Hiring Reporter’s For more Information Contact Above Number 876 225 4007 . Program producer
Home / Breaking News / ಲಂಡನ್‌ : ಎಲ್ಲ ಮಾದರಿ ಕೊರೊನಾ ವೈರಸ್‌ಗಳಿಗೆ ಸಂಭಾವ್ಯ ಲಸಿಕೆ

ಲಂಡನ್‌ : ಎಲ್ಲ ಮಾದರಿ ಕೊರೊನಾ ವೈರಸ್‌ಗಳಿಗೆ ಸಂಭಾವ್ಯ ಲಸಿಕೆ

Spread the love

ಲಂಡನ್‌: ಕೋವಿಡ್‌-19 ಜೊತೆಗೆ ಭವಿಷ್ಯದಲ್ಲಿ ಪ್ರಾಣಿಗಳಿಂದ ಮನುಷ್ಯರಿಗೆ ಹರಡಬಹುದಾದ ಎಲ್ಲ ಮಾದರಿಯ ಕೊರೊನಾ ವೈರಾಣುಗಳಿಗೆ ಸಂಭಾವ್ಯ ಲಸಿಕೆಯ ಪ್ರಯೋಗಕ್ಕೆ ಕೇಂಬ್ರಿಜ್‌ ವಿಶ್ವವಿದ್ಯಾಲಯ ಚಿಂತನೆ ನಡೆಸಿದೆ.

ಬಾವಲಿಗಳಿಂದ ಹರಡುವ ಕೊರೊನಾ ವೈರಾಣು ಸೇರಿದಂತೆ ಸಾರ್ಸ್‌ ರೀತಿಯ ಎಲ್ಲ ಮಾದರಿಯ ಕೊರೊನಾ ವೈರಾಣುಗಳ ಧಾತುವಿನ ಅಂಶಗಳನ್ನು ಅಧ್ಯಯನ ನಡೆಸಿ ಹೊಸ ಸಂಭಾವ್ಯ ಲಸಿಕೆ ‘ಡಿಯೋಸ್‌-ಕೊವಾಕ್ಸ್‌ 2’ ಅನ್ನು ತಯಾರಿಸಲಾಗಿದ್ದು, ಎಲ್ಲ ಹಂತದ ಪ್ರಯೋಗಗಳಲ್ಲಿ ಯಶಸ್ವಿಯಾದರೆ ಯಾವುದೇ ಚುಚ್ಚುಮದ್ದಿನ ಬಳಕೆ ಮಾಡದೆ ‘ಜೆಟ್‌ ಇಂಜೆಕ್ಷನ್‌’ ಮುಖಾಂತರ ಚರ್ಮದೊಳಗೆ ಸೇರಿಸಬಹುದು ಎಂದು ಕೇಂಬ್ರಿಜ್‌ ವಿ.ವಿ ತಿಳಿಸಿದೆ.

‘ಕೋವಿಡ್‌-19 ವೈರಾಣುವಿನ 3ಡಿ ಮಾದರಿಯ ಮೂಲಕ, ಈ ವೈರಾಣುವಿಗೇ ಹೋಲುವ ಇತರೆ ಕೊರೊನಾ ವೈರಾಣುಗಳನ್ನು ಅಧ್ಯಯನ ನಡೆಸಿ, ಮುಂದೆ ಪ್ರಾಣಿಗಳಿಂದ ಹರಡಬಹುದಾದ ಪಿಡುಗನ್ನು ತಡೆಯುವುದೇ ಇದರ ಉದ್ದೇಶವಾಗಿದೆ’ ಎಂದು ಕೇಂಬ್ರಿಜ್‌ನ ಭಾಗವಾಗಿರುವ ಡಿಯೊಸಿನ್‌ವ್ಯಾಕ್ಸ್‌ ಕಂಪನಿಯ ಸಂಸ್ಥಾಪಕ ಪ್ರೊ.ಜೋನಥನ್‌ ಹಿನೀ ಹೇಳಿದರು.

Check Also

ವಾಹನ ಸವಾರರಿಗೆ ಮತ್ತೊಂದು ಗುಡ್ ನ್ಯೂಸ್

Spread the loveಮೋಟಾರು ವಾಹನ ನಿಯಮಗಳಲ್ಲಿ ಕೇಂದ್ರ ಸರ್ಕಾರ ಬದಲಾವಣೆ ತಂದಿದ್ದು ಅಕ್ಟೋಬರ್ 1 ರಿಂದ ವಾಹನ ನಿಯಮಗಳಲ್ಲಿ ಬದಲಾವಣೆಯಾಗಲಿದೆ. …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Hiring Reporter’s For more Information Contact Above Number 876 225 4007 . Program producer
error: Content is protected !!