Breaking News
Hiring Reporter’s For more Information Contact Above Number 876 225 4007 . Program producer
Home / Breaking News / ಮಗನಿಂದಲೇ ತಂದೆ ಕೊಲೆ: ಮಗ ಸೇರಿ ಮೂವರ ಬಂಧನ.

ಮಗನಿಂದಲೇ ತಂದೆ ಕೊಲೆ: ಮಗ ಸೇರಿ ಮೂವರ ಬಂಧನ.

 

ಹುಬ್ಬಳ್ಳಿ: ಮಗನೇ ತಂದೆಯನ್ನು ಕೊಲೆ ಮಾಡಿ ಅಪಘಾತ ಎಂಬಂತೆ ಬಿಂಬಿಸಲು ಹೋಗಿ ಪೋಲಿಸರ ಕೈಗೆ ಸಿಕ್ಕಿ ಬಿದ್ದ ಘಟನೆ ನವಲಗುಂದ ತಾಲೂಕಿನ ಜಾವೂರ ಗ್ರಾಮದಲ್ಲಿ ನಡೆದಿದೆ.
ಹನುಮಂತಪ್ಪ ಕಿರೇಸೂರ ಕೊಲೆಯಾದ ವ್ಯಕ್ತಿಯಾಗಿದ್ದು, ಮಗ ರಮೇಶ ಕಿರೇಸೂರ ಕೊಲೆ ಮಾಡಿದ ಮಗನಾಗಿದ್ದಾನೆ. ಮೃತ ಹನುಮಂತಪ್ಪ ಕುಟುಂಬಸ್ಥರಿಗೆ ಪ್ರತಿನಿತ್ಯ ಕಿರುಕುಳ ಕೊಡುತ್ತಿದ್ದ ಎಂಬ ಒಂದೇ ಒಂದು ಕಾರಣಕ್ಕೆ ಅ.27 ರಂದು ಕೊಲೆ ಮಾಡಿ ಜಾವೂರ – ಹಂಚಿನಾಳ ಮಾರ್ಗ ಮಧ್ಯೆದಲ್ಲಿ ಹನುಮಂತ ಶವವನ್ನು ಎಸೆದು. ನಂತರ ಮಗ ರಮೇಶ್ ಕಿರೇಸೂರ ನವಲಗುಂದ ಪೋಲಿಸ ಠಾಣೆಗೆ ಬಂದು ತಂದೆಗೆ ಅಪಘಾತವಾಗಿದೆ ಎಂದು ದೂರು ದಾಖಲಿಸಿದ್ದಾನೆ. ನಂತರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡ ನವಲಗುಂದ ಪೋಲಿಸರು ಸ್ಥಳಕ್ಕೆ ಬಂದು ಪರಿಶೀಲನೆ ಮಾಡುವಾಗ ಶವದ ಸ್ವರೂಪ‌ ನೋಡಿ ಅಪಘಾತವಲ್ಲ, ಕೊಲೆ ಎಂದು ನಿರ್ಧರಿಸಿ ತನಿಖೆ ಕೈಕೊಂಡಿದ್ದರು. ಈ ವೇಳೆ ಕುಟುಂಬಸ್ಥರನ್ನು ವಿಚಾರಣೆ ನಡೆಸುತ್ತಿದ್ದ ವೇಳೆಗೆ ಸತ್ಯ ಹೊರಬಂದಿದ್ದು, ಹನುಮಂತಪ್ಪ ಅವರ ಮಗ ರಮೇಶನೇ ಕೊಲೆ ಮಾಡಿರುವುದು ಬೆಳಕಿಗೆ ಬಂದಿದೆ.‌ ಇನ್ನೂ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ರಮೇಶ ಕಿರೇಸೂರನಿಗೆ ಸಾಥ್ ಸೋದರ ಸಂಬಂಧಿಗಳಾದ ವೆಂಕಪ್ಪ ಮತ್ತು ಸತ್ಯಪ್ಪ ಎಂಬುವವರನ್ನು ಪೋಲಿಸರು ಬಂಧಿಸಿದ್ದು, ಮುಂದಿನ ಕ್ರಮಕ್ಕೆ ಮುಂದಾಗಿದ್ದಾರೆ.

Share

About Shaikh BIG TV NEWS, Hubballi

Check Also

ಡಿಕೆಶಿ ವಿರುದ್ಧ ಯಡಿಯೂರಪ್ಪ ಹೊಸ ಬಾಂಬ್

ದಾವಣಗೆರೆ: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ವಿರುದ್ಧ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಸ್ಪೋಟಕ ಆರೋಪ ಮಾಡಿದ್ದಾರೆ.ಕೆಪಿಸಿಸಿ ಅಧ್ಯಕ್ಷ ಡಿ.ಕೆ. …

Leave a Reply

Your email address will not be published. Required fields are marked *

error: Content is protected !!