Breaking News
Home / Breaking News / ಕ್ಯಾತೆ ತೆಗೆದ ಮಹಾರಾಷ್ಟ್ರ ಸಿಎಂ.

ಕ್ಯಾತೆ ತೆಗೆದ ಮಹಾರಾಷ್ಟ್ರ ಸಿಎಂ.

Spread the love

ಮುಂಬೈ: ಮರಾಠಿ ಮಾತನಾಡುವ ಜನರು ಬಹುಸಂಖ್ಯೆಯಲ್ಲಿರುವ ಕರ್ನಾಟಕದ ಪ್ರದೇಶಗಳನ್ನು ರಾಜ್ಯಕ್ಕೆ ಸೇರಿಸಲು ತಮ್ಮ ಸರ್ಕಾರ ಬದ್ಧವಾಗಿದೆ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಉದ್ಧಟತನದ ಹೇಳಿಕೆ ನೀಡಿದ್ದಾರೆ. ಇದು ಹುತಾತ್ಮರಿಗೆ “ನಿಜವಾದ ಗೌರವ” ಎಂದು ಮುಖ್ಯಮಂತ್ರಿಗಳ ಕಚೇರಿ ಟ್ವೀಟ್​ನಲ್ಲಿ ತಿಳಿಸಿದೆ.

ಕೇಂದ್ರ ಗೃಹ ಸಚಿವ ಅಮಿತ್​ ಶಾ ಕರ್ನಾಟಕ ಪ್ರವಾಸ ಕೈಗೊಂಡಿರುವ ಸಂದರ್ಭದಲ್ಲಿ ಈ ರೀತಿ ಹೇಳಿಕೆ ನೀಡಿರುವುದು ಗೊಂದಲಕ್ಕೀಡು ಮಾಡಿದೆ.

ಹಿಂದಿನ ಬಾಂಬೆ ಪ್ರೆಸಿಡೆನ್ಸಿಯ ಭಾಗವಾದ, ಆದರೆ ಪ್ರಸ್ತುತ ಕರ್ನಾಟಕದಲ್ಲಿ ಭಾಷಾವಾರು ಆಧಾರದ ಮೇಲೆ ಬೆಳಗಾವಿ ಮತ್ತು ಇತರ ಕೆಲವು ಪ್ರದೇಶಗಳನ್ನು ಮಹಾರಾಷ್ಟ್ರ ತಮ್ಮದು ಎಂದು ಮಹಾರಾಷ್ಟ್ರ ಸರ್ಕಾರ ಹೇಳಿಕೊಂಡಿದೆ. ಬೆಳಗಾವಿ ಮತ್ತು ಮಹಾರಾಷ್ಟ್ರದ ಕೆಲವು ಗಡಿ ಪ್ರದೇಶಗಳ ವಿಲೀನಕ್ಕಾಗಿ ಹೋರಾಡುವ ಪ್ರಾದೇಶಿಕ ಸಂಘಟನೆಯಾದ ಮಹಾರಾಷ್ಟ್ರ ಏಕೀಕರಣ್​ ಸಮಿತಿ, ಜನವರಿ 17 ಅನ್ನು, 1956ರಲ್ಲಿ ಈ ಕಾರಣಕ್ಕಾಗಿ ತಮ್ಮ ಪ್ರಾಣವನ್ನು ಅರ್ಪಿಸಿದವರಿಗೆ “ಹುತಾತ್ಮರ ದಿನ” ಎಂದು ಆಚರಿಸಿದೆ.

“ಮಹಾರಾಷ್ಟ್ರದಲ್ಲಿ ಕರ್ನಾಟಕ ಆಕ್ರಮಿತ ಮರಾಠಿ ಮಾತನಾಡುವ ಮತ್ತು ಸಾಂಸ್ಕೃತಿಕ ಪ್ರದೇಶಗಳನ್ನು ಮತ್ತೆ ತರುವುದು ಗಡಿ ಯುದ್ಧದಲ್ಲಿ ಹುತಾತ್ಮರಾದವರಿಗೆ ಸಲ್ಲಿಸುವ ನಿಜವಾದ ಗೌರವವಾಗಿದೆ. ಈ ಭರವಸೆಯೊಂದಿಗೆ ಹುತಾತ್ಮರಿಗೆ ಗೌರವ ಎಂದು ಸಿಎಂಒ ಟ್ವೀಟ್ ಮಾಡಿದ್ದಾರೆ.

ಕರ್ನಾಟಕದ ಭಾಗವಾಗಿರುವ ಬೆಳಗಾವಿ, ಕಾರವಾಡ ಮತ್ತು ನಿಪ್ಪಾಣಿ ​​ಸೇರಿದಂತೆ ಕೆಲವು ಪ್ರದೇಶಗಳನ್ನು ಮಹಾರಾಷ್ಟ್ರ ತಮ್ಮದು ಎಂದು ಹೇಳಿಕೊಂಡಿದೆ. ಈ ಪ್ರದೇಶಗಳಲ್ಲಿ ಹೆಚ್ಚಿನ ಜನಸಂಖ್ಯೆಯು ಮರಾಠಿ ಮಾತನಾಡುವವರು ಎಂದು ವಾದಿಸುತ್ತಾರೆ. ಬೆಳಗಾವಿ ಮತ್ತು ಇತರ ಗಡಿ ಪ್ರದೇಶಗಳ ಕುರಿತು ಉಭಯ ರಾಜ್ಯಗಳ ನಡುವಿನ ವಿವಾದವು ಹಲವು ವರ್ಷಗಳಿಂದ ಸುಪ್ರೀಂಕೋರ್ಟ್ ಮುಂದೆ ಬಾಕಿ ಇದೆ.

ಗಡಿ ವಿವಾದಕ್ಕೆ ಸಂಬಂಧಿಸಿದ ಪ್ರಕರಣವನ್ನು ತ್ವರಿತಗೊಳಿಸಲು ರಾಜ್ಯ ಸರ್ಕಾರದ ಪ್ರಯತ್ನಗಳ ಮೇಲ್ವಿಚಾರಣೆಗೆ ಠಾಕ್ರೆ ಕಳೆದ ವರ್ಷ ಮಹಾರಾಷ್ಟ್ರ ಮಂತ್ರಿಗಳಾದ ಏಕನಾಥ್ ಶಿಂಧೆ ಮತ್ತು ಛಗ್ಗನ್​ ಭುಜ್ಬಾಲ್ ಅವರನ್ನು ಸಹ ಸಂಯೋಜಕರಾಗಿ ನೇಮಕ ಮಾಡಿದರು.

About Admin BIG TV NEWS

Check Also

Featured Video Play Icon

ಎಲ್ಲಡೆ ಶಿವನ ಆರಾಧನೆ ಭಕ್ತಿಯಲ್ಲಿ ಮಿಂದೆದ್ದ ಹುಬ್ಬಳ್ಳಿಯ ಜನರು | MAHA SHIVARATRI | BIG TV NEWS

Spread the love

Leave a Reply

Your email address will not be published. Required fields are marked *

error: Content is protected !!