Hiring Reporter’s For more Information Contact Above Number 876 225 4007 . Program producer
Home / Breaking News / ಪಂಚಗಿರಿ ಬೋಧನಾ ಪ್ರೌಢಶಾಲೆ ವಶಕ್ಕೆ ಪಡೆದ ನಗರಸಭೆ

ಪಂಚಗಿರಿ ಬೋಧನಾ ಪ್ರೌಢಶಾಲೆ ವಶಕ್ಕೆ ಪಡೆದ ನಗರಸಭೆ

Spread the love

ಚಿಕ್ಕಬಳ್ಳಾಪುರ: ಕೆ.ವಿ ಮತ್ತು ಪಂಚಗಿರಿ ಶಿಕ್ಷಣ ಸಂಸ್ಥೆಯ ವಶದಲ್ಲಿದ್ದ ನಗರದ ಪಂಚಗಿರಿ ಬೋಧನಾ ಪ್ರೌಢಶಾಲೆಯನ್ನು ಬುಧವಾರ ನಗರಸಭೆ ತನ್ನ ಸುಪರ್ದಿಗೆ ಪಡೆಯಿತು.

1973ರಲ್ಲಿ ಅಂದಿನ ಮುನ್ಸಿಪಾಲಿಟಿಯಿಂದ ಬಡ ಮಕ್ಕಳ ಶಿಕ್ಷಣ ಕಲ್ಪಿಸಲು ನಗರದಲ್ಲಿ ಸುಮಾರು ಒಂದೂವರೆ ಎಕರೆ ಪ್ರದೇಶದಲ್ಲಿ ಮುನ್ಸಿಫಲ್ ಬೋಧನಾ ಪ್ರೌಢಶಾಲೆಯನ್ನು ಆರಂಭಿಸಲಾಗಿತ್ತು. ಕಾಲಾಂತರದಲ್ಲಿ ಈ ಶಾಲೆಯನ್ನು ಕೆ.ವಿ ಮತ್ತು ಪಂಚಗಿರಿ ಶಿಕ್ಷಣ ಸಂಸ್ಥೆ ಪಡೆದು ಪಂಚಗಿರಿ ಬೋಧನಾ ಪ್ರೌಢ ಶಾಲೆಯಾಗಿ ಪರಿವರ್ತಿಸಿತ್ತು. ಕೆಲ ವರ್ಷಗಳ ಹಿಂದಷ್ಟೇ ಈ ಶಾಲೆ ಸರ್ಕಾರದ ಅನುದಾನಕ್ಕೆ ಒಳಪಟ್ಟಿತ್ತು.

ಈ ಶಾಲೆಯ ಮಾಲಿಕತ್ವದ ವ್ಯಾಜ್ಯ ಎರಡು ದಶಕಗಳ ಹಿಂದೆ ನ್ಯಾಯ್ಯಾಲಯದ ಮೆಟ್ಟಿಲೇರಿತ್ತು. 2014ರ ಡಿಸೆಂಬರ್ 4 ರಂದು ಹೈಕೋರ್ಟ್ ಕೆ.ವಿ ಮತ್ತು ಪಂಚಗಿರಿ ಶಿಕ್ಷಣ ಸಂಸ್ಥೆಯ ಮೇಲ್ಮನವಿಯನ್ನು ವಜಾಗೊಳಿಸಿತ್ತು

ಆದರೂ, ಈವರೆಗೆ ಶಾಲೆಯನ್ನು ಶಿಕ್ಷಣ ಸಂಸ್ಥೆಯೇ ನಿರ್ವಹಣೆ ಮಾಡುತ್ತ ಬಂದಿತ್ತು.

16 ವರ್ಷಗಳ ಬಳಿಕ ನಗರಸಭೆ ಬುಧವಾರ ಪೊಲೀಸರ ಬಿಗಿ ಬಂದೋಬಸ್ತ್ ನಡುವೆ ಶಾಲೆಯನ್ನು ತನ್ನ ವಶಕ್ಕೆ ಪಡೆದು, ಶಾಲೆಗೆ ಮುನ್ಸಿಪಾಲಿಟಿ ಬೋಧನಾ ಪ್ರೌಢಶಾಲೆ (ಎಂಪಿಎಚ್‍ಎಸ್) ಎಂದು ಮರು ನಾಮಕರಣ ಮಾಡಿರುವುದು ಶೈಕ್ಷಣಿಕ ವಲಯ ಮಾತ್ರವಲ್ಲದೇ ರಾಜಕೀಯ ವಲಯದಲ್ಲಿ ಸಹ ಸಂಚಲನ ಮೂಡಿಸಿದೆ

Check Also

ಬ್ಯಾಂಕ್‌ಗಳ ಸಾಲಗಳ ಮೇಲಿನ ಚಕ್ರಬಡ್ಡಿ ಮನ್ನಾ

Spread the loveನವದೆಹಲಿ: ನವರಾತ್ರಿ ಸಂದರ್ಭದಲ್ಲಿ ಸಾಲಗಾರರಿಗೆ ಕೇಂದ್ರ ಸರ್ಕಾರ ಶುಭ ಸುದ್ದಿ ನೀಡಿದೆ. ಮಾರ್ಚ್ 1ರಿಂದ ಆಗಸ್ಟ್ 31ರವರೆಗಿನ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Hiring Reporter’s For more Information Contact Above Number 876 225 4007 . Program producer
error: Content is protected !!