Breaking News
Hiring Reporter’s For more Information Contact Above Number 876 225 4007 . Program producer
Home / Breaking News / ಹಾಸ್ಟೆಲ್ ವಾರ್ಡನ್ ವಿರುದ್ದ ಕೇಸು ದಾಖಲಿಸಿ ಕ್ರಮ ಜರುಗಿಸಬೇಕು: ಬಂಗಾರೇಶ್ ಆಗ್ರಹ.

ಹಾಸ್ಟೆಲ್ ವಾರ್ಡನ್ ವಿರುದ್ದ ಕೇಸು ದಾಖಲಿಸಿ ಕ್ರಮ ಜರುಗಿಸಬೇಕು: ಬಂಗಾರೇಶ್ ಆಗ್ರಹ.

 

ಹುಬ್ಬಳ್ಳಿ: ಹಾನಗಲ್ ಹಾಸ್ಟೆಲ್ ವಿದ್ಯಾರ್ಥಿ ಸಾವಿಗೆ ಕಾರಣವಾದ ಹಾಸ್ಟೆಲ್ ವಾರ್ಡನ್ ವಿರುದ್ದ ಕೊಲೆ ಆರೋಪದ ಕೇಸು ದಾಖಲಿಸಿ ನಿಶ್ ಪಕ್ಷಪಾತವಾಗಿ ತನಿಖೆ ಕೈಕೊಂಡು ತಪ್ಪಿತಸ್ಥರ ವಿರುದ್ದ ಕ್ರಮ ಜರುಗಿಸಬೇಕು. ಜೊತೆಗೆ ಪಾಲಕರಿಗೆ ಸೂಕ್ತ ಪರಿಹಾರ ಒದಗಿಸಬೇಕೆಂದು ಅಖಿಲ ಕರ್ನಾಟಕ ಜಂಗಮ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಬಂಗಾರೇಶ್ ಹಿರೇಮಠ ಆಗ್ರಹಿಸಿದ್ದಾರೆ.
ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹಾನಗಲ್ ಹಾಸ್ಟೆಲ್ ನಲ್ಲಿ ಓದುತ್ತಿದ್ದ ನಗರದ ನೇಕಾರನಗರದ ನಿವಾಸಿ ವಿಜಯ ಹಿರೇಮಠನಿಗೆ ಕ್ಷುಲಕ ಕಾರಣಕ್ಕೆ ಹಾನಗಲ್ ನ ಛಾತ್ರಾಲಯ ಹಾಸ್ಟೆಲ್ ವಾರ್ಡನ್ ಮನಬಂದಂತೆ ಥಳಿಸಿ ಗಾಯಗೊಳಿಸಿ, ಪಾಲಕರಿಗೂ ಮಾಹಿತಿ ನೀಡದೇ ನಿರ್ಲಕ್ಷ್ಯ ವಹಿಸಿದ್ದಾನೆ. ಕೆಲ ದಿನಗಳ ನಂತರ ವಿಜಯನಿಗೆ ಹೊಟ್ಟೆ ನೋವು ಕಾಣಿಸಿಕೊಂಡಿದ್ದು, ಹುಬ್ಬಳ್ಳಿಗೆ ಕಿಮ್ಸ್ ಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಆದರೂ ಇಲ್ಲಿ ಚೇತರಿಸಿಕೊಳ್ಳದ ಕಾರಣ ಅವನಿಗೆ ಉನ್ನತಮಟ್ಟದ ಚಿಕಿತ್ಸೆಗಾಗಿ ಬೆಂಗಳೂರಿಗೆ ಕರೆದ್ಯೊದರು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾನೆ. ಇಷ್ಟೆಲ್ಲಾ ಘಟನೆಗಳು ನಡೆದಿದ್ದರು ಕೂಡಾ ಹಾಸ್ಟೆಲ್ ನ ಅಧಿಕಾರಿಗಳು ಬಂದು ಸ್ಪಂದನೆ ಮಾಡಿಲ್ಲ. ಅಲ್ಲದೇ ಹಾಸ್ಟೆಲ್ ವಾರ್ಡನ್ ವಿರುದ್ಧ ಕ್ರಮ ಕೂಡಾ ತೆಗೆದುಕೊಂಡಿಲ್ಲ. ಇದರಿಂದಾಗಿ ಈ ಪ್ರಕರಣವನ್ನು ಮುಚ್ಚಿ ಹಾಕುವ ಮುನ್ನಾರ ನಡೆಯುತ್ತಿದ್ದು, ಕೂಡಲೇ ಪೋಲಿಸರು ನಿಶಪಕ್ಷಪಾತವಾಗಿ ತನಿಖೆ ಕೈಕೊಂಡು ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಬೇಕು. ಅಲ್ಲದೇ ಸರ್ಕಾರ ಇದನ್ನು ವಿಶೇಷ ಪ್ರಕರಣ ಎಂದು ಪರಿಗಣಿಸಿ ಮೃತ ಪಾಲಕರಿಗೆ ಪರಿಹಾರ ಒದಗಿಸಬೇಕೆಂದು ಆಗ್ರಹಿಸಿದರು.
ಮೃತ ಬಾಲಕನ ತಂದೆ ಮೃತ್ಯುಂಜಯ ಹಿರೇಮಠ ಮಾತನಾಡಿ, ನನ್ನ ಮಗನಿಗೆ ಕ್ಷುಲ್ಲಕ ಕಾರಣಕ್ಕೆ ಮನಬಂದಂತೆ ಥಳಿಸಿ, ಮಾನಸಿಕ ಹಿಂಸೆ ನೀಡಿ ಮಗನ ಸಾವಿಗೆ ಛಾತ್ರಾಲಯ ಹಾಸ್ಟೆಲ್ ವಾರ್ಡನ್ ಶ್ರವಣಕುಮಾರ ನೇರ ಕಾರಣ ಆಗಿದ್ದು, ಕೂಡಲೇ ಅವನ ವಿರುದ್ಧ ಕ್ರಮ ಜರುಗಿಸಬೇಕು. ಅಲ್ಲದೇ ನಮ್ಮ ಮುಂದಿನ ಜೀವನಕ್ಕೆ ನೇರವಾಗಬೇಕಿದ್ದ ಮಗನೇ ಇಲ್ಲದಾಗಿದ್ದು, ಸೂಕ್ತ ಪರಿಹಾರ ಒದಗಿಸಬೇಕೆಂದು ದುಃಖಿತರಾದರು.
ಪತ್ರಿಕಾಗೋಷ್ಠಿಯಲ್ಲಿ ಮೃತ ಬಾಲಕನ ತಾಯಿ ಸುಜಾತಾ ಹಿರೇಮಠ, ಶಾಜಮಾನ ಮುಜಾಹಿದ್, ರಾಜೀವ ಲದ್ವಾ, ಎಲ್ಲಪ್ಪ ಮೆಹರವಾಡೆ, ಬಸವರಾಜ ಮೆನಸಗಿ, ಆನಂದ ಮರಿಗಾಲ್ ಇದ್ದರು.

Share

About Shaikh BIG TV NEWS, Hubballi

Check Also

ಡಿಕೆಶಿ ವಿರುದ್ಧ ಯಡಿಯೂರಪ್ಪ ಹೊಸ ಬಾಂಬ್

ದಾವಣಗೆರೆ: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ವಿರುದ್ಧ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಸ್ಪೋಟಕ ಆರೋಪ ಮಾಡಿದ್ದಾರೆ.ಕೆಪಿಸಿಸಿ ಅಧ್ಯಕ್ಷ ಡಿ.ಕೆ. …

Leave a Reply

Your email address will not be published. Required fields are marked *

error: Content is protected !!