Breaking News
Hiring Reporter’s For more Information Contact Above Number 876 225 4007 . Program producer
Home / ಜಿಲ್ಲೆ / ಮಂಡ್ಯ / ಮಹಿಳೆ ಕಾಣೆ: ಕೌಟುಂಬಿಕ ಕಲಹ ಶಂಕೆ.

ಮಹಿಳೆ ಕಾಣೆ: ಕೌಟುಂಬಿಕ ಕಲಹ ಶಂಕೆ.

ಶ್ರವಣಬೆಳಗೊಳ: ಹೋಬಳಿಯ ಅರುವನಹಳ್ಳಿ ಗ್ರಾಮದ ರೋಹಿತ್ ಎಂಬವರ ಪತ್ನಿ ದಿವ್ಯರಾಣಿ (27 ವರ್ಷ) ದಿನಾಂಕ 5-11-2019 ಮಂಗಳವಾರ ಸಂಜೆ 5 ಗಂಟೆ ಸಮಯದಲ್ಲಿ ಸುಗ್ಗನಹಳ್ಳಿ ಗೇಟ್ ಬಳಿಯಿಂದ ಕಾಣೆಯಾಗಿದ್ದಾರೆ.ಆರೋಗ್ಯ ಇಲಾಖೆಯಲ್ಲಿ ಕೆಲಸ ನಿರ್ವಹಿಸುವ ರೋಹಿತ್ ಸಾಂಸಾರಿಕ ವಿಷಯವಾಗಿ ಮದ್ಯಪಾನ ಮಾಡಿ ಪತ್ನಿಯೊಂದಿಗೆ ಜಗಳ ಮಾಡುತ್ತಿದ್ದ ಎನ್ನಲಾಗಿದೆ.ಅದೇ ರೀತಿ ಮಂಗಳವಾರ ಸಂಜೆ ಮಂಡ್ಯ ಕಿಕ್ಕೇರಿ ದೇವರಹಳ್ಳಿಯಿಂದ ಅರುವನಹಳ್ಳಿಗೆ ಬರುವ ಸಂದರ್ಭದಲ್ಲಿ ರೋಹಿತ್ ಪತ್ನಿಯೊಂದಿಗೆ ಜಗಳ ಆರಂಭಿಸಿ ಹೊಡೆಯಲು ಮುಂದಾಗಿದ್ದಾನೆ ಎನ್ನಲಾಗಿದೆ. ಇದರಿಂದ ಮನನೊಂದ ದಿವ್ಯರಾಣಿ ಕಾರಿನಿಂದ ಇಳಿದು ನಾಪತ್ತೆಯಾಗಿದ್ದಾರೆ.ಯಾರಿಗಾದರೂ ಸುಳಿವು ಸಿಕ್ಕಲ್ಲಿ ಶ್ರವಣಬೆಳಗೊಳ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕಾಗಿ ಪಿಎಸ್ಐ ಸರೋಜಾಬಾಯಿ ತಿಳಿಸಿದ್ದಾರೆ.

Share

About Bora nayak BIG TV NEWS, Mandya

Check Also

ರಾಜ್ಯ ಸರ್ಕಾರದಿಂದ ರೈತ ಸಮುದಾಯಕ್ಕೆ `ಶುಭಸುದ್ದಿ

ಮಂಡ್ಯ : ರಾಜ್ಯ ಸರ್ಕಾರವು ರೈತರಿಗೆ ಸಿಹಿಸುದ್ದಿ ನೀಡಲು ಮುಂದಾಗಿದ್ದು, ರಾಜ್ಯದಲ್ಲಿ ಯಶಸ್ವಿನಿ ಯೋಜನೆಯನ್ನು ಮತ್ತೆ ಜಾರಿಗೆ ತರಲು ಚಿಂತನೆ …

Leave a Reply

Your email address will not be published. Required fields are marked *

error: Content is protected !!