Breaking News
Hiring Reporter’s For more Information Contact Above Number 876 225 4007 . Program producer
Home / ಜಿಲ್ಲೆ / ಕರ್ನಾಟಕ / ಮಂಡ್ಯದಲ್ಲಿ ಮಹದೇಶ್ವರಸ್ವಾಮಿಯ ವಾರ್ಷಿಕ ಪೂಜಾಮಹೋತ್ಸವ

ಮಂಡ್ಯದಲ್ಲಿ ಮಹದೇಶ್ವರಸ್ವಾಮಿಯ ವಾರ್ಷಿಕ ಪೂಜಾಮಹೋತ್ಸವ

ಮಂಡ್ಯ:- ಇಲ್ಲಿನ ನಾಗಮಂಗಲ ರಸ್ತೆಯಲ್ಲಿರುವ ಶ್ರೀ ಮಹದೇಶ್ವರಸ್ವಾಮಿ ದೇವಸ್ಥಾನದಲ್ಲಿ ವಾರ್ಷಿಕ ಪೂಜಾಮಹೋತ್ಸವವನ್ನು ಜಾನಪದ ಕಲಾ ತಂಡಗಳ ಭವ್ಯ ಮೆರವಣಿಗೆಯೊಂದಿಗೆ ಅದ್ದೂರಿಯಾಗಿ ಆಚರಿಸಲಾಯಿತು.

ಈ ವೇಳೆ ಮಹದೇಶ್ವರರ ಉತ್ಸವವನ್ನು ಭಕ್ತರು ಭಕ್ತಿಯಿಂದ ದೇವಿರಮ್ಮಣ್ಣಿ ಕೆರೆ ಏರಿಯ ಬಸವನಕಟ್ಟೆಯ ಆವರಣದಲ್ಲಿ ಶ್ರೀ ಮಹದೇಶ್ವರರ ನಾಗಾಭರಣಕ್ಕೆ ಅಭಿಷೇಕ ನಡೆಸಿ. ವಿಶೇಷವಾಗಿ  ಪೂಜೆ ಸಲ್ಲಿಸಿ ಲೋಕಕಲ್ಯಾಣಕ್ಕಾಗಿ ಪ್ರಾರ್ಥಿಸಲಾಯಿತು.

ಇನ್ನೂ ಇದೇ ಸಂದರ್ಭದಲ್ಲಿ ನೂರಾರು ಮಕ್ಕಳಿಗೆ ನಾಮಕರಣ ಮಾಡಿದ ದೇವಾಲಯದ  ಪ್ರಧಾನ ಅರ್ಚಕರಾದ ಪ್ರಕಾಶ್ ಮಾಡಿದರು. ಪಟ್ಟಣದ ಮುಖ್ಯ ರಸ್ತೆಯಲ್ಲಿ ಮಲೈ ಮಹದೇಶ್ವರರ ಉತ್ಸವಮೂರ್ತಿಯ ಭವ್ಯ ಮೆರವಣಿಗೆಯು ಜಾನಪದ ಕಲಾತಂಡಗಳು, ಗಾರುಡಿಗೊಂಬೆಗಳ ನೃತ್ಯ, ವೀರಭದ್ರ ನೃತ್ಯ, ಕೋಲಾಟ, ಡೊಳ್ಳು ಕುಣಿತ ಸೇರಿದಂತೆ ತೆರೆದ ವಾಹನದಲ್ಲಿ ಪುಷ್ಪಾಲಂಕಾರದೊಂದಿಗೆ ನಡೆಯಿತು. ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸಿದ್ದ ನೂರಾರು ಭಕ್ತರು, ಮುತ್ತೈದೆಯರು ಉತ್ಸವದಲ್ಲಿ ಭಾಗವಹಿಸಿ ದೇವರ ಕೃಪೆಗೆ ಪಾತ್ರರಾದರು. ಶ್ರೀ ಬಸವೇಶ್ವರ ಕಲ್ಲುಮಠದ ಶ್ರೀಗಳಾದ ವಿರೂಪಾಕ್ಷ ರಾಜಯೋಗಿಗಳು ನೆರೆದಿದ್ದ ಭಕ್ತರನ್ನು ಆಶೀರ್ವದಿಸಿದರು. ಕೃಷ್ಣರಾಜಪೇಟೆ ಪಟ್ಟಣದ ರಾಜಬೀದಿಗಳು ತಳಿರು ತೋರಣಗಳಿಂದ ಸಿಂಗಾರಗೊಳಿಸಿದ್ದು ವಿಶೇಷವಾಗಿತ್ತು.

Share

About solaragoppa

Check Also

ವಕೀಲರ ಬಳಿ ಮತಯಾಚನೆ

ಮಂಡ್ಯ ಜಿಲ್ಲಾ ಕೃಷ್ಣರಾಜಪೇಟೆ ಪಟ್ಟಣದ ನ್ಯಾಯಾಲಯದಲ್ಲಿ ವಕೀಲರ ಬಳಿ ಮತಯಾಚನೆ ಮಾಡಿದ ಬಿಜೆಪಿ ಅಭ್ಯರ್ಥಿ ಡಾ.ನಾರಾಯಣಗೌಡ. ಮನೆ ಮನೆಯ ಭೇಟಿ …

Leave a Reply

Your email address will not be published. Required fields are marked *

error: Content is protected !!