Breaking News
Hiring Reporter’s For more Information Contact Above Number 876 225 4007 . Program producer
Home / Breaking News / ಮೊಬೈಲ್ ಬಳಸಬೇಡ ಎಂದಿದ್ದಕ್ಕೆ ತಾಯಿಯನ್ನೇ ಹತ್ಯೆಗೈದ ಯುವಕ

ಮೊಬೈಲ್ ಬಳಸಬೇಡ ಎಂದಿದ್ದಕ್ಕೆ ತಾಯಿಯನ್ನೇ ಹತ್ಯೆಗೈದ ಯುವಕ

Spread the love

ಮಂಡ್ಯ: ಕೊರೋನ ಸೋಂಕು ಹರಡುತ್ತದೆ ಮನೆಯಿಂದ ಹೊರ ಹೋಗಬೇಡ, ಅತಿಯಾಗಿ ಮೊಬೈಲ್ ಬಳಸಬೇಡ ಎಂದು ಹೇಳಿದ ಹೆತ್ತ ತಾಯಿಯನ್ನೇ ಮಗ ಚೂರಿಯಿಂದ ಇರಿದು ಕೊಲೆ ಮಾಡಿರುವ ಘಟನೆ ನಗರದ ಕೆ.ಆರ್.ರಸ್ತೆಯಲ್ಲಿ ಶನಿವಾರ ನಡೆದಿದೆ.

ಶ್ರೀಲಕ್ಷ್ಮಿ (48) ಹತ್ಯೆಗೊಳಗಾದ ತಾಯಿ. ಪುತ್ರ ಮನು ಶರ್ಮಾ ಕೊಲೆ ಮಾಡಿದ ಆರೋಪಿ. ಈತ ಪದವಿ ವ್ಯಾಸಂಗ ಮಾಡುತ್ತಿದ್ದಾನೆ. ಕೊರೋನ ಸಮಯದಲ್ಲಿ ಬೈಕ್ ತೆಗೆದುಕೊಂಡು ಸುತ್ತಾಡಬೇಡ. ಅತಿಯಾಗಿ ಮೊಬೈಲ್​​​ ಬಳಕೆ ಮಾಡಬೇಡ. ಇದರಿಂದ ನಿನಗೆ ತೊಂದರೆ ಆಗಲಿದೆ ಎಂದು ಮಗನಿಗೆ ಬುದ್ದಿವಾದ ಹೇಳಿದ್ದೇ ತಾಯಿ ಕೊಲೆಗೆ ಕಾರಣ ಎನ್ನಲಾಗಿದೆ.

ಈ ಸಂಬಂಧ ದೂರು ಸ್ವೀಕರಿಸಿರುವ ಪಶ್ಚಿಮ ಠಾಣೆ ಪೊಲೀಸರು, ಆರೋಪಿಯನ್ನು ಬಂಧಿಸಿ ತನಿಖೆ ಕೈಗೊಂಡಿದ್ದಾರೆ.

Check Also

ರನ್​ವೇಯಿಂದ ಜಾರಿದ 191 ಪ್ರಯಾಣಿಕರಿದ್ದ ಏರ್​ ಇಂಡಿಯಾ ವಿಮಾನ: ಅಪ್ಪಳಿಸಿದ ರಭಸಕ್ಕೆ ಎರಡು ಭಾಗ!

Spread the loveತಿರುವನಂತಪುರಂ​: ದುಬೈನಿಂದ 191 ಪ್ರಯಾಣಿಕರನ್ನು ಹೊತ್ತು ಕೇರಳ ತಲುಪಿದ ಏರ್​ ಇಂಡಿಯಾ ವಿಮಾನ ಕೋಳಿಕ್ಕೊಡ್​ ವಿಮಾನ ನಿಲ್ದಾಣ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Hiring Reporter’s For more Information Contact Above Number 876 225 4007 . Program producer
error: Content is protected !!