Breaking News
Hiring Reporter’s For more Information Contact Above Number 876 225 4007 . Program producer
Home / ಜಿಲ್ಲೆ / ಕರ್ನಾಟಕ / ರಾಜಕೀಯ ಮಾಡದೇ ನೆರೆ ಸಂತ್ರಸ್ತರಿಗೆ ಸ್ಪಂದಿಸೋಣ : ಕುಮಾರಸ್ವಾಮ

ರಾಜಕೀಯ ಮಾಡದೇ ನೆರೆ ಸಂತ್ರಸ್ತರಿಗೆ ಸ್ಪಂದಿಸೋಣ : ಕುಮಾರಸ್ವಾಮ

ಹುಬ್ಬಳ್ಳಿ,ಅ.28- ಬಿಜೆಪಿಯ ನೆರೆ ವಿಚಾರದಲ್ಲಿ ನಿರ್ಲಕ್ಷ್ಯ ಮಾಡದೇ, ಸರಿಯಾದ ಮಾಹಿತಿಯನ್ನು ಜನರಿಗೆ ತಿಳಿಸುವ ಕೆಲಸ ಮಾಡಬೇಕು ಅದನ್ನು ಬಿಟ್ಡು ಕೆಲವರು ಸರ್ಕಾರದಲ್ಲಿ ಹಣವಿದೆ ಎಂದರೆ ಇನ್ನೂ ಕೆಲವರು ಖಜಾನೆ ಖಾಲಿ ಆಗಿದೆ ಎನ್ನುತ್ತಾರೆ ಕೂಡಲೇ ಈ ಬಗ್ಗೆ ಸ್ಪಷ್ಟನೆ ನೀಡಲಿ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಹೇಳಿದರು.
ನಗರದಲ್ಲಿಂದು ಸುದ್ದಿಗಾರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಸುರಿದ ಮಳೆಗೆ ಜಲಾಶಯ ಸೇರಿದಂತೆ ಕೆರೆ ಕಟ್ಟೆ, ಹಳ್ಳ – ಕೋಳಗಳೇಲ್ಲಾ ತುಂಬಿ ಹರಿದಿವೆ. ಪರಿಣಾಮ ದೊಡ್ಡ ಮಟ್ಟದ ಪ್ರವಾಹ ಉಂಟಾಗಿ ಅಪಾರ ಪ್ರಮಾಣದ ಬೆಳೆಹಾನಿ, ಮನೆ ಹಾನಿ ಆಗಿವೆ. ಇದರಿಂದಾಗಿ ದೊಡ್ಡ ಮಟ್ಟದಲ್ಲಿ ನಿರಾಶ್ರಿತರ ಸಂಖ್ಯೆ ಇದೆ. ಈ ಸಮಯದಲ್ಲಿ ಸರ್ಕಾರದ ವಿರುದ್ಧ ಟೀಕೆ ಮಾಡುವುದಿಲ್ಲ‌. ಬದಲಾಗಿ ಅವರಿಗೆ ಕೆಲ ಸಮಯ ನೀಡಬೇಕು. ಇನ್ನೂ ಸರ್ಕಾರದ ಖಜಾನೆ ಕೆಲ ಸಚಿವರು ಖಾಲಿ ಆಗಿದೆ ಎಂದು ಹೇಳಿಕೆ ನೀಡುತ್ತಿದ್ದರೇ, ಮತ್ತೆ ಕೆಲವರು ಇಲ್ಲಾ ಖಜಾನೆಯಲ್ಲಿ ಬೇಕಾಗುವಷ್ಟು ಹಣವಿದೆ ಎಂದು ಹೇಳುತ್ತಾರೆ. ಅಲ್ಲದೇ ಸಿಎಂ ಬಿಎಸ್ ವೈ ಕೂಡಾ ಸರ್ಕಾರದ ಆರ್ಥಿಕ ಸ್ಥೀತಿ ಚೆನ್ಮಾಗಿದೆ ಎಂದು ಹೇಳುವ ಅವರು ಮತ್ತೆ ಕೆಲವು ಕಡೆ ಇಲ್ಲಾ ಅಂತಾರೆ ಇದರಿಂದಾಗಿ ರಾಜ್ಯದ ಬಿಜೆಪಿ ಸರ್ಕಾರ ನಿಜವಾಗಿಯೂ ನಿರಾಶ್ರಿತರಿಗೆ ಸಹಾಯ ಮಾಡುತ್ತಾರಾ ಎಂಬ ಪ್ರಶ್ನೆ ಕಾಡುತ್ತಿದೆ. ಕೂಡಲೇ ಜನರಿಗೆ ಸರ್ಕಾರ ಸ್ಪಷ್ಟ ಮಾಹಿತಿ ನೀಡಲಿ ಎಂದು ಆಗ್ರಹಿಸಿದರು.
ಇನ್ನೂ ರವಿವಾರ ಬೆಳಗಾವಿ ಜಿಲ್ಲೆಗೆ ಭೇಟಿ ನೀಡಿ ಅಲ್ಲಿನ ವಸ್ತು ಸ್ಥಿತಿ ಅರಿತುಕೊಂಡಿದ್ದೇನೆ. ಕೇವಲ ಕಾಟಾಚಾರಕ್ಕೆ ರಾಜಕೀಯ ಮಾಡಲು ಬೆಳಗಾವಿಗೆ ಭೇಟಿ ನೀಡಿಲ್ಲ. ನಿರಾಶ್ರಿತರು ಸರ್ಕಾರದ ಬಗ್ಗೆ ಹೊಂದಿರುವ ನಿರೀಕ್ಷೆ ಹಾಗೂ ಕಷ್ಟಗಳನ್ನು ತಿಳಿದುಬಂದಿದ್ದೇನೆ. ಈ ಸಮಯದಲ್ಲಿ ಸರ್ಕಾರ ಬಿಳಿಸುವ ಕೆಲಸ ಮಾಡುವುದಿಲ್ಲ. ಮೊದಲು ಮಳೆಯಿಂದ ಹಾನಿಯಾಗಿರುವ ಕುಟುಂಬಗಳಿಗೆ ಸಹಾಯ ಒದಗಿಸುವ ಕೆಲಸ ಆಗಲಿ ಎಂದರು.
‌‌‌‌ ಡಿ.5 ರಂದು ಉಪಚುನಾವಣೆ ಎಂದು ಮಾಹಿತಿ ಬಂದಿದ್ದು, ಆ ಸಮಯದಲ್ಲಿ ಯಾರೇ ಗೆದ್ದು ಸರ್ಕಾರ ಯಾವುದೇ ಬಂದರು. ಮುಖ್ಯಮಂತ್ರಿ ಯಾರೇ ಆದರು ಮನೆ ಕಳೆದುಕೊಂಡವರಿಗೆ ಸೂರು ಕಲ್ಪಿಸುವ ಕೆಲಸ ಮಾಡಬೇಕು. ಅಂತವರಿಗೆ ನನ್ನ ಸಂಪೂರ್ಣ ಶಕ್ತಿಯನ್ನು ಕೊಡುತ್ತೇನೆ. ನಾನು ಯಾವುದೇ ಕೇಸ್ ನಲ್ಲಿ ಸಿಲುಕಿಕೊಳ್ಳುತ್ತೇನೆ ಎಂದು ಹೆದರಿ ಈ ಕೆಲಸ ಮಾಡುತ್ತಿಲ್ಲ. ನನಗೆ ಜನರ ಸಂಕಷ್ಟ ಪರಿಹಾರ ಆಗಬೇಕು. ಅಲ್ಲದೇ ನಾನು ಯಾರ ಮುಂದೆ ಭಿಕ್ಷೆ ಕೇಳಲ್ಲಾ. ಫೋನ್ ಟ್ಯಾಪಿಂಗ್, ಐಎಮ್ ಎ ಯಾವುದೇ ಖನಿಖೆ ಮಾಡಲಿ ನಾನು ಸಿದ್ದ, ಅಲ್ಲದೇ ಐಎಮ್ ಎ ನನಗೂ ಯಾವುದೇ ಸಂಬಂಧವಿಲ್ಲ. ಜನರು ನನ್ನನ್ನು ಬೀದಿಯಲ್ಲಿ ಮಲಗಿಸಿದ್ದಾರೆ. ಕಬ್ಬಿನದ ಗದ್ದೆಯಲ್ಲೂ ಮಲಗಿಸಿದ್ದಾರೆ ಎಂದರು.
ಇನ್ನೂ ನೆರೆ ಪರಿಹಾರ ವಿಚಾರವಾಗಿ ಶಾಶ್ವತ ಪರಿಹಾರ ಮಾಡಬೇಕು ಎಂದು ಹೇಳುವುದು ಜೊತೆಗೆ ನೆರೆ ಸಂತ್ರಸ್ತರಿಗೆ ಮನೆ ಕಟ್ಟಲು ಒಂದು ಲಕ್ಷ ಮತ್ತು ಐದು‌ ಲಕ್ಷ ಕೊಡತ್ತೇನೆ ಎಂದು ಹೇಳುವುದು ದುಡ್ಡು ಹೊಡೆಯುವ ಕೆಲಸವಾಗಿದೆ.‌ಆ ರೀತಿ ಮಾಡಬಾರದು ಕೊಡಗಿನಲ್ಲಿ ನೆರೆ ಬಂದಾಗ ನಾವು ತೆಗೆದುಕೊಂಡ ಕ್ರಮ ಅನುಸರಿಸಿ ವಸತಿ ಸೌಲಭ್ಯ ಒದಗಿಸಬೇಕು. ಗ್ರಾಮಗಳನ್ನು ಸಂಪೂರ್ಣ ಸ್ಥಳಾಂತರ ಮಾಡಬೇಕು. ಅದಕ್ಕಾಗಿ ಸರಿಯಾದ ಯೋಜನೆ ರೂಪಿಸಬೇಕು. ಈ ಸಮಯದಲ್ಲಿ ರಾಜಕೀಯ ಮಾಡದೇ ಮೂರು ಪಕ್ಷಗಳು ಒಂದಾಗಿ ಕೆಲಸ ಮಾಡಬೇಕು. ಈ ಬಗ್ಗೆ ಚರ್ಚಿಸಲು ಸಿಎಂ ಭೇಟಿಗೆ ಸಮಯ‌ ಕೇಳುತ್ತೇನೆ. ನೊಂದ ಜನರಿಗಾಗಿ ಕೆಳಗೆ ಇಳಿಯಲು ನಾನು ಸಿದ್ದ ಎಂದರು.
ಧಾರವಾಡ ಜಿಲ್ಲೆಯಲ್ಲಿಯೇ ಅತಿ ಹೆಚ್ಚು ಸಾಲಮನ್ನಾ: ಧಾರವಾಡ ಜಿಲ್ಲೆಯಲ್ಲಿಯೇ ಅತಿ ಹೆಚ್ಚು ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿನ ಸಾಲಮನ್ನಾ ಆಗಿದ್ದು, ಈ ಮೂಲಕ‌ ಅದೆಷ್ಟೋ ರೈತರು ಸಾಲಮನ್ನಾದಿಂದ ನಾವು ಬದುಕ್ಕಿದ್ದೇವೆ ಎಂದು ಹೇಳಿದ್ದಾರೆ. ಇನ್ನೂ ಸಾಲಮನ್ನಾ ವನ್ನು ನನ್ನ ಅಧಿಕಾರದ ಅವಧಿಯಲ್ಲಿ ರಾಜ್ಯ ಸರ್ಕಾರದ ತೆರಿಗೆ ಹಣದಲ್ಲಿ ಮಾಡಿದ್ದು, ಇನ್ನೂ ಐದು ಸಾವಿರ ಕೋಟಿ ರೂಪಾಯಿ ಸರ್ಕಾರದ ಬಳಿ ಇದೆ ಎಂದರು. ಸಾಲಮನ್ನಾ ಕುರಿತು ಪುಸ್ತಕವನ್ನೇ ಮಾಡಿದ್ದೇನೆ. ಇನ್ನೂ ಸಿದ್ದರಾಮಯ್ಯ ಹಸಿದ ಹೊಟ್ಟೆಗೆ ಅನ್ನ, ಬಟ್ಟೆ ಕೊಟ್ಟಿದ್ದೇನೆ ಎಂದು ಹೇಳುವ ಅವರು ಕೇವಲ ಐದು ಕೆಜಿ ಅಕ್ಕಿ ಕೊಟ್ಟಿದ್ದಾರೆ. ಮುಂದೆ ನಾನು ಅಧಿಕಾರದಲ್ಲಿ ಇದ್ದಾಗ ಎರಡು ಕೆಜಿಗೆ 800 ಕೋಟಿ ರೂಪಾಯಿ ವೆಚ್ಚ ಮಾಡಿದ್ದೇವೆ. ಅಲ್ಲದೇ ನೀರಾವರಿ ಇಲಾಖೆಗೆ ಸಿದ್ದರಾಮಯ್ಯ 8000 ಕೋಟಿ ಇಟ್ಟಿದ್ರು, ನಾವು ಒಂದು ಲಕ್ಷ ಎರಡು ಸಾವಿರ ನೀಡಿದ್ದೇವೆ. ರೈತರ ಸಾಮಮನ್ನಾಗಾಗಿ ಎಲ್ಲವನ್ನೂ ಸಹಿಸಿಕೊಂಡು ಬಂದಿದ್ದೆ. ಅದಕ್ಕಾಗಿ ಸಮ್ಮಿಶ್ರ ಸರ್ಕಾರ ಉಳಿಸಿಕೊಂಡು ಬಂದೆ. ಸಾಲಮನ್ನಾ ಕೆಲಸ ಮುಗಿದ ಮೇಲೆ ಸಂತೋಷದಿಂದ ಸರ್ಕಾರ ಬಿಟ್ಟು ಕೊಟ್ಟಿದ್ದೇನೆ ಎಂದರು.

ಬಾಕ್ಸ್

ಅನ್ಯ ರಾಜಕಾರಣಿಗಳಿಗೆ ಹೊಲಿಸಬೇಡಿ

ನನಗೆ ಅನ್ಯ ರಾಜಕಾರಣಿಗಳ‌ ಜೊತೆಗೆ ಹೋಲಿಸಬೇಡಿ ನಾನೇ ಬೇರೆ, ಭಾವನಾತ್ಮಕ ರಾಜಕಾರಣಿ, ಸ್ವಲ್ಪ ಮಟ್ಟಿಗೆ ಮಾನವೀಯತೆ ಇಟ್ಟುಕೊಂಡಿರುವ ರಾಜಕಾರಣಿ, ನಾನು ರಾಜಕೀಯ ನಿವೃತ್ತಿ ತೆಗೆದುಕೊಳ್ಳಲು ನಿರ್ಧಾರ ಮಾಡಿದ್ದೆ. ಆದರೆ ನನ್ನ ನಂಬಿದ ಬಡ ಜನರಿಗಾಗಿ ಮತ್ತೆ ರಾಜಕಾರಣದಲ್ಲಿ ಮುಂದುವರೆಯಲು ನಿರ್ಧಾರ ಮಾಡಿದ್ದೇನೆ ಎಂದರು.

Share

About solaragoppa

Check Also

ವಿನಯ ಕುಲಕರ್ಣಿ ಬಂಧನ-ರಾಜಕೀಯ ಪ್ರೇರಿತ: ಬಿ.ಕೆ.ಹರಿಪ್ರಸಾದ

ಧಾರವಾಡ: ಮಾಜಿ ಸಚಿವ ವಿನಯ ಕುಲಕರ್ಣಿಯವರನ್ನ ಸಿಬಿಐ ಬಂಧನ ಮಾಡಿದ್ದು ರಾಜಕೀಯ ದುರುದ್ದೇಶದಿಂದ ಎಂದು ವಿಧಾನಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ ಹೇಳಿದರು. …

Leave a Reply

Your email address will not be published. Required fields are marked *

error: Content is protected !!