Breaking News
Hiring Reporter’s For more Information Contact Above Number 876 225 4007 . Program producer
Home / ಜಿಲ್ಲೆ / ಲಕ್ಷ್ಮೀ ಹೆಬ್ಬಾಳಕರ ಬಿಜೆಪಿ ಸೇರಲು ಉತ್ಸುಕರಾಗಿದ್ದರು : ಕುಮಠಳ್ಳಿ ತಿರುಗೇಟು
Featured Video Play Icon

ಲಕ್ಷ್ಮೀ ಹೆಬ್ಬಾಳಕರ ಬಿಜೆಪಿ ಸೇರಲು ಉತ್ಸುಕರಾಗಿದ್ದರು : ಕುಮಠಳ್ಳಿ ತಿರುಗೇಟು

 

ಚಿಕ್ಕೊಡಿ- ಲಕ್ಷ್ಮೀ  ಹೆಬ್ಬಾಳಕರ ಈ ಹಿಂದೆಯೇ ಬಿಜೆಪಿ ಸೇರಲು ಉತ್ಸುಕರಾಗಿದ್ದವರು. ಅಲ್ಲದೇ ನನಗು ಕೂಡಾ ಕರೆದಿದ್ದರು ಆದರೆ ಇದೀಗ ಅವರು ಯಾವ ಸಮಯದಲ್ಲಿ ಏನೂ ಮಾತನಾಡುತ್ತಾರೆ ಎಂಬುದು ತಿಳಿಯುವುದಿಲ್ಲಾ ಎಂದು ಬಿಜೆಪಿ ಅಭ್ಯರ್ಥಿ ಮಹೇಶ ಕುಮಠಳ್ಳಿ ಹೇಳುವ ಮೂಲಕ ಶಾಕ್ ಕೊಟ್ಟಿದ್ದಾರೆ. ನಗರದಲ್ಲಿಂದು ಉಪಚುನಾವಣೆ ಪ್ರಚಾರದ ಸಮಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲಕ್ಷ್ಮೀ ಹೆಬ್ಬಾಳಕರ ಅವರು ಬಿಜೆಪಿಗೆ ಯಾವಾಗ ಹೋಗುತ್ತೀರಿ ನಾನು ಕೂಡಾ ಬರುತ್ತೇನೆ ಎಂದು ಅವರಾಗಲೇ ಕೇಳುತ್ತಿದ್ದರು. ಅಲ್ಲದೇ ಕ್ಷೇತ್ರದ ಅಭಿವೃದ್ಧಿ ಮಾಡುವುದು ಇದ್ದು ನೀವು ಬಂದರು ಬಿಟ್ಟರು ನಾನು ಹೋಗುತ್ತೇನೆ ಎಂದು ಹೇಳಿದರು ಎಂದು ಹೇಳಿ ಹೊಸ ಬಾಂಬ್ ಸಿಡಿಸಿದ್ದಾರೆ.ಸಿಎಂ ಬಿ.ಎಸ್ ಯಡಿಯೂರಪ್ಪ ಅವರು ಹೇಳಿಕೆ ಕೊಟ್ಟಿದ್ದಾರೆ ಅದನ್ನು ಗಮನಿಸಿದರೇ ಗೊತ್ತ ಆಗುವುದು. ನಿಮಗೊಸ್ಕರವೇ ಸದ್ಯ ಜಗಳ ಹತ್ತಿದ್ದು, ನೀವು ಬಂದರೆ ನಿಮ್ಮವರು ಹದಿನಾರು ಜನ ಬರುವುದಿಲ್ಲ. ಅಲ್ಲದೇ ನಮ್ಮವರು ಇಪ್ಪತ್ತು ಜನ ಓಡಿ ಹೋಗುತ್ತಾರೆ ಎಂಬ ಹೇಳಿಕೆ ನೀಡಿದ್ದರು. ಇದನ್ನು ನಾನು ಮಾಧ್ಯಮಗಳಲ್ಲಿ ನೋಡಿದ್ದೇನೆ ಎಂದು ಹೇಳುವ ಮೂಲಕ ಲಕ್ಷ್ಮೀ ಹೆಬ್ಬಾಳಕರ ಗೆ ಮಹೇಶ ಕುಮಠಳ್ಳಿ ನೇರವಾಗಿ ಟಾಂಗ್ ಕೊಟ್ಟಿದ್ದಾರೆ.

Share

About Prakash s kamble BIG TV NEWS, Athani

Check Also

Featured Video Play Icon

ಮಕ್ಕಳ ಶಿಕ್ಷಣಕ್ಕೆ ಕೊಳ್ಳಿ ಇಟ್ಟ ಸೊಸೈಟಿ?? | Children crying to protect their school | BIG TV NEWS

Shaikh BIG TV NEWS, Hubballi See author's posts Share

Leave a Reply

Your email address will not be published. Required fields are marked *

error: Content is protected !!