Breaking News
Hiring Reporter’s For more Information Contact Above Number 876 225 4007 . Program producer
Home / ಕ್ರೀಡೆ / ಕ್ರಿಕೆಟ್ / ಟಿ-20 ಪಂದ್ಯದಲ್ಲಿ ದಾಖಲಾಗಲಿದೆ ನೂತನ ವಿಶ್ವ ದಾಖಲೆ.‌

ಟಿ-20 ಪಂದ್ಯದಲ್ಲಿ ದಾಖಲಾಗಲಿದೆ ನೂತನ ವಿಶ್ವ ದಾಖಲೆ.‌

 

ನವದೆಹಲಿ: ಇಲ್ಲಿನ ಅರುಣ್​ ಜೇಟ್ಲಿ ಮೈದಾನದಲ್ಲಿ ನಾಳೆ ಭಾರತ-ಬಾಂಗ್ಲಾ ತಂಡಗಳ ನಡುವೆ ಮೊದಲ ಟಿ-20 ಪಂದ್ಯ ನಡೆಯಲಿದ್ದು, ಅದಕ್ಕಾಗಿ ಉಭಯ ತಂಡಗಳು ಈಗಾಗಲೇ ಭರ್ಜರಿ ತಯಾರಿ ನಡೆಸಿವೆ. ಟೀಂ ಇಂಡಿಯಾ ಕ್ಯಾಪ್ಟನ್​ ವಿರಾಟ್​ ಕೊಹ್ಲಿ ವಿಶ್ರಾಂತಿ ಪಡೆದುಕೊಂಡಿರುವ ಕಾರಣ, ಟಿ-20 ತಂಡವನ್ನ ಮುನ್ನಡೆಸುವ ಜವಾಬ್ದಾರಿ ಹಿಟ್​​ಮ್ಯಾನ್​ ಖ್ಯಾತಿಯ ರೋಹಿತ್​ ಶರ್ಮಾ ಹೆಗಲ ಮೇಲೆ ಬಿದ್ದಿದೆ. ಇದರ ಜತೆಗೆ ಅವರು, ರನ್​ಮಷಿನ್​ ನಿರ್ಮಾಣ ಮಾಡಿರುವ ರೆಕಾರ್ಡ್​​ವೊಂದನ್ನ ಬ್ರೇಕ್​ ಮಾಡುವ ಸನಿಹದಲ್ಲಿದ್ದಾರೆ. ಈಗಾಗಲೇ ಟಿ-20 ಅಂತಾರಾಷ್ಟ್ರೀಯ ಕ್ರಿಕೆಟ್​​ನಲ್ಲಿ ವಿರಾಟ್​ ಕೊಹ್ಲಿ 67 ಇನ್ನಿಂಗ್ಸ್​​ಗಳಿಂದ 2,450 ರನ್​ಗಳಿಕೆ ಮಾಡಿದ್ದು, ಇದರ ಬೆನ್ನಹಿಂದೆ ಇರುವ ರೋಹಿತ್​ ಶರ್ಮಾ 90 ಇನ್ನಿಂಗ್ಸ್​​ಗಳಿಂದ 2,443ರನ್​ಗಳಿಕೆ ಮಾಡಿದ್ದಾರೆ. ಇದೀಗ ಕೇವಲ 8ರನ್​​ ಬಾರಿಸಿದ್ರೆ ಚುಟುಕು ಕ್ರಿಕೆಟ್​​ನಲ್ಲಿ ಹಿಟ್​​ಮ್ಯಾನ್​ ರೋಹಿತ್ ಅತಿಹೆಚ್ಚು ರನ್​ಗಳಿಕೆ ಮಾಡಿರುವ ವಿಶ್ವದ ಮೊದಲ ಪ್ಲೇಯರ್​ ಎಂಬ ರೆಕಾರ್ಡ್​ ನಿರ್ಮಾಣ ಮಾಡಲಿದ್ದಾರೆ. ಉಳಿದಂತೆ ನ್ಯೂಜಿಲ್ಯಾಂಡ್​ನ ಮಾರ್ಟಿಲ್​ ಗಫ್ಟಿಲ್​​ 76 ಇನ್ನಿಂಗ್ಸ್​​ಗಳಿಂದ 2,285ರನ್​​, ಪಾಕಿಸ್ತಾನದ ಶೋಯೆಬ್​ ಮಲ್ಲಿಕ್​ 104 ಇನ್ನಿಂಗ್ಸ್​ಗಳಿಂದ 2,263ರನ್​ ಹಾಗೂ ಬ್ರೆಂಡಮ್ ಮೆಕ್ಕಲಂ 70 ಇನ್ನಿಂಗ್ಸ್​​ಗಳಿಂದ 2140 ರನ್​ಗಳಿಕೆ ಮಾಡಿದ್ದಾರೆ.

Share

About ramu BIG TV NEWS, Kolar

Check Also

ಟ್ರಂಪ್ ನೀತಿ ರದ್ದುಗೊಳಿಸಿದ ಜೋ ಬೈಡನ್.

ವಾಷಿಂಗ್ಟನ್: ರಾಷ್ಟ್ರೀಯ ವಲಸೆ ಕಾನೂನು ನ್ಯಾಯಯುತ ಹಾಗೂ ದಕ್ಷವಾಗಿ ಕಾರ್ಯನಿರ್ವಹಿಸುತ್ತಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳುವ ಭಾಗವಾಗಿ ಅಮೆರಿಕ ಅಧ್ಯಕ್ಷ ಜೋ ಬೈಡನ್, ಡೊನಾಲ್ಡ್ …

Leave a Reply

Your email address will not be published. Required fields are marked *

error: Content is protected !!