Breaking News
Hiring Reporter’s For more Information Contact Above Number 876 225 4007 . Program producer
Home / ಜಿಲ್ಲೆ / ಕುಮಠಳ್ಳಿ ಸ್ವಗ್ರಾಮದಲ್ಲೇ ಗ್ರಾಮಸ್ಥರಿಂದ ಬ್ಯಾನರ್ ಮೂಲಕ ವಿರೋಧ

ಕುಮಠಳ್ಳಿ ಸ್ವಗ್ರಾಮದಲ್ಲೇ ಗ್ರಾಮಸ್ಥರಿಂದ ಬ್ಯಾನರ್ ಮೂಲಕ ವಿರೋಧ

 

ಚಿಕ್ಕೋಡಿ:- ಅಧಿಕಾರದ ಆಸೆಗಾಗಿ ಪಕ್ಷಾಂತರ ಮಾಡಿ ಅನರ್ಹಗೊಂಡ ಶಾಸಕರಿಗೆ ಮತ್ತು ಅವರ ಭಾವಚಿತ್ರ ಇರುವ ಬ್ಯಾನರ್ ಅಳವಡಿಕೆಗೆ ಗ್ರಾಮಸ್ಥರು ನಿಷೇಧ ಮಾಡಿದ ಘಟನೆ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ತೆಲಸಂಗ ಗ್ರಾಮದಲ್ಲಿ ನಡೆದಿದೆ.

ಅಥಣಿ ವಿಧಾನಸಭೆ ಉಪಚುನಾವಣೆ ಹಿನ್ನಲೆಯಲ್ಲಿ ತೆಲಸಂಗ ಗ್ರಾಮದಲ್ಲಿ ಪಕ್ಷಗಳ ಮತ ಪ್ರಚಾರದ ಅಬ್ಬರ ಜೋರಾಗಿದ್ದು, ಈ ಹಿನ್ನಲೆಯಲ್ಲಿ ಗ್ರಾಮದಲ್ಲಿ ಬ್ಯಾನರ್ ಅಳವಡಿಕೆಗೆ, ಅಲ್ಲದೇ ಅನರ್ಹರಿಗೆ ಗ್ರಾಮದಲ್ಲಿ ನಿಷೇಧ ಎಂದು ಗ್ರಾಮಸ್ಥರು ಬ್ಯಾನರ್ ಹಾಕಿದ್ದು, ಅದರಲ್ಲಿ ಶಿವಯೋಗಿ ಪುಣ್ಯಕ್ಷೇತ್ರ ಇದು, ಇಲ್ಲಿ ಹಣಕ್ಕಾಗಿ ತಮ್ಮನ್ನು ತಾವು ಮಾರಾಟಮಾಡಿಕೊಂಡ ಅನರ್ಹ ಶಾಸಕರಿಗೆ ಗ್ರಾಮದಲ್ಲಿ ಪ್ರವೇಶ ಇಲ್ಲಾ ಎಂದು ತಿಳಿಸಲಾಗಿದೆ. ಇನ್ನೂ ಈ ಗ್ರಾಮ ಬಿಜೆಪಿ ಅಭ್ಯರ್ಥಿ ಮಹೇಶ ಕುಮಠಳ್ಳಿ ಅವರ ಸ್ವಗ್ರಾಮವಾಗಿದ್ದು, ಇಲ್ಲಿಯೇ ಕುಮಠಳ್ಳಿ ವಿರೋಧ ವ್ಯಕ್ತವಾಗುತ್ತಿದೆ. ಇನ್ನೂ ಇಂದು ಗ್ರಾಮಕ್ಕೆ ಕಾಂಗ್ರೆಸ್ ಅಭ್ಯರ್ಥಿ ಗಜಾನನ ಮಂಗಸೂಸಿ ಪರ ಮತಯಾಚನೆ ಮಾಡಲು ಮಾಜಿ ಸಿಎಂ ಸಿದ್ದರಾಮಯ್ಯ ಆಗಮಿಸಲಿದ್ದಾರೆ.

Share

About Prakash s kamble BIG TV NEWS, Athani

Check Also

Featured Video Play Icon

ಸ್ಕ್ರ್ಯಾಪ್ ಅಡ್ಡೆಗೆ ತಗುಲಿದ ಬೆಂಕಿ! | Scrapyard caught on fire | BIG TV NEWS

Shaikh BIG TV NEWS, Hubballi See author's posts Share

Leave a Reply

Your email address will not be published. Required fields are marked *

error: Content is protected !!