Breaking News
Hiring Reporter’s For more Information Contact Above Number 876 225 4007 . Program producer
Home / ಜಿಲ್ಲೆ / ಮಂಡ್ಯ / ರಾಷ್ಟ್ರದ ಭದ್ರತೆಗಾಗಿ ನಾವೆಲ್ಲರೂ ಶ್ರಮಿಸೋಣ: ಡಿ.ಸಿ.

ರಾಷ್ಟ್ರದ ಭದ್ರತೆಗಾಗಿ ನಾವೆಲ್ಲರೂ ಶ್ರಮಿಸೋಣ: ಡಿ.ಸಿ.

 

ಮಂಡ್ಯ : ರಾಷ್ಟ್ರದ ಐಕ್ಯತೆ ಸಮಗ್ರತೆ ಹಾಗೂ ಭದ್ರತೆಯನ್ನು ಕಾಪಾಡಲು ನಾವೇಲ್ಲರೂ ಶ್ರಮಿಸಬೇಕು. ಜತೆಗೆ ರಾಷ್ಟ್ರದ ಏಕೀಕರಣದ ಸ್ಪೂರ್ತಿಯನ್ನು ನಮ್ಮ ಜೀವನದುದ್ದಕ್ಕೂ ಅಲ್ಲದೇ ಮುಂದಿನ ಪೀಳಿಗೆಗೂ ಕೂಡ ಕೊಂಡೊಯ್ಯಬೇಕು ಎಂದು ಜಿಲ್ಲಾಧಿಕಾರಿಗಳಾದ ಡಾ.ಎಂ.ವಿ ವೆಂಕಟೇಶ್ ಅವರು ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ನೆಹರು ಯುವ ಕೇಂದ್ರ ಹಾಗೂ ಜಿಲ್ಲೆಯ ಯುವ ಅಥವಾ ಮಹಿಳಾ ಮಂಡಳಿಗಳ ಸಹಯೋಗದಲ್ಲಿ ನಗರದ ಜಿಲ್ಲಾಧಿಕಾರಿಗಳ ಕಛೇರಿ ಸಭಾಂಗಣದಲ್ಲಿ ಸರ್ದಾರ್ ವಲ್ಲಭಬಾಯಿ ಪಟೇಲರ ಜನ್ಮ ದಿನಾಚರಣೆ ಅಂಗವಾಗಿ ನಡೆದ ರಾಷ್ಟ್ರೀಯ ಏಕತಾ ದಿವಾಸ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ
ಅವರು ಪಟೇಲರು ಒಂದು ಸಾಮಾನ್ಯ ಕುಟುಂಬದಲ್ಲಿ ಜನಿಸಿ ವಕೀಲ ವೃತ್ತಿಯನ್ನು ಮಾಡಿಕೊಂಡು, ಸ್ವಾತಂತ್ರ್ಯ ಸಂಗ್ರಾಮದಲ್ಲಿ ಗಾಂಧಿಜೀಯವರ ಜೊತೆ ಕೈಜೋಡಿಸಿ ಸ್ವಾತಂತ್ರ್ಯಕ್ಕಾಗಿ ಹೋರಾಡಿದರು ಎಂದು ತಿಳಿಸಿದರು.
ಸರ್ದಾರ್ ವಲ್ಲಭಬಾಯಿ ಪಟೇಲರು ಬಿಟ್ರಿಷರ ಕಾಲದಲ್ಲಿ ಅರಿದು ಹಂಚಿ ಹೋಗಿದ್ದ 562 ರಾಜ್ಯಗಳನ್ನು ಸ್ವಾತಂತ್ರ್ಯ ನಂತರ ಒಟ್ಟು ಗೂಡಿಸುವ ಮೂಲಕ ಒಂದು ಸಮಗ್ರವಾದ ಭಾರತವನ್ನು ನಿರ್ಮಿಸಿಕೊಟ್ಟರು.
ಇಂದು ಭಾರತ ಸಮಗ್ರತೆ ಹಾಗೂ ಭದ್ರತೆಯಿಂದ ಕೂಡಿದೆ ಎಂದರೆ ಅದಕ್ಕೆ ಪಟೇಲರು ಕಾರಣ. ಅವರು ಹಾಕಿಕೊಟ್ಟ ಭದ್ರ ಬುನಾದಿಯಿಂದ ನಾವುಗಳು ಸರ್ವಶಕ್ತರಾಗಿದ್ದೇವೆ.
ಈಗಾಗೀ ನಮ್ಮ ಜೀವನದಲ್ಲಿ ನಾವೇಲ್ಲರೂ ದೇಶದ ಭದ್ರತೆಗೆ ಕೈಜೋಡಿಸಿ ನಮ್ಮದೇ ಆದ ಕಾಣಿಕೆಯನ್ನು ರಾಷ್ಟ್ರಕ್ಕೆ ನೀಡಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ
ಅಪರ ಜಿಲ್ಲಾಧಿಕಾರಿಗಳಾದ ಟಿ.ಯೋಗೇಶ್, ಎಲ್ಲ ಧರ್ಮದ ಗುರುಗಳು, ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಭಾಗವಹಿಸಿದರು.

Share

About Bora nayak BIG TV NEWS, Mandya

Check Also

ರಾಜ್ಯ ಸರ್ಕಾರದಿಂದ ರೈತ ಸಮುದಾಯಕ್ಕೆ `ಶುಭಸುದ್ದಿ

ಮಂಡ್ಯ : ರಾಜ್ಯ ಸರ್ಕಾರವು ರೈತರಿಗೆ ಸಿಹಿಸುದ್ದಿ ನೀಡಲು ಮುಂದಾಗಿದ್ದು, ರಾಜ್ಯದಲ್ಲಿ ಯಶಸ್ವಿನಿ ಯೋಜನೆಯನ್ನು ಮತ್ತೆ ಜಾರಿಗೆ ತರಲು ಚಿಂತನೆ …

Leave a Reply

Your email address will not be published. Required fields are marked *

error: Content is protected !!