Breaking News
Home / Breaking News / ಗೂಳಿ ಕಾಳಗದಲ್ಲಿ ಸಾವನ್ನಪ್ಪಿದ ಗೂಳಿಗಳು.

ಗೂಳಿ ಕಾಳಗದಲ್ಲಿ ಸಾವನ್ನಪ್ಪಿದ ಗೂಳಿಗಳು.

Spread the love

ಪಣಜಿ (ಗೋವಾ): ಇಲ್ಲಿನ ಪೆರ್ನೆಮ್ ಪ್ರದೇಶದಲ್ಲಿ ಆಯೋಜಿಸಲಾಗಿದ್ದ ಗೂಳಿಕಾಳಗದಲ್ಲಿ ಒಂದು ಗೂಳಿ ಸಾವನ್ನಪ್ಪಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಗೋವಾ ಪೊಲೀಸರು ಬಂಧಿಸಿದ್ದಾರೆ.

ಜನವರಿ 4 ರಂದು ಕಾಳಗ ನಡೆದಿದ್ದು, ಗೂಳಿ ಮೃತಪಟ್ಟಿರುವ ಬಗ್ಗೆ ಮಾಧ್ಯಮ ಮಿತ್ರರು ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡು, ಗೂಳಿಗಳ ಇಬ್ಬರು ಮಾಲೀಕರನ್ನು ಬಂಧಿಸಲಾಗಿದೆ. ಕಾಳಗ ಆಯೋಜಕನ ವಿರುದ್ಧವೂ ಎಫ್​ಐಆರ್​ ದಾಖಲಾಗಿದೆ ಎಂದು ಪೊಲೀಸ್​ ಇನ್ಸ್​ಪೆಕ್ಟರ್​ ಜೀವ್ಬಾ ದಾಲ್ವಿ ಹೇಳಿದ್ದಾರೆ.

ಮೃತ ಗೂಳಿಯ ಕಳೇಬರವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ತನಿಖೆ ಮುಂದುವರೆದಿದೆ ಎಂದು ದಾಲ್ವಿ ತಿಳಿಸಿದ್ದಾರೆ.

About Admin BIG TV NEWS

Check Also

Featured Video Play Icon

ಎಲ್ಲಡೆ ಶಿವನ ಆರಾಧನೆ ಭಕ್ತಿಯಲ್ಲಿ ಮಿಂದೆದ್ದ ಹುಬ್ಬಳ್ಳಿಯ ಜನರು | MAHA SHIVARATRI | BIG TV NEWS

Spread the love

Leave a Reply

Your email address will not be published. Required fields are marked *

error: Content is protected !!