Breaking News
Hiring Reporter’s For more Information Contact Above Number 876 225 4007 . Program producer
Home / Breaking News / ಮತ್ತೊಮ್ಮೆ ಸಾಬೀತಾಗಿದೆ ಜನರಲ್ಲಿ ಅಮಾನವೀಯ ಮೌಲ್ಯದ ದರ್ಶನ.

ಮತ್ತೊಮ್ಮೆ ಸಾಬೀತಾಗಿದೆ ಜನರಲ್ಲಿ ಅಮಾನವೀಯ ಮೌಲ್ಯದ ದರ್ಶನ.

 

ಹುಬ್ಬಳ್ಳಿ:- ಮಾನವೀಯತೆ ಎಂಬುದು ಇತ್ತೀಚಿನ ದಿನಗಳಲ್ಲಿ ಸತ್ತು ಹೋಗಿದೆ ಎಂಬುದು ಈಗ ಮತ್ತೊಮ್ಮೆ ಸಾಭೀತಾಗಿದೆ.
ಹೌದು, ವಾಣಿಜ್ಯ ನಗರಿಯ ಕೂಗಳೆಯ ದೂರದ ನೂಲ್ವಿ ಗ್ರಾಮದ ರಸ್ತೆಯ ಮಧ್ಯೆ ಅರೆಬೆತ್ತಲಾಗಿ ನಡು ರಸ್ತೆಯ ಮಧ್ಯೆ ಸುಮಾರು 60 ವರ್ಷದ ವೃದ್ದೆ ಬಿದ್ದಿದ್ದರು ಸಾರ್ವಜನಿಕರು ಆಕೆಯ ಸಹಾಯಕ್ಕೆ ಮುಂದಾಗದಿರುವದು ಅಮಾನವೀಯತೆಯನ್ನು ಎತ್ತಿತೋರಿಸುತ್ತಿತ್ತು. ರಸ್ತೆಯ ಮಧ್ಯೆ ಬಿದ್ದಿರುವ ವೃದ್ದೆಯನ್ನು ಜನರು ನೋಡಿಯೋ‌ ನೋಡದಂತೆ ಓಡಾಡುತ್ತಿರುವದು ಮಾನವೀಯತೆ ಎಂಬುದು ಈಗಲೂ ಇದೆಯಾ ಎಂಬ ಪ್ರಶ್ನೆ ಹಾಕುವಂತಿತ್ತು.‌ ಅಂದಾಗೆ ಹೀಗೆ ನಡು ರಸ್ತೆಯಲ್ಲಿ ಅರೆ ನಗ್ನವಾಗಿರುವ ಈ ವೃದ್ದೆ ಸಾಮಾನ್ಯ ಕುಟುಂಬದವರಲ್ಲ.
ಅದರಗುಂಚಿಯ ದೊಡ್ಡ ಗೌಡರ ಕುಟಂಬದವರು. ಇವರ ಹೆಸರು ಗೌರಮ್ಮ. ಆದ್ರೆ ಇತ್ತೀಚಿಗೆ ಮಾನಸಿಕ ಅಸ್ವಸ್ಥಳಾಗಿ ಮನೆ ನಿಟ್ಟು ಹೊರ ಬಂದಿದ್ದು,‌ ಇಂದು ಹುಬ್ಬಳ್ಳಿ -ಕುಂದಗೋಳ ರಸ್ತೆಯ ನೂಲ್ವಿಯ ಬಳಿ ರಸ್ತೆ‌ ಮಧ್ಯದಲ್ಲಿ ಬಿದ್ದು ಆಚೆ, ಈಚೆ ಹೋಗಲಾರದೆ ತೊಳಲಾಡುತ್ತಿರುವ ದೃಶ್ಯವನ್ನು ಸಾರ್ವಜನಿಕರು ಮೊಬೈಲ್ ಕ್ಯಾಮರಾದಲ್ಲಿ ಸೆರೆ ಹಿಡಿದಿದ್ದು ಮನಕಲಕುವಂತಿದೆ‌.‌

Share

About Shaikh BIG TV NEWS, Hubballi

Check Also

ಡಿಕೆಶಿ ವಿರುದ್ಧ ಯಡಿಯೂರಪ್ಪ ಹೊಸ ಬಾಂಬ್

ದಾವಣಗೆರೆ: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ವಿರುದ್ಧ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಸ್ಪೋಟಕ ಆರೋಪ ಮಾಡಿದ್ದಾರೆ.ಕೆಪಿಸಿಸಿ ಅಧ್ಯಕ್ಷ ಡಿ.ಕೆ. …

Leave a Reply

Your email address will not be published. Required fields are marked *

error: Content is protected !!