Breaking News
Hiring Reporter’s For more Information Contact Above Number 876 225 4007 . Program producer
Home / ಜಿಲ್ಲೆ / ಮಂಡ್ಯ / ಕನ್ನಡಿಗರು ಎಂದು ಹೇಳಿಕೊಳ್ಳುವದೇ ಹೆಮ್ಮೆಯ ಸಂಗತಿ: ಶಾಸಕ ಸುರೇಶ್ .

ಕನ್ನಡಿಗರು ಎಂದು ಹೇಳಿಕೊಳ್ಳುವದೇ ಹೆಮ್ಮೆಯ ಸಂಗತಿ: ಶಾಸಕ ಸುರೇಶ್ .

ನಾಗಮಂಗಲ: ಕನ್ನಡಿಗರಾದ ನಾವು ಎಲ್ಲೇ ಇರಲಿ ಹೇಗೆ ಇರಲಿ ನಮ್ಮ ನಾಡು,ನುಡಿ,ನೆಲ,ಜಲ ಮತ್ತು ಸಂಸ್ಕೃತಿ ಎಂಬುದೇ ಹೆಮ್ಮಯ ವಿಚಾರ ಎಂದು ಶಾಸಕ ಸುರೇಶ್ ಗೌಡ ಹೇಳಿದರು.ಪಟ್ಟಣದ ಸೌಮ್ಯಕೇಶವ ಸ್ವಾಮಿ ದೇವಾಲಯದ ಮುಂಭಾಗದಲ್ಲಿ ತಾಲ್ಲೂಕು ಆಡಳಿತದ ವತಿಯಿಂದ ಆಯೋಜಿಸಲಾಗಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಉತ್ತರ ಕರ್ನಾಟಕದ ಜನರು ನೆರೆ ಹಾವಳಿಯಿಂದ ಸಂಕಷ್ಟದಲ್ಲಿದ್ದಾರೆ. ಆದ್ದರಿಂದ ಕನ್ನಡ ರಾಜ್ಯೋತ್ಸವವನ್ನು ಸರಳವಾಗಿ ಆಚರಿಸುತ್ತಿದ್ದೇವೆ.ಕನ್ನಡ ನಾಡನ್ನು ಒಗ್ಗೂಡಿಸಿ ಕರ್ನಾಟಕ ಎಂದು ನಾಮಕರಣ ಮಾಡಲು ಶ್ರಮಿಸಿದ ನಾಡಪ್ರೇಮಿಗಳನ್ನು ನೆನೆಯುವ ದಿನವಾಗದೆ.ನಮ್ಮ ತಾಲ್ಲೂಕಿನಲ್ಲಿ ಮಾರ್ಕೋನಹಳ್ಳಿ ಜಲಾಶಯದಿಂದ ಮಾಡಲಾಗುತ್ತಿರುವ ಬಹುಗ್ರಾಮ ಕುಡಿಯುವ ನೀರು ಯೋಜನೆಯಿಂದ ವಂಚಿತವಾದ ಪ್ರದೇಶಗಳಿಗೆ ಕೆ ಆರ್ ಎಸ್ ನಿಂದ ನೀರು ತರುವ ಯೋಜನೆಯನ್ನು ಮಾಡಲಾಗುತ್ತಿದೆ ಎಂದರು.
ನನ್ನದು ಭಾಷೆ,ನನ್ನದು ನಾಡು ಎನ್ನದವನ ಎದೆ ಸುಡುಗಾಡು ಎಂದು ಕುವೆಂಪು ಅವರು ಹೇಳಿರುವುದು
ಅರ್ಥಪೂರ್ಣವಾಗಿದೆ ಯಾವ ವ್ಯಕ್ತಿ ನಾಡಿನ ಬಗ್ಗೆ ಅಭಿಮಾನ ಹೊಂದಿಲ್ಲವೋ ಅಂತವರು ಬದುಕಿದ್ದು ಸತ್ತಂತೆ. ಅನ್ಯ ಭಾಷೆಗಳ ದಾಳಿಯಿಂದ ನಮ್ಮ ಭಾಷೆಯನ್ನು ಉಳಿಸಿ ಬೆಳೆಸುವ ಕೆಲಸವನ್ನು ನಾಡಿನ ಜನರು ಮತ್ತು ಸರ್ಕಾರ ಮಾಡಬೇಕಾಗಿದೆ.
ಪ್ರಮುಖವಾಗಿ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕನ್ನಡದ ಮತ್ತು ಕನ್ನಡಿಗರ ಸ್ಥಿತಿಯನ್ನು ಅವಲೋಕಿಸಿದರೆ ನಮ್ಮ ಭಾಷೆ ಮತ್ತು ಜನರು ಬೇರೆ ಭಾಷೆಯ ಪ್ರಭಾವಕ್ಕೆ ಒಳಗಾಗಿರುವುದು ತಿಳಿದು ಬರುತ್ತದೆ ಎಂದರು.
ಕನ್ನಡಿಗರು ಕೇವಲ ಆಂಗ್ಲ ಭಾಷೆಯ ವ್ಯಾಮೋಹಕ್ಕೆ ಒಳಗಾಗದೆ ನಮ್ಮ ಮಾತೃಭಾಷೆಯನ್ನು ಪ್ರೀತಿಸುವ ಕೆಲಸವಾಗಬೇಕಿದೆ.
ನಾವು ಎಷ್ಟೇ ಎತ್ತರಕ್ಕೆ ಬೆಳೆದರೂ ,ಏನೇ ಸಾಧನೆ ಮಾಡಿದರೂ ನಮ್ಮ ಬೇರುಗಳು ಕರುನಾಡಿನಲ್ಲಿ ಭದ್ರವಾಗಿ ನೆಲೆಯೂರಿರುತ್ತವೆ ಎಂದರು.
ಜಿಲ್ಲಾಧಿಕಾರಿ ಕಛೇರಿ ನಿಯೋಜಿತ ಚುನಾವಣಾ ಶಾಖೆಯ ತಹಶಿಲ್ದಾರ್ ವಿಜಯಣ್ಣ ಧ್ವಜಾರೋಹಣ ಮಾಡಿದರು.ಕಾರ್ಯಕ್ರಮದಲ್ಲಿ ಪಟ್ಟಣದ ವ್ಯಾಪ್ತಿಯ ಶಾಲೆಗಳ ವಿದ್ಯಾರ್ಥಿಗಳು ಕನ್ನಡ ನಾಡು ನುಡಿಗಳನ್ನು ಕುರಿತ ವೇಷಭೂಷಣದೊಂದಿಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೀಡಿದರು.ಅಲ್ಲದೇ ಪ್ರಸಕ್ತ ವರ್ಷ ಎಸ್ ಎಸ್ ಎಲ್ ಸಿಯಲ್ಲಿ ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿ ತಾಲ್ಲೂಕಿಗೆ ಅತಿ ಹೆಚ್ಚು ಅಂಕ ಪಡೆದ ಲೋಹಿತಾಕ್ಷಿ, ಪ್ರತಿಭಾ,ಸುನೀಲ್ ಗೌಡ ಸುಶ್ಮಿತಾ ಅವರನ್ನು ಸನ್ಮಾನಿಸಲಾಯಿತು.
ತಾಲ್ಲೂಕು ಪಂಚಾಯತಿ ಅಧ್ಯಕ್ಷ ದಾಸೇಗೌಡ,ಕಾರ್ಯನಿರ್ವಾಹಕ ಅಧಿಕಾರಿ ಅನಂತರಾಜು, ಡಿವೈಎಸ್ಪಿ ವಿಶ್ವನಾಥ್, ಬಿಇಒ ಬಿ.ಜಗದೀಶ್,ಮುಖ್ಯಾಧಿಕಾರಿ ಕೃಷ್ಣಪ್ರಸಾದ್ ಮತ್ತು ಪುರಸಭೆ ಸದಸ್ಯರು ಇದ್ದರು.

Share

About Bora nayak BIG TV NEWS, Mandya

Check Also

ರಾಜ್ಯ ಸರ್ಕಾರದಿಂದ ರೈತ ಸಮುದಾಯಕ್ಕೆ `ಶುಭಸುದ್ದಿ

ಮಂಡ್ಯ : ರಾಜ್ಯ ಸರ್ಕಾರವು ರೈತರಿಗೆ ಸಿಹಿಸುದ್ದಿ ನೀಡಲು ಮುಂದಾಗಿದ್ದು, ರಾಜ್ಯದಲ್ಲಿ ಯಶಸ್ವಿನಿ ಯೋಜನೆಯನ್ನು ಮತ್ತೆ ಜಾರಿಗೆ ತರಲು ಚಿಂತನೆ …

Leave a Reply

Your email address will not be published. Required fields are marked *

error: Content is protected !!