Breaking News
Hiring Reporter’s For more Information Contact Above Number 876 225 4007 . Program producer
Home / ಜಿಲ್ಲೆ / ಕರ್ನಾಟಕ / ನೈರುತ್ಯ ರೈಲ್ವೆ ಜಿಎಂ ಆಗಿ ಮಿಶ್ರಾ ಅಧಿಕಾರ ಸ್ವೀಕಾರ.

ನೈರುತ್ಯ ರೈಲ್ವೆ ಜಿಎಂ ಆಗಿ ಮಿಶ್ರಾ ಅಧಿಕಾರ ಸ್ವೀಕಾರ.

 

ಹುಬ್ಬಳ್ಳಿ: ನೈರುತ್ಯ ರೈಲ್ವೆ ಹೆಚ್ಚುವರಿ ಪ್ರಧಾನ ವ್ಯವಸ್ಥಾಪಕರಾಗಿ ಪ್ರಶಾಂತಕುಮಾರ ಮಿಶ್ರಾ ಅಧಿಕಾರ ಸ್ವೀಕಾರ ಮಾಡಿದ್ದಾರೆ. 1986 ರ ಬ್ಯಾಚ್ ಅಧಿಕಾರಿಯಾಗಿರುವ ಮಿಶ್ರಾ, ಧನಬಾದ್ ವಿಭಾಗದ ಪತ್ರಾಟು ಡಿಸೇಲ್ ಶೆಡ್ ನಲ್ಲಿ ಸಹಾಯಕ ಮೆಕ್ಯಾನಿಕಲ್ ಎಂಜಿನಿಯರ್ ಆಗಿ ಸೇವೆ ಆರಂಭಿಸಿದ್ದರು. ಹಲವು ಡಿವಿಜನ್ ಗಳ ಮೆಕ್ಯಾನಿಕಲ್ ವಿಭಾಗಗಳಲ್ಲಿ ಸೇವೆ ಸಲ್ಲಿಸಿದ್ದು, ನಂತರ ನಾರ್ಥ್ ಫ್ರಾಂಟಿಯರ್ ರೈಲ್ವೆಯ ಗುವಾಹಟಿಯಲ್ಲಿ ಮುಖ್ಯ ಮೋಟಿವ್ ಪವರ್ ಎಂಜಿನಿಯರ್ ಆಗಿ ಕಾರ್ಯನಿರ್ವಹಿಸಿದ್ದಾರೆ. ಈಸ್ಟರ್ನ್ ರೈಲ್ವೆಯಲ್ಲಿ ವಿಭಾಗೀಯ ವ್ಯವಸ್ಥಾಪಕರಾಗಿ ಅಸನೋಲ್ ನಲ್ಲಿ, ಮಲ್ಡಾ ವಿಭಾಗದಲ್ಲಿ ಡಿಆರ್ ಎಂ ಆಗಿ ಸೇವೆ ಸಲ್ಲಿಸುವ ಸಂದರ್ಭದಲ್ಲಿ 8 ಲಕ್ಷ ಸಸಿ ನೆಟ್ಟಿದಲ್ಲದೇ, 100. ಕಿರುತೋಪು ನಿರ್ಮಿಸಿದ್ದಾರೆ. ಅಲ್ಲದೇ 95 ಮಳೆ ಕೊಯ್ಲು ಘಟಕಗಳನ್ನು ಮಾಡಿದ್ದು , ಅವರ ವಿಶೇಷತೆ, ಪಿ.ಕೆ.ಮಿಶ್ರಾ ಅವರು ಬಿ.ಬಿ.ಸಿಂಗ್ ಅವರ ಸ್ಥಾನ ತುಂಬಿದ್ದಾರೆ. ನೈರುತ್ಯ ರೈಲ್ವೆಯಲ್ಲಿ ಹೆಚ್ಚುವರಿ ಪ್ರಧಾನ ವ್ಯವಸ್ಥಾಪಕರಾಗಿದ್ದ ಬಿ.ಬಿ‌.ಸಿಂಗ್ ಅವರು ದಕ್ಷಿಣ ಕೇಂದ್ರಿಯ ರೈಲ್ವೆ ಸಹಾಯಕ ಪ್ರಧಾನ ವ್ಯವಸ್ಥಾಪಕರಾಗಿ ವರ್ಗಾವಣೆಗೊಂಡಿದ್ದಾರೆ.

Share

About Vijayalakshmi

Check Also

Featured Video Play Icon

ಮಕ್ಕಳ ಶಿಕ್ಷಣಕ್ಕೆ ಕೊಳ್ಳಿ ಇಟ್ಟ ಸೊಸೈಟಿ?? | Children crying to protect their school | BIG TV NEWS

Shaikh BIG TV NEWS, Hubballi See author's posts Share

Leave a Reply

Your email address will not be published. Required fields are marked *

error: Content is protected !!