Breaking News
Hiring Reporter’s For more Information Contact Above Number 876 225 4007 . Program producer
Home / ಜಿಲ್ಲೆ / ಮಂಡ್ಯ / ಯಶಸ್ವಿಯಾಗಿ ನಡೆದ ಬೃಹತ್ ಆರೋಗ್ಯ ಮೇಳ.

ಯಶಸ್ವಿಯಾಗಿ ನಡೆದ ಬೃಹತ್ ಆರೋಗ್ಯ ಮೇಳ.

ಮಂಡ್ಯ; ಕೃಷ್ಣರಾಜಪೇಟೆ ಪಟ್ಟಣದ ಕರ್ನಾಟಕ ಪಬ್ಲಿಕ್ ಸ್ಕೂಲ್ ಆವರಣದಲ್ಲಿ ಮಂಡ್ಯ ಜಿಲ್ಲಾಡಳಿತವು ಅನರ್ಹಶಾಸಕ ಡಾ.ನಾರಾಯಣಗೌಡರ ನೇತೃತ್ವದಲ್ಲಿ ಆಯೋಜಿಸಿದ್ದ ಬೃಹತ್ ಆರೋಗ್ಯ ಮೇಳವು ನಿರೀಕ್ಷೆಗೂ ಮೀರಿ ಯಶಸ್ಸನ್ನು ಕಂಡಿತು. ನಾಡಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಉಪಮುಖ್ಯಮಂತ್ರಿ ಅಶ್ವತ್ಥನಾರಾಯಣ, ಜಿಲ್ಲಾ ಉಸ್ತುವಾರಿ ಸಚಿವರಾದ ಆರ್.ಅಶೋಕ್ ಹೆಲಿಕಾಪ್ಟರ್ ನಲ್ಲಿ ಆಗಮಿಸಿ ಇಂದಿನ ಆರೋಗ್ಯಮೇಳ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಇಂದಿನ ಬಿಡುವಿಲ್ಲದ ಒತ್ತಡದ ನಡುವೆ ಶಾಸಕ ನಾರಾಯಣಗೌಡ ಅವರಿಗೆ ಕೊಟ್ಟ ಮಾತಿನಂತೆ ಆರೋಗ್ಯ ಮೇಳಕ್ಕೆ ಬಂದಿದ್ದೇನೆ. ಕೃಷ್ಣರಾಜಪೇಟೆ ಶಾಸಕರು ಹೃದಯವಂತರು, ತಾಲೂಕಿನ ಅಭಿವೃದ್ಧಿಗೆ ಬದ್ಧರಾಗಿರುವವರು, ಬದಲಾದ ರಾಜಕಾರಣದಲ್ಲಿ ತಾಲೂಕಿನ ಅಭಿವೃದ್ಧಿಗಾಗಿ ತಮ್ಮ ಶಾಸಕ ಸ್ಥಾನವನ್ನೇ ತ್ಯಾಗ ಮಾಡಿದ್ದಾರೆ. ಮಂಡ್ಯ ಕೃಷ್ಣರಾಜಪೇಟೆ ಜಿಲ್ಲೆಯಲ್ಲಿಯೇ ಮಾದರಿಯಾಗಿ ಅಭಿವೃದ್ಧಿಯಾಗಬೇಕು ಎಂಬುದು ನನ್ನ ಆಸೆಯೂ ಆಗಿದೆ. ಮಂಡ್ಯ ಕೃಷ್ಣರಾಜಪೇಟೆ ಪಟ್ಟಣದ 100ಹಾಸಿಗೆಗಳ ಆಸ್ಪತ್ರೆಯನ್ನು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಾಗಿ ಮೇಲ್ದರ್ಜೆಗೆ ಏರಿಸಿ
ಅಭಿವೃದ್ಧಿ ಮಾಡುವುದು, ನರ್ಸಿಂಗ್ ಕಾಲೇಜಿನ ಸ್ಥಾಪನೆ, ಶಾಶ್ವತ ಕುಡಿಯುವ ನೀರಿನ ಯೋಜನೆಗಳು, ಶೀಳನೆರೆ ಏತನೀರಾವರಿ ಯೋಜನೆಯ ಅನುಷ್ಠಾನ ಸೇರಿದಂತೆ ತಾಲೂಕಿನಲ್ಲಿ ಆಗಲೇಬೇಕಾಗಿರುವ ಕೆಲಸ ಕಾರ್ಯಗಳನ್ನು ಅನುಷ್ಠಾನ ಮಾಡಲಾಗುವುದು.ನಿಮ್ಮ ಮನೆ ಮಗ ಯಡಿಯೂರಪ್ಪನ ಕೈಬಲಪಡಿಸಲು ನಾರಾಯಣಗೌಡರಿಗೆ ಮತ್ತೊಮ್ಮೆ ಶಕ್ತಿ ತುಂಬಿ ಶಾಸಕರನ್ನಾಗಿ ಆಶೀರ್ವಾದ ಮಾಡಿ. ಮತ್ತೊಮ್ಮೆ ತಾಲೂಕಿಗೆ ಆಗಮಿಸಿ ಭಾರೀ ಜನಸ್ತೋಮವನ್ನು ಉದ್ಧೇಶಿಸಿ ಭಾಷಣ ಮಾಡ್ತೇನೆ ಎಂದರು.
ತುರ್ತಾಗಿ ಬೆಂಗಳೂರಿಗೆ ಹೋಗಬೇಕಾಗಿದೆ ಮತ್ತೊಮ್ಮೆ ಬರ್ತೇನೆ ಎಂದು ಬೆಂಗಳೂರಿನ ಕಡೆಗೆ ಹೊರಟರು.

ಬೆಳ್ಳಿ ಖಡ್ಗ ಸಮರ್ಪಣೆ: ಸಮಾರಂಭದಲ್ಲಿ ಅನರ್ಹಶಾಸಕ ನಾರಾಯಣಗೌಡ ಅವರು ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಮೈಸೂರು ಪೇಟ ತೊಡಿಸಿ ಕಾಮಧೇನುವಿನ ಬೃಹತ್ ಗಾತ್ರದ ನೆನಪಿನ ಕಾಣಿಕೆ ನೀಡಿ, ಬೆಳ್ಳಿ ಖಡ್ಗವನ್ನು ಸಮರ್ಪಿಸಿ ಅನರ್ಹಶಾಸಕ ಡಾ.ನಾರಾಯಣಗೌಡ ಸನ್ಮಾನಿಸಿ ಗೌರವಿಸಿದರು.
ಸಂಸದೆ ಸುಮಲತಾ ಅಂಬರೀಶ್ ಮಾತನಾಡಿ ರೈತರ ಜೀವನಾಡಿಗಳಾದ ಮೈಷುಗರ್ ಮತ್ತು ಪಿ.ಎಸ್.ಎಸ್.ಕೆ ಸಕ್ಕರೆ ಕಾರ್ಖಾನೆಗಳನ್ನು ಆರಂಭಿಸಿ ಕಬ್ಬು ಬೆಳೆಗಾರರ ಸಂಕಷ್ಟಗಳನ್ನು ದೂರ ಮಾಡಬೇಕು ಎಂದು ಮುಖ್ಯಮಂತ್ರಿಗಳನ್ನು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್, ಜಿಪಂ ಸಿಇಓ ಯಾಲಕ್ಕಿಗೌಡ, ಜಿಲ್ಲಾ ಬಿಜೆಪಿ ಅಧ್ಯಕ್ಷ ನಾಗಣ್ಣಗೌಡ, ಬಿಜೆಪಿ ರಾಜ್ಯಮುಖಂಡ ಡಾ. ಸಿದ್ಧರಾಮಯ್ಯ, ಶ್ರೀಮತಿ ದೇವಕಿ ನಾರಾಯಣಗೌಡ, ತಾಲೂಕು ಬಿಜೆಪಿ ಅಧ್ಯಕ್ಷ ಬೂಕಹಳ್ಳಿ ಮಂಜು, ‌ತಾಲೂಕು ಪಂಚಾಯಿತಿ ಸದಸ್ಯೆ ಮೀನಾಕ್ಷಿ, ಮೂಡಾ ಅಧ್ಯಕ್ಷ ಕೆ.ಶ್ರೀನಿವಾಸ್, ಮನ್ ಮುಲ್ ನಿರ್ದೇಶಕರಾದ ಸ್ವಾಮಿ, ಕೆ.ಜಿ.ತಮ್ಮಣ್ಣ, ಪಾಂಡವಪುರ ಉಪವಿಭಾಗಾಧಿಕಾರಿ ಶೈಲಜಾ ಸೇರಿದಂತೆ ಸಾವಿರಾರು ಜನರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Share

About Bora nayak BIG TV NEWS, Mandya

Check Also

ರಾಜ್ಯ ಸರ್ಕಾರದಿಂದ ರೈತ ಸಮುದಾಯಕ್ಕೆ `ಶುಭಸುದ್ದಿ

ಮಂಡ್ಯ : ರಾಜ್ಯ ಸರ್ಕಾರವು ರೈತರಿಗೆ ಸಿಹಿಸುದ್ದಿ ನೀಡಲು ಮುಂದಾಗಿದ್ದು, ರಾಜ್ಯದಲ್ಲಿ ಯಶಸ್ವಿನಿ ಯೋಜನೆಯನ್ನು ಮತ್ತೆ ಜಾರಿಗೆ ತರಲು ಚಿಂತನೆ …

Leave a Reply

Your email address will not be published. Required fields are marked *

error: Content is protected !!