Breaking News
Hiring Reporter’s For more Information Contact Above Number 876 225 4007 . Program producer
Home / Breaking News / ಹಣದಾಸೆಗೆ ಪಕ್ಷಕ್ಕೆ ದ್ರೋಹ ಬಗೆದ ನಾರಾಯಣಗೌಡಗೆ ತಕ್ಕ ಪಾಠ ಕಲಿಸಲು ಮತದಾರರಲ್ಲಿ ಮನವಿ ಮಾಡಿದ ಪುಟ್ಟಸ್ವಾಮಿಗೌಡ.

ಹಣದಾಸೆಗೆ ಪಕ್ಷಕ್ಕೆ ದ್ರೋಹ ಬಗೆದ ನಾರಾಯಣಗೌಡಗೆ ತಕ್ಕ ಪಾಠ ಕಲಿಸಲು ಮತದಾರರಲ್ಲಿ ಮನವಿ ಮಾಡಿದ ಪುಟ್ಟಸ್ವಾಮಿಗೌಡ.

 

ಮಂಡ್ಯ : ಕೃಷ್ಣರಾಜಪೇಟೆ ಕ್ಷೇತ್ರದ ಉಪ ಚುನಾವಣೆಯಲ್ಲಿ ಪಕ್ಷಕ್ಕೆ ದ್ರೋಹ ಮಾಡಿ ಹಣದ ದುರಾಸೆ ಬಿದ್ದ ಕೆ ಸಿ ನಾರಾಯಣಗೌಡನಿಗೆ ತಕ್ಕ ಪಾಠ ಕಲಿಸಬೇಕು ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ಪುಟ್ಟಸ್ವಾಮಿಗೌಡರು ತಿಳಿಸಿದರು. ‌
ಜೆ.ಡಿ.ಎಸ್ ಪಕ್ಷದ ಅಭ್ಯರ್ಥಿ ಬಿ.ಎಲ್ ದೇವರಾಜು ಪರವಾಗಿ ದೊಡ್ಡತ್ತಾರಹಳ್ಳಿ, ಚಿಕ್ಕತ್ತಾರಹಳ್ಳಿ ಗ್ರಾಮಗಳ
ಮನೆ ಮನೆಗಳಿಗೆ ತೆರೆಳಿ ಮತ ಬೇಟೆ ನಡೆಸಿ ಮಾತನಾಡಿದ ಅವರು, ಕೆ ಸಿ ನಾರಾಯಣಗೌಡರಿಗೆ ಎರಡು ಬಾರಿ ಕೈ ಹಿಡಿದ ತಾಲ್ಲೂಕಿನ ಜನತೆಗೆ ದ್ರೋಹ ಮಾಡಿದ್ದಾರೆ, ಅಲ್ಲದೆ ಚುನಾವಣೆಗೆ ಹಣದ ಹೊಳೆಯನ್ನೇ ಸುರಿಸುತ್ತಿರುವುದು ತಿಳಿದು ಬಂದಿದೆ. ನಮ್ಮ ತಾಲ್ಲೂಕಿನ ಜನರು ಯಾವುದೇ ಹಣದ ಆಮಿಷಗಳಿಗೆ ಯಾರು ತಮ್ಮ ಹಕ್ಕನ್ನು ಮಾರಿಕೊಳ್ಳುವುದ್ದಿಲ್ಲ ಎಂಬ ನಂಬಿಕೆ ನನಗಿದೆ, ತಾಲ್ಲೂಕಿನಲ್ಲಿ ಉತಮ ಪ್ರತಿಕ್ರಿಯೆ ಇದ್ದು ಎಲ್ಲಾರೋ ಒಗ್ಗಟ್ಟಾಗಿ ಪಕ್ಷ ದ್ರೋಹಿಗೆ ತಕ್ಕ ಉತ್ತರ ನೀಡಬೇಕು ಎಂದು ಮನವಿ ಮಾಡಿದರು.
ಜಿಲ್ಲಾ ಜೆ ಡಿ ಎಸ್ ಹಿರಿಯ ಉಪಾದ್ಯಕ್ಷ ಯು ಧನಂಜಯ ಮಾತನಾಡಿ ಇಂದಿಗೂ ದೇವೇಗೌಡ ಆರ್ಶಿವಾದದಿಂದ ತಾಲ್ಲೂಕಿನ ಜನತೆ ನೆಮ್ಮದಿ ಜೀವನ ನೆಡೆಸುತ್ತಿದ್ದಾರೆ ಅಲ್ಲದ ಸಾಲಾ ಮನ್ನಾ ಯೋಜನೆಯಡಿ ಅಲವಾರು ರೈತರಿಗೂ ಸ ವಾಗಿದ್ದು ಇದನ್ನು ಯಾರೂ ಮರೆಯಬಾರದು ಎಂದರು.
ಎ.ಪಿ ಎಂ ಸಿ ಅದ್ಯಕ್ಷ ಐನೋರಹಳ್ಳಿ ಮಲ್ಲೇಶ್ ಮಾತನಾಡಿ ಬಿ ಎಲ್ ದೇವರಾಜು ಪಕ್ಷದ ನಿಷ್ಠಾವಂತ ಅಲ್ಲದೇ ವೃತ್ತಿಯಲ್ಲಿ ವಕೀಲ. ಇಂತಹ ವ್ಯಕ್ತಿಯನ್ನು ಗಿಲ್ಲಿಸಿದರೆ ತಾಲ್ಲೂಕು ಸಮಗ್ರ ಅಭಿವೃದ್ಧಿಗಾಗಿ ಬಿ ಎಲ್ ದೇವರಾಜು ರವರಿಗೆ ಮತ ನೀಡುವಂತೆ ಮನವಿ ಮಾಡಿದರು.
ಪುಟ್ಟಸ್ವಾಮಿಗೌಡರಿಗೆ ಚುನಾವಣಾ ಪ್ರಚಾರದಲ್ಲಿ
ಎ.ಪಿ ಎಂ ಸಿ ಅದ್ಯಕ್ಷ ಐನೋರಹಳ್ಳಿ ಮಲ್ಲೇಶ್ ತಾಲ್ಲೂಕು ಪಂಚಾಯಿತಿ ಸದಸ್ಯ ಶಾರದಮ್ಮ ಕೃಷ್ಣೇಗೌಡ್ರ,
ಪ್ರಥಮ ದರ್ಜೆ ಗುತ್ತಿಗೆದಾರು ಹಾಗೂ ಜೆ ಡಿ ಎಸ್ ಯುವ ಮುಖಂಡರಾದ ಕಿರಣ್ ಸಾತ್ ನೀಡಿದರು.
ಮುಖಂಡರಾದ ರಾಮಕೃಷ್ಣೇಗೌಡ್ರ, ಬಿ ಎಸ್ ಮಂಜುನಾಥ್, ಉದಯ್ ಶಂಕರ್, ದಿನೇಶ್, ಮಂಜು, ಪರ್ವತರಾಜ್,ಬಾಲಚಂದ್ರು, ನಂಜೇಶ್, ಶಿಶುಪಾಲ್, ಕಾಂತರಾಜು, ನಂಜುಂಡೇಗೌಡ್ರು, ದಾನ್ ಶೇಖರ್, ಬಿ ರಾಮೇಗೌಡ್ರು, ಮತ್ತಿತ್ತರರು ಇದ್ದರು,

Share

About Shaikh BIG TV NEWS, Hubballi

Check Also

ಡಿಕೆಶಿ ವಿರುದ್ಧ ಯಡಿಯೂರಪ್ಪ ಹೊಸ ಬಾಂಬ್

ದಾವಣಗೆರೆ: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ವಿರುದ್ಧ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಸ್ಪೋಟಕ ಆರೋಪ ಮಾಡಿದ್ದಾರೆ.ಕೆಪಿಸಿಸಿ ಅಧ್ಯಕ್ಷ ಡಿ.ಕೆ. …

Leave a Reply

Your email address will not be published. Required fields are marked *

error: Content is protected !!