ದುರಣ್ಣವರ ಹಳೇಹುಬ್ಬಳ್ಳಿ ಹೊಸ ಬಸ್ ನಿಲ್ದಾಣಕ್ಕೆ ಓಡಾಡುವ ಬಸ್ಸನ್ನು, ಗ್ರಾಮಾಂತರ ಘಟಕ ಒಂದರ ಪ್ರವೀಣ ಹೊಸಮನಿ ಹಂಚಿನಾಳ – ಹುಬ್ಬಳ್ಲಿ ಬಸ್ಸನ್ನು, ಶಿವಾನಂದ ಪೂಜಾರ, ಪರಶುರಾಮ ಛಲವಾದಿ, ಚನ್ನಪ್ಪ ಪೂಜಾರ, ಸಂತೋಷ ಹುಬ್ಬಳ್ಳಿ, ಮಹಾಂತೇಶ ಪಾಟೀಲ, ಎ.ಬಿ.ತಡಸದ ಕಡಪಟ್ಟಿ – ಹುಬ್ಬಳ್ಳಿ ಬಸ್ಸ ನ್ನು ಕನ್ನಡದ ತೇರಾಗಿ ಮಾರ್ಪಾಡು ಮಾಡಿ ಬಸ್ಸನ್ನು ಕನ್ನಡಮಯ ಮಾಡಿದ್ದಾರೆ. ಬಸ್ಸಿನ ಹೊರಗಡೆ, ಮತ್ತು ಒಳಗಡೆ ಕವಿ ಸಾಹಿತಿಗಳ, ಶರಣ ಸಂತರ, ದಾರ್ಶನಿಕರ ಮತ್ತು ಹೋರಾಟ ಗಾರರ ಹಾಗೂ ಜ್ಞಾನಪೀಠ ಪುರಸ್ಕೃತರ ಭಾವಚಿತ್ರಗಳು ಹಾಕಿ ಕನ್ನಡದ ಕಂಪು ಸೂಸಿದ್ದಾರೆ.
ಅಲ್ಲದೆ ಸಾರಿಗೆ ಸಂಸ್ಥೆಯವರು ಬರೆದ ಕನ್ನಡದ ನುಡಿಮುತ್ತುಗಳಾದ, ಕವಿ ಕುವೆಂಪುರವರ ಎಲ್ಲಾದರು ಇರು ಎಂತಾದರು ಇರು ಎಂದೆಂದಿಗೂ ನೀ ಕನ್ನಡವಾಗಿರು, ಸಾಹಿತಿ ಜಿ.ಎಸ್.ಶಿವರುದ್ರಪ್ಪನವರ ಓ ಎಳೆಯಿರಿ ಕನ್ನಡದ ತೇರು ನೀವು ನಿಂತಿರುವ ನೆಲೆಗಳಿಂದ ಹೀಗೆ ಇಂಥಹ ಅನೇಕರ ಬರಹಗಳು ಬಸ್ಸಿನಲ್ಲಿ ಅಂಟಿಸಿದ್ದು ಕಣ್ಣಿಗೆ ರಾರಾಜಿಸುತ್ತವೆ. ಇಡೀ ಬಸ್ಸುಗಳೇ ಕನ್ನಡದ ಕಸ್ತೂರಿಯಾಗಿ ಸೂಸುತ್ತಿದೆ.
ಇನ್ನೂ ಡೀಪೋದ ಅನೇಕ ಬಸ್‌ಗಳಲ್ಲಿ ಕನ್ನಡದ ನುಡಿಮುತ್ತುಗಳು ಅಂಟಿಸಿದ್ದಾರೆ. ಅಲ್ಲದೇ ಬದುಕುವ ಕಲೆ ಜೀವನದ ನೆಲೆಯ ಪರಿಪಾಠದ ಬಗ್ಗೆ ಸುಮಾರು ವಾಹನದಲ್ಲಿ ನುಡಿಗಟ್ಟುಗಳ ಅಕ್ಷರಗಳು ಹಚ್ಚಿದ್ದಾರೆ. ದೇವರು ದಿಂಡಿರುಗಳ ಭಾವಚಿತ್ರ ಹಾಕುವ ಇಂದಿನ ದಿನದಲ್ಲಿ ಕನ್ನಡದ ಬಗ್ಗೆ ಅಪಾರ ಅಬಿಮಾನ ಹೊಂದಿ, ಕವಿಗಳ ಭಾವಚಿತ್ರಗಳು ನೇತು ಹಾಕಿ ಕನ್ನಡಿಗರ ದ್ವನಿ ಪರಿಚಯಿಸಿದ್ದು ವಿಶೇಷ. ಕನ್ನಡ ನಾಡಿಗಾಗಿ ಶ್ರಮಿಸಿದ ಅನೇಕ ಮಹನಿಯರನ್ನು ಪರಿಚಯಿಸಿ ಎಲ್ಲರಲ್ಲಿ ಕನ್ನಡ ಅಭಿಮಾನ ಉಂಟಾಗಲಿ ಎಂಬ ಸದುದ್ದೇಶದೊಂದಿಗೆ ಇಲ್ಲಿನ ಸಾರಿಗೆ ಇಲಾಖೆ ದಿನ ನಿತ್ಯ ಕನ್ನಡ ತೇರು ಎಳೆಯುತ್ತಾ ಸಾಗುತ್ತಾ ಪರಿಚಯಿಸುತ್ತಿದೆ.

Share

About Shaikh BIG TV NEWS, Hubballi

Check Also

Featured Video Play Icon

ಬಾ ಬಾ ನಾ ರಡಿ….ರಾಬರ್ಟ್ ಗೆ ಜೈ ಅಂದ ಅಭಿಮಾನಿಗಳು | Roberrt movie craze after releasing | BIG TV NEW

Shaikh BIG TV NEWS, Hubballi See author's posts Share

Leave a Reply

Your email address will not be published. Required fields are marked *

error: Content is protected !!