Breaking News
Hiring Reporter’s For more Information Contact Above Number 876 225 4007 . Program producer
Home / Breaking News / ಫೆಬ್ರುವರಿಯಲ್ಲಿ ತೆರೆಗೆ ಅಪ್ಪಳಿಸಲಿದೆ ಉತ್ತರ ಕರ್ನಾಟಕ ಸೊಗಡಿನ ಮದುವೆ ಮಾಡ್ರಿ ಸರಿ ಹೋಗ್ತಾನೆ ಚಿತ್ರ..

ಫೆಬ್ರುವರಿಯಲ್ಲಿ ತೆರೆಗೆ ಅಪ್ಪಳಿಸಲಿದೆ ಉತ್ತರ ಕರ್ನಾಟಕ ಸೊಗಡಿನ ಮದುವೆ ಮಾಡ್ರಿ ಸರಿ ಹೋಗ್ತಾನೆ ಚಿತ್ರ..

Spread the love

ಹುಬ್ಬಳ್ಳಿ: ಸಂಪೂರ್ಣ ಉತ್ತರ ಕರ್ನಾಟಕದ ಪ್ರತಿಭೆಗಳಿಂದಲೇ ಚಿತ್ರಿತಗೊಂಡಿರುವ ಎಸ್.ಎಸ್.ಡಿ‌. ಪ್ರೊಡಕ್ಷನ್ ನಿರ್ಮಾಣದ ಬಹುನಿರೀಕ್ಷಿತ ಮದುವೆ ಮಾಡಿ ಸರಿ ಹೋಗ್ತಾನೆ ಚಿತ್ರ ಫೆಬ್ರುವರಿಯಲ್ಲಿ ತೆರೆಗೆ ಅಪ್ಪಳಿಸಲು ಸಿದ್ದವಾಗಿದೆ ಎಂದು ನಿರ್ದೇಶಕರಾದ ಗೋಪಿ ಕೆರೂರ್ ತಿಳಿಸಿದರು.

ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕದ ಹೆಮ್ಮೆ ಆಗಿರುವ ಉತ್ತರ ಕರ್ನಾಟಕದ ಪ್ರತಿಭೆಗಳನ್ನೇ ಒಳಗೊಂಡು ಸಿದ್ದಪಡಿಸಿರುವ ಚಿತ್ರ ಇದಾಗಿದ್ದು, ‌ಉತ್ತರ ಕರ್ನಾಟಕದ ಖಡಕ್ ಸಂಭಾಷಣೆ ಚಿತ್ರದ ಹೈಲೆಟ್ ಆಗಿದೆ ಎಂದು ತಿಳಿಸಿದರು.

ಯಾರ ಮಾತನ್ನೂ ಕೇಳದ ಹಾಗೂ ಉಡಾಳತನವನ್ನೇ ಮೈಗೂಡಿಸಿಕೊಂಡಿರುವ ಹಳ್ಳಿ ಹೈದನ(ನಾಯಕ) ಚೇಷ್ಟೆಗಳ ಸಮಗ್ರ ಚಿತ್ರಣವನ್ನು ಒಳಗೊಂಡಿರುವ ಚಿತ್ರ ಇದಾಗಿದ್ದು, ನಾಯಕನ ಕುಚೇಷ್ಟೆಗೆ ಬೇಸತ್ತು ಅವನಿಗೆ ಮದುವೆ ಮಾಡಲು ನಿರ್ಧರಿಸುತ್ತಾರೆ. ಮದುವೆ ಬಳಿಕವಾದರೂ ಆತ ಸರಿ ಹೋಗುತ್ತಾನಾ ಎಂಬುದೇ ಚಿತ್ರದ ಒಂದೆಳೆ ಕತೆಯಾಗಿದೆ.

ಅಲ್ಲದೇ ಪ್ರೀತಿಯಲ್ಲಿ ಬಿದ್ದ ನಾಯಕ ಊರಿನ ಜನರಿಂದ ಶೋಷಣೆಗೂ ಸಹ ಒಳಗಾಗುತ್ತಾನೆ. ಕೊನೆಗೆ ಅದೇ ಜನರ ಪ್ರೀತಿಯನ್ನು ಹೇಗೆ ಗಳಿಸುತ್ತಾನೆ ಎಂಬುದೇ ಚಿತ್ರದ ಹೈಲೆಟ್ ಆಗಿದೆ ಎಂದರು.

ಸುಮಾರು ೧೦೦ ಕ್ಕೂ ಹೆಚ್ಚು ಚಿತ್ರ ಮಂದಿರದಲ್ಲಿ ಪ್ರದರ್ಶನಗೊಳ್ಳಲಿದೆ ಎಂದರು.ಚಿತ್ರದಲ್ಲಿ ಒಟ್ಟು 11 ಹಾಡುಗಳಿದ್ದು, ಈಗಾಗಲೇ ರಿಲೀಸ್ ಆದ ಹಾಡುಗಳು ಜನಮೆಚ್ಚುಗೆಗೆ ಪಾತ್ರವಾಗಿರುವುದು ಸಂತಸಕ್ಕೆ ಪಾರವೇ ಇಲ್ಲದಂತಾಗಿದೆ ಎಂದರು.

ಮದುವೆ ಮಾಡ್ರಿ ಸರಿ ಹೋಗ್ತಾನೆ ಎಂಬ ಸಿನಿಮಾ ಉತ್ತರ ಕರ್ನಾಟಕದಲ್ಲಿ ಚಿತ್ರಿಕರಣಗೊಂಡಿದ್ದು, ಸಿನಿಮಾ ಉತ್ತಮವಾಗಿ ಮೂಡಿ ಬರಲಿದ್ದು, ಕರ್ನಾಟಕದ ಜನತೆ ಸಿನಿಮಾ ಮೆಚ್ಚಿ ಅಪ್ಪುತ್ತಾರೆಂದು ತಿಳಿಸಿದರು.

ಸಿನಿಮಾದ ನಾಯಕ ನಟನಾಗಿ ಶಿವಚಂದ್ರಕುಮಾರ್, ನಾಯಕಿಯಾಗಿ ಅರಾಧ್ಯ, ರಮೇಶ ಭಟ್, ಅರುಣ್ ಬಾಲರಾಜ್, ಮಿಮಿಕ್ರಿ ಗೋಪಿ, ಚಿತ್ಕಳ ಬಿರಾದಾರ, ಮೂರ್ತಿ ಸೇರಿದಂತೆ ಉತ್ತಮ ಕಲಾವಿದರನ್ನು ಹೊಂದಿದ ಸಿನಿಮಾ ಇದಾಗಿದೆ ಎಂದರು.ಸಿನಿಮಾ ಸಂಗೀತವನ್ನು ಅವಿನಾಶ್ ಬಾಸೂತ್ಕರ್, ಸಾಹಿತ್ಯ ಕೆ. ಕಲ್ಯಾಣ, ಡಾ. ವಿ. ನಾಗೇಂದ್ರ ಪ್ರಸಾದ್, ಗೋಪಿ ಕೆರೂರ್, ಛಾಯಾಗ್ರಹಣ. ಸುರೇಶ ಬಾಬು ಒಳಗೊಂಡಂತ ಸಿನಿಮಾ ಇದಾಗಿದ್ದು, ನಿರ್ಮಾಣ ಜವಾಬ್ದಾರಿಯನ್ನು ಶಿವರಾಜ್ ದೇಸಾಯಿ ಹೊತ್ತೊದ್ದಾರೆ ಎಂದು ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ನಾಯಕ ನಟ ಶಿವಚಂದ್ರಕುಮಾರ್, ನಟಿ ಆರಾಧ್ಯ, ಶಿವರಾಜ್ ದೇಸಾಯಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Check Also

Featured Video Play Icon

ಯರಗುಪ್ಪಿ ಮುಖ್ಯ ರಸ್ಥೆಯಲ್ಲಿ ಗುಂಡಿಗಳದೇ ಕಾರುಬಾರು

Spread the love

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Hiring Reporter’s For more Information Contact Above Number 876 225 4007 . Program producer
error: Content is protected !!