Breaking News
Hiring Reporter’s For more Information Contact Above Number 876 225 4007 . Program producer
Home / Breaking News / ಆಗಸ್ಟ್​ 15ರಂದು ಕೊರೊನಾದಿಂದ ಸ್ವಾತಂತ್ರ್ಯಕ್ಕಾಗಿ ಪ್ರತಿಜ್ಞೆ ಮಾಡಿ: ಮೋದಿ ಕರೆ

ಆಗಸ್ಟ್​ 15ರಂದು ಕೊರೊನಾದಿಂದ ಸ್ವಾತಂತ್ರ್ಯಕ್ಕಾಗಿ ಪ್ರತಿಜ್ಞೆ ಮಾಡಿ: ಮೋದಿ ಕರೆ

Spread the love

ನವದೆಹಲಿ: ಕೊರೊನಾ ವೈರಸ್​ ಆರಂಭದಲ್ಲಿ ಎಷ್ಟು ಅಪಾಯಕಾರಿಯಾಗಿತ್ತೋ ಈಗಲೂ ಅಷ್ಟೇ ಅಪಾಯಕಾರಿಯಾಗಿದೆ. ಈ ವರ್ಷ ಆಗಸ್ಟ್​ 15ರ ಸ್ವಾತಂತ್ರ್ಯೋತ್ಸವ ದಿನಾಚರಣೆಯಂದು, ಸಾಂಕ್ರಾಮಿಕದಿಂದ ಸ್ವಾತಂತ್ರ್ಯಕ್ಕಾಗಿ ಪ್ರತಿಜ್ಞೆ ತೆಗೆದುಕೊಳ್ಳಿ ಅಂತ ಪ್ರಧಾನಿ ಮೋದಿ ದೇಶದ ಜನರಿಗೆ ಕರೆ ನೀಡಿದ್ದಾರೆ.

ಇಂದು ಮನ್​ ಕೀ ಬಾತ್​​ ಕಾರ್ಯಕ್ರಮದಲ್ಲಿ ಮಾತನಾಡಿದ ಮೋದಿ, ಈ ವರ್ಷ ಕೊರೊನಾ ವೈರಸ್​ ಸಾಂಕ್ರಾಮಿಕದ ಹಿನ್ನೆಲೆ ಸ್ವಾತಂತ್ರ್ಯೋತ್ಸವ ಆಚರಣೆ ಭಿನ್ನವಾಗಿರಲಿದೆ. ದೇಶದ ಜನರು ಹಾಗೂ ಯುವಜನತೆ ಈ ಸಾಂಕ್ರಾಮಿಕದಿಂದ ಸ್ವತಂತ್ರ್ಯ ಬೇಕೆಂದು ಪ್ರತಿಜ್ಞೆ ಮಾಡಿ ಎಂದರು. ಸ್ವವಲಂಬಿ ಭಾರತಕ್ಕಾಗಿ ಸಂಕಲ್ಪ ಮಾಡಿ. ಹೊಸದನ್ನ ಕಲಿಯುವ, ಕಲಿಸುವ ನಿರ್ಣಯ ಹಾಗೂ ನಮ್ಮ ಕರ್ತವ್ಯವನ್ನು ಶ್ರದ್ಧೆಯಿಂದ ಮಾಡುವ ನಿರ್ಣಯ ಕೈಗೊಳ್ಳಿ ಅಂತ ಹೇಳಿದ್ರು.

ಸೋಂಕಿನಿಂದ ತೀವ್ರ ಸಂಕಷ್ಟಕ್ಕೀಡಾಗಿರೋ ರಾಷ್ಟ್ರಗಳ ಪೈಕಿ ಭಾರತ ಕೂಡ ಒಂದಾಗಿದ್ದರೂ, ಚೇತರಿಕೆ ಪ್ರಮಾಣ ನಮ್ಮ ದೇಶದಲ್ಲಿ ಹೆಚ್ಚಿದೆ ಎಂಬುದನ್ನ ಮೋದಿ ತಿಳಿಸಿದ್ರು.

ಬೇರೆ ರಾಷ್ಟ್ರಗಳಿಗೆ ಹೋಲಿಸಿದ್ರೆ ನಮ್ಮ ದೇಶದಲ್ಲಿ ಸೋಂಕಿನಿಂದ ಗುಣಮುಖರಾಗುತ್ತಿರುವವರ ಸಂಖ್ಯೆ ಹೆಚ್ಚಿದೆ. ಲಕ್ಷಾಂತರ ಜನರ ಜೀವ ಉಳಿಸುವಲ್ಲಿ ನಾವು ಯಶಸ್ವಿಯಾಗಿದ್ದೇವೆ. ಆದ್ರೆ ಕೊರೊನಾವೈರಸ್​ನ ಅಪಾಯ ಇನ್ನೂ ಮುಗಿದಿಲ್ಲ. ನಾವು ಜಾಗರೂಕರಾಗಿರಬೇಕು ಎಂದು ಎಚ್ಚರಿಸಿದರು.

ಇದೇ ವೇಳೆ ಮಾಸ್ಕ್​ ಧರಿಸುವ ಬಗ್ಗೆ ಸಲಹೆ ನೀಡಿದ ಮೋದಿ, ಕೆಲವೊಮ್ಮೆ ನಮಗೆ ಮಾಸ್ಕ್​ ಧರಿಸೋದಕ್ಕೆ ತೊಂದರೆಯಾಗುತ್ತೆ. ಕೆಲವರು ಮಾತನಾಡುವಾಗ ಮಾಸ್ಕ್​ ತೆಗೆಯುತ್ತಾರೆ. ಆದ್ರೆ ನಿಮಗೆ ಮಾಸ್ಕ್​ ತೆಗೆಯಬೇಕು ಎನಿಸಿದಾಗಲೆಲ್ಲಾ, ಇಂಥ ಮಸ್ಕ್​ಗಳನ್ನ ಗಂಟೆಗಳ ಕಾಲ ಧರಿಸಿ, ಕೊರೊನಾ ವಿರುದ್ಧ ಹೋರಾಡುತ್ತಿರೋ ವೈದ್ಯರನ್ನ ಒಮ್ಮೆ ನೆನಪಿಸಿಕೊಳ್ಳಿ ಅಂತ ಹೇಳಿದ್ರು.

Check Also

ಡಿ ಬಾಸ್ ಅಭಿಮಾನಿಗಳಿಗೆ ಮತ್ತೊಂದು ಸಿಹಿ ಸುದ್ದಿ

Spread the loveಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ‘ರಾಬರ್ಟ್’ ಚಿತ್ರತಂಡದಿಂದ ಮತ್ತೊಂದು ಸಿಹಿ ಸುದ್ದಿ ಅಭಿಮಾನಿಗಳಿಗೆ ಸಿಕ್ಕಿದೆ. ‘ರಾಬರ್ಟ್’ ಬಿಡುಗಡೆಗೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Hiring Reporter’s For more Information Contact Above Number 876 225 4007 . Program producer
error: Content is protected !!