Breaking News
Hiring Reporter’s For more Information Contact Above Number 876 225 4007 . Program producer
Home / ವಾಣಿಜ್ಯ / ಕರ್ನಾಟಕ / ದೇವಾಲಯದ ಕಾಣಿಕೆ ಸಂಗ್ರಹ ಹಣದಲ್ಲಿ ಅವ್ಯವಹಾರ : ಗ್ರಾಮಸ್ಥರಿಂದ ಪ್ರತಿಭಟನೆ

ದೇವಾಲಯದ ಕಾಣಿಕೆ ಸಂಗ್ರಹ ಹಣದಲ್ಲಿ ಅವ್ಯವಹಾರ : ಗ್ರಾಮಸ್ಥರಿಂದ ಪ್ರತಿಭಟನೆ

ಮಂಡ್ಯ:- ತಾಲ್ಲೂಕಿನ ಬಯಲು ಸೀಮೆಯ ಸುಬ್ರಹ್ಮಣ್ಯ ಎಂದೇ ಪ್ರಸಿದ್ದವಾಗಿರುವ ಶ್ರೀ ಕ್ಷೇತ್ರ ಸಾಸಲು ಗ್ರಾಮದ ಶ್ರೀ ಸೋಮೇಶ್ವರ ಮತ್ತು ಶಂಭುಲಿಂಗೇಶ್ವರ  ದೇವಾಲಯವು ಮುಜರಾಯಿ ಇಲಾಖೆಗೆ ಸೇರಿದ್ದು. ದೇವಾಲಯವನ್ನು ಅಭಿವೃದ್ದಿ ಪಡಿಸಬೇಕಾದ ಅಧಿಕಾರಿಗಳೇ ಅಕ್ರಮಗಳಿಗೆ ಬಾಗಿಯಾಗಿದ್ದಾರೆ. ಈ ಬಗ್ಗೆ ಪ್ರೆಶ್ನೆ ಮಾಡಿದ ಗ್ರಾಮದ ಯುವಕರ ಮೇಲೆ ಕೇಸು ದಾಖಲಿಸಿದ್ದಾರೆ ಎಂದು ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.

ಕಾರ್ತಿಕ ಮಾಸದ ವಿಶೇಷ ಪೂಜೆಗೆ ಪ್ರತಿ ವರ್ಷ ಹಾರಾಜು ಪ್ರಕ್ರಿಯೆಯನ್ನು ದೇವಾಲಯದ ಆವರಣದಲ್ಲಿ ಮಾಡಲಾಗುವುದು. ಆದರೆ ಈ ಬಾರಿ  ಬಾರಿ ತಹಶಿಲ್ದಾರ  ಕಛೇರಿಯಲ್ಲಿ ನೆಡೆಸಲಾಗುತ್ತಿದ್ದು ಇದು ಹಲವಾರು ಅನುಮಾನಗಳಿಗೆ ಕಾರಣವಾಗಿದೆ. ತಾಲ್ಲೂಕಿನಲ್ಲೇ ಅತಿ ಹೆಚ್ಚು ಆದಾಯ ಬರುವ ದೇವಾಲಯ ಇದಾಗಿದ್ದು. ವರ್ಷಕ್ಕೆ 20ಲಕ್ಷದವರೇ ಹಣ ಸಂಗ್ರಹ ವಾಗುತ್ತಿದ್ದು. ಆ ಹಣದಲ್ಲಿ ದೇವಾಲಯವನ್ನು ಅಭಿವೃದ್ಧಿ ಪಡಿಸದೆ ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.

ಇನ್ನೂ ಕಳೆದ ವರ್ಷ ಅಧಿಕಾರಿಗಳೇ ನಕಲಿ ಟಿಕೆಟ್ ನೀಡಿ ಹಣ ಸಂಗ್ರಹ ಮಾಡಿದ್ದು ಇದಕ್ಕೆ  ಯಾವುದೇ ಸೀರಿಯಲ್ ನಂ ಅಳವಡಿಸಿರಲಿಲ್ಲ. ಅಲ್ಲದೇ ಎಷ್ಟು ಹಣ ಕಾಣಿಕೆ ಸಂಗ್ರಹವಾಗಿದೆ ಎಂಬ ಮಾಹಿತಿಯನ್ನು ನೀಡುತ್ತಿಲ್ಲ. ಇದರ ಹಿಂದೆ ತಹಶಿಲ್ದಾರ್, ಉಪ ತಹಶಿಲ್ದಾರ್, ರಾಜಸ್ವ ನೀರಿಕ್ಷರು, ಗ್ರಾಮ ಲೆಕ್ಕಾದೀಕಾರಿಗಳ ಕೈವಾಡ ಇದೆ. ಕಾಣಿಕೆ ಸಂಗ್ರಹ ಹಣದ ಲೇಖವನ್ನು ಕೇಳಲು ಹೋದವರ ಮೇಲೆ ಸುಳ್ಳು ಕೇಸು ದಾಖಲಿಸುತ್ತಾರೆ. ಈ ಬಗ್ಗೆ ಕೂಡಲೇ ಉನ್ನತ ಮಟ್ಟದ ತನಿಖೆಯಾಗಬೇಕು. ಅಲ್ಲದೇ ತಪ್ಪಿತಸ್ಥ ಅಧಿಕಾರಿ ವಿರುದ್ದ ಕಾನೂನು ಕ್ರಮ ಜರುಗಿಸಬೇಕು ಎಂದು ಗ್ರಾಮಸ್ಥರುಗಳು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಗ್ರಾಮಸ್ಥರಾದ ಮಹದೇವು, ಗುರುಮೂರ್ತಿ, ರಮೇಶ್, ಆದರ್ಶ, ನಾಗೇಶ್, ಸೇರಿಂದತೆ ನೂರಾರು ಜನರು ಇದ್ದರು.

Share

About solaragoppa

Check Also

ಬಿಕ್ಕಿ ಬಿಕ್ಕಿ ಅತ್ತ ಕಾಂಗ್ರೆಸ್ ಅಭ್ಯರ್ಥಿ ಕೆ.ಬಿ. ಚಂದ್ರಶೇಖರ್

ಮಂಡ್ಯ ಕೆ.ಆರ್.ಪೇಟೆಯಲ್ಲಿ ಮಾಜಿಸಿಎಂ ಸಿದ್ಧರಾಮಯ್ಯ ನೇತೃತ್ವದಲ್ಲಿ ನಡೆದ ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ ಬಿಕ್ಕಿ ಬಿಕ್ಕಿ ಅತ್ತ ಕಾಂಗ್ರೆಸ್ ಅಭ್ಯರ್ಥಿ ಕೆ.ಬಿ.ಚಂದ್ರಶೇಖರ್. …

Leave a Reply

Your email address will not be published. Required fields are marked *

error: Content is protected !!