Breaking News
Hiring Reporter’s For more Information Contact Above Number 876 225 4007 . Program producer
Home / ಜಿಲ್ಲೆ / ಕರ್ನಾಟಕ / ಆಟೋ ಚಾಲಕರಿಗೆ ಕನ್ನಡ ಅಭಿಮಾನ ಹೆಚ್ಚು : ಪೂರ್ತಿ ಸುದ್ದಿ ಇಲ್ಲಿದೆ

ಆಟೋ ಚಾಲಕರಿಗೆ ಕನ್ನಡ ಅಭಿಮಾನ ಹೆಚ್ಚು : ಪೂರ್ತಿ ಸುದ್ದಿ ಇಲ್ಲಿದೆ

ಮಂಡ್ಯ:- ಕನ್ನಡ ಭಾಷೆ, ಕನ್ನಡ ನೆಲಕ್ಕೆ ತನ್ನದೇ ಆದ ಇತಿಹಾಸ ಹೊಂದಿದ್ದು, ಅದನ್ನು ಎಲ್ಲರೂ ಉಳಿಸಿ ಬೆಳೆಸಬೇಕೆಂದು ಜಿಲ್ಲಾ ಪಂಚಾಯತ ಮಾಜಿ ಉಪಾಧ್ಯಕ್ಷ ಕೆ.ಎಸ್.ಪ್ರಭಾಕರ್ ಹೇಳಿದರು.

ನಗರದ ಕಿಕ್ಕೇರಿಯ ಆಟೋ ಚಾಲಕರು ಮತ್ತು ಮಾಲೀಕರ ಸಂಘದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ಮಾಡಿ ಮಾತನಾಡಿದ ಅವರು, ಕನ್ನಡ ಅಭಿಮಾನವನ್ನು ಎಲ್ಲರೂ ಹೊಂದಬೇಕು. ಅಲ್ಲದೇ ಕನ್ನಡ ಅಭಿಮಾನ ಉಳಿದವರಕ್ಕಿಂತ ಆಟೋ ಚಾಲಕರಿಗೆ ಹೆಚ್ಚಿದೆ. ಅಲ್ಲದೇ ಎಲ್ಲರೂ ಕನ್ನಡ ಭಾಷೆಗೆ ಒತ್ತು ನೀಡಬೇಕು. ಕೇವಲ ನವೆಂಬರ್ ತಿಂಗಳಲ್ಲಿ ಮಾತ್ರ ಕನ್ನಡ ರಾಜ್ಯೋತ್ಸವ ಆಚರಣೆ ಮಾಡದೇ ವರ್ಷ ಪೂರ್ತಿ ಕನ್ನಡ ರಾಜ್ಯೋತ್ಸವ ಆಚರಣೆ ಮಾಡಬೇಕೆಂದರು.

ಈ ಸಂದರ್ಭದಲ್ಲಿ ತಾಲ್ಲೂಕು ಪಂಚಾಯಿತಿ ಉಪಾದ್ಯಕ್ಷರಾದ ವಡ್ಡರಹಳ್ಳಿ ರವಿ, ಗ್ರಾಮ ಪಂಚಾಯಿತಿ ಸದಸ್ಯರಾದ ಮಣೀಶ್, ಕಾಯಿ ಮಂಜೇಗೌಡ, ಚಂದ್ರಮೋಹನ್, ಸೇರಿಂದತೆ ಹಲವು ಮುಖಂಡರು, ಆಟೋ ಚಾಲಕರು ಹಾಗೂ ಮಾಲಿಕರುಗಳು ಇದ್ದರು.

Share

About Shaikh BIG TV NEWS, Hubballi

Check Also

ವಕೀಲರ ಬಳಿ ಮತಯಾಚನೆ

ಮಂಡ್ಯ ಜಿಲ್ಲಾ ಕೃಷ್ಣರಾಜಪೇಟೆ ಪಟ್ಟಣದ ನ್ಯಾಯಾಲಯದಲ್ಲಿ ವಕೀಲರ ಬಳಿ ಮತಯಾಚನೆ ಮಾಡಿದ ಬಿಜೆಪಿ ಅಭ್ಯರ್ಥಿ ಡಾ.ನಾರಾಯಣಗೌಡ. ಮನೆ ಮನೆಯ ಭೇಟಿ …

Leave a Reply

Your email address will not be published. Required fields are marked *

error: Content is protected !!