Hiring Reporter’s For more Information Contact Above Number 876 225 4007 . Program producer
Home / Breaking News / ದಲಿತರ ಮೇಲೆ ಸಾಮೂಹಿಕ ಬಹಿಷ್ಕಾರ

ದಲಿತರ ಮೇಲೆ ಸಾಮೂಹಿಕ ಬಹಿಷ್ಕಾರ

Spread the love

ದಲಿತರ ಮೇಲೆ ದೌರ್ಜನ್ಯ

ಹುಬ್ಬಳ್ಳಿ: ಅದು ಹಲವು ವರ್ಷಗಳಿಂದ ಗ್ರಾಮದಲ್ಲಿ ನೆಲೆನಿಂತ ಕುಟುಂಬ. ಆ ಕುಟುಂಬದ ಮೇಲಿಂದ ಮೇಲೆ ದೌರ್ಜನ್ಯ ನಡೆಯುತ್ತಲೇ ಇದೆ. ಹಲ್ಲೆಗೊಳಗಾದಗೊಮ್ಮೆ ಅಧಿಕಾರಿಗಳ ಬಳಿ ಗೋಳು ತೋಡಿಕೊಳ್ಳುವ ಕುಟುಂಬಸ್ಥರಿಗೆ ನ್ಯಾಯ ಸಿಗುತ್ತಿಲ್ಲ. ಹೀಗಾಗಿ ಕುಟುಂಬಸ್ಥರು ಅಕ್ಷರಶಃ ಬೀದಿಗೆ ಬಿದ್ದಿದ್ದಾರೆ. ಸಾಮೂಹಿಕ ಬಹಿಷ್ಕಾರದಿಂದ ಕುಟುಂಬಸ್ಥರು ಕಣ್ಣೀರಿಡುತ್ತಲಿದ್ದಾರೆ….

ಹೀಗೆ ದೃಶ್ಯಗಳಲ್ಲಿ ಕಣ್ಣೀರಿಡುತ್ತ, ಅಸಮಾಧಾನ ಹೊರಹಾಕುತ್ತಿರೋ ಈ ಕುಟುಂಬಸ್ಥರು, ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ವಿಠಲಾಪುರ ಗ್ರಾಮದ ನಿವಾಸಿಗಳು. ವಿಠಲಾಪುರದಲ್ಲಿ ಹಲವು ವರ್ಷಗಳಿಂದ ನೆಲೆ ನಿಂತಿರೋ ಈ ದಲಿತ ಕುಟುಂಬದ ಮೇಲೆ ಸವರ್ಣಿಯರು ಹಲ್ಲೆ ಮಾಡುತ್ತಿದ್ದಾರೆ ಅನ್ನೋ ಆರೋಪ ಕೇಳಿಬಂದಿದೆ. ಹೌದು. ಲಕ್ಷ್ಮವ್ವ ಹರಿಜನ ಹಾಗೂ ಅವರ ಕುಟುಂಬದ ಮೇಲೆ ದಿನದಿಂದ ದಿನಕ್ಕೆ ಹಲ್ಲೆ ಮಾಡಲಾಗುತ್ತಿದ್ದು, ಇದರಿಂದ ಕುಟುಂಬಸ್ಥರು ಕಂಗಾಲಾಗಿದ್ದಾರೆ. ದಿನನಿತ್ಯ ಮನೆಯ ಮುಂದೆ ಸತ್ತ ನಾಯಿ, ಬೆಕ್ಕುಗಳ ಶವವನ್ನು ತಂದು ಒಗೆದು ಹಿಂಸೆ ನೀಡುತ್ತಿದ್ದಾರೆ. ನಾವು ಇರೋ ಜಾಗದಲ್ಲಿ ಸವರ್ಣಿಯರು ಸಿದಿಗೆ ಇಟ್ಟಿದ್ದು, ನಮ್ಮನ್ನು ಅಲ್ಲಿಂದ ಓಡಿಸಲು ಯತ್ನಿಸುತ್ತಿದ್ದಾರೆ. ಈ ಹಿಂದೆ ಕೂಡ ನಮ್ಮ ಮೇಲೆ ಹಲ್ಲೆ ಮಾಡಿ, ದೌರ್ಜನ್ಯವೆಸಗಿದ್ದರು. ಹೀಗಾಗಿ ಪೊಲೀಸರು ಮತ್ತು ಜಿಲ್ಲಾಧಿಕಾರಿಗಳ ಮೊರೆ ಹೋದರು ಯಾವುದೇ ಪ್ರಯೋಜನ ಆಗುತ್ತಿಲ್ಲ. ನಮಗೆ ನ್ಯಾಯ ಬೇಕು ಎಂದು ಕುಟುಂಬಸ್ಥರು ಗೋಳು ತೋಡಿಕೊಂಡಿದ್ದಾರೆ.

2019 ರ ಫೆಬ್ರವರಿಯಲ್ಲಿ ಈ ಹರಿಜನ ಕುಟುಂಬದ ಮೇಲೆ ಸವರ್ಣಿಯರು ಹಲ್ಲೆ ನಡೆಸಿದ್ದರು. ಈ ಹಲ್ಲೆಗೆ ಸಂಬಂಧಿಸಿದಂತೆ ಹಲವು ಬಾರಿ ಮನವಿ ಸಲ್ಲಿಸಿದಾಗ ಜಿಲ್ಲಾಧಿಕಾರಿ ದೀಪಾ ಚೋಳನ, ಗ್ರಾಮಕ್ಕೆ ಭೇಟಿ ನೀಡಿ ಕ್ರಮ ಕೈಗೊಳ್ಳಲು ಭರವಸೆ ನೀಡಿದ್ದರು. ಆದರೆ, ಹಲ್ಲೆ ನಡೆಸಿದ್ದ ಹದಿನೈದು ಜನರಲ್ಲಿ ಕೇವಲ ಐದು ಜನರನ್ನು ಬಂಧಿಸಿದ್ದ ಪೊಲೀಸರು, ಪ್ರಕರಣದ ತನಿಖೆ ಮುಂದುವರೆಸೋದಾಗಿ ಹೇಳಿ ಕೈ ಚೆಲ್ಲಿದ್ದರು. ಅಲ್ಲದೇ ಜಿಲ್ಲಾಧಿಕಾರಿ ದೀಪಾ ಚೋಳನ ಬದಲಾವಣೆಯಾದ ಬೆನ್ನಲ್ಲೆ ಇದೀಗ ದಲಿತ ಕುಟುಂಬದ ಮೇಲೆ ಮತ್ತೆ ದೌರ್ಜನ್ಯ ಹೆಚ್ಚಾಗಿದೆ. ದಿನನಿತ್ಯ ಇಲ್ಲದ ಕಿರುಕುಳ ನೀಡುತ್ತಿರೋ ಆರೋಪ ಕೇಳಿ ಬರುತ್ತಿದೆ. ಹೀಗಾಗಿ ಕುಟುಂಬಸ್ಥರ ನೆರವಿಗೆ ಸಮತಾಸೇನೆ ನಿಂತಿದೆ. ಅಲ್ಲದೇ ಕುಟುಂಬಕ್ಕೆ ಜಿಲ್ಲಾಡಳಿತ, ಜಿಲ್ಲಾ ಉಸ್ತುವಾರಿ ಸಚಿವರು ನ್ಯಾಯ ಒದಗಿಸಬೇಕು. ದೌರ್ಜನ್ಯಕ್ಕೊಳಗಾದ ಕುಟುಂಬಸ್ಥರಿಗೆ ಪರಿಹಾರ ನೀಡಲು ಒತ್ತಾಯಿಸಿದ್ದಾರೆ. ಅಲ್ಲದೇ ಪರಿಹಾರ ನೀಡಲು ಹದಿನೈದು ದಿನಗಳ ಗಡವು ನೀಡಿದ್ದು, ಸಮಸ್ಯೆ ಪರಿಹರಿಸದಿದ್ದರೆ ಉಗ್ರ ಹೋರಾಟದ ಎಚ್ಚರಿಕೆ ನೀಡಿದ್ದಾರೆ.

ಇದೆಲ್ಲವನ್ನೂ ಕಂಡ ಕಾಣದಂತಿರುವ ಜಿಲ್ಲಾಡಳಿತ, ಜನಪ್ರತಿನಿಧಿಗಳ ನಿರ್ಲಕ್ಷ್ಯದ ವಿರುದ್ಧ ಅಸಮಾಧಾನ ವ್ಯಕ್ತವಾಗಿದ್ದು, ಉಗ್ರ ಹೋರಾಟದ ಎಚ್ಚರಿಕೆಯನ್ನು ಸಮತಾಸೇನೆ ನೀಡಿದೆ. ಆದರೆ, ಸಾಹಿತಿಗಳ ತವರೂರು, ವಿದ್ಯಾಕಾಶಿ, ಸುಶಿಕ್ಷಿತರ ಜಿಲ್ಲೆ ಎಂದೇ ಪ್ರಸಿದ್ಧಿ ಹೊಂದಿರೋ ಧಾರವಾಡ ಜಿಲ್ಲೆಯಲ್ಲಿ ಸಾಮೂಹಿಕ ಬಹಿಷ್ಕಾರ, ದಲಿತರ ಮೇಲಿನ ಹಲ್ಲೆಗಳು ನಡೆಯುತ್ತಲೇ ಇರೋದು ವಿಪರ್ಯಾಸವೇ ಸರಿ.

Check Also

ವಾಣಿಜ್ಯ ನಗರದಲ್ಲಿ ಹೆಚ್ಚಾಗುತ್ತಿರುವುದು ಬೈಕ್ ಕಳ್ಳತನ… ಸಾರ್ವಜನಿಕರೇ ಎಚ್ಚರ ಎಚ್ಚರ

Spread the loveಹುಬ್ಬಳ್ಳಿ: ನಗರದಲ್ಲಿ ಮನೆಗಳ ಮುಂದೆ ಹಾಗೂ ಪಾರ್ಕಿಂಗ್ ಜಾಗದಲ್ಲಿ ಪಾರ್ಕ್ ಮಾಡಿದ ದ್ವಿಚಕ್ರಗಳ ವಾಹನಗಳನ್ನು ಕಳ್ಳತನ ಮಾಡುತ್ತಿದ್ದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Hiring Reporter’s For more Information Contact Above Number 876 225 4007 . Program producer
error: Content is protected !!