Hiring Reporter’s For more Information Contact Above Number 876 225 4007 . Program producer
Home / Breaking News / ಪಾಕಿಸ್ತಾನದ ಸಹೋದರಿಯಿಂದ ಪ್ರಧಾನಿ ಮೋದಿಗೆ ಬಂತು ರಕ್ಷಾಬಂಧ

ಪಾಕಿಸ್ತಾನದ ಸಹೋದರಿಯಿಂದ ಪ್ರಧಾನಿ ಮೋದಿಗೆ ಬಂತು ರಕ್ಷಾಬಂಧ

Spread the love

ಅಹಮದಾಬಾದ್​: ಪ್ರಧಾನಿ ನರೇಂದ್ರ ಮೋದಿ ಅವರ ಪಾಕಿಸ್ತಾನದ ಸಹೋದರ ಖಾಮರ್​ ಮೊಹಸಿನ್​ ಶೇಖ್​ ರಕ್ಷಾಬಂಧನ ನಿಮಿತ್ತ ರಾಖಿಯನ್ನು ಕಳುಹಿಸಿಕೊಟ್ಟಿದ್ದಾರೆ. ಕೋವಿಡ್​-19 ಪಿಡುಗಿನ ಹಿನ್ನೆಲೆಯಲ್ಲಿ ಭಾರತಕ್ಕೆ ಬಂದು, ಅವರ ಕೈಗೆ ರಾಖಿ ಕಟ್ಟಲು ಸಾಧ್ಯವಾಗದಿರುವುದಕ್ಕೆ ಬೇಸರ ವ್ಯಕ್ತಪಡಿಸಿ, ಅಂಚೆಯ ಮೂಲಕವೇ ರಕ್ಷಾಬಂಧವನ್ನು ಕಳುಹಿಸಿಕೊಟ್ಟಿದ್ದಾರೆ.

ಪಾಕಿಸ್ತಾನ ಮೂಲದ ಶೇಖ್​, ಭಾರತೀಯನನ್ನು ಮದುವೆಯಾಗಿ ಗುಜರಾತ್​ನ ಅಹಮದಾಬಾದ್​ನಲ್ಲಿ ನೆಲೆಸಿದ್ದಾರೆ. ಭಾರತಕ್ಕೆ ಬಂದಾಗಿನಿಂದಲೂ ಅವರು ನರೇಂದ್ರ ಮೋದಿ ಅವರಿಗೆ ರಾಖಿ ಕಟ್ಟುವ ಸಂಪ್ರದಾಯವನ್ನು ರೂಢಿಸಿಕೊಂಡಿದ್ದಾರೆ. ಈ ವರ್ಷ ಅವರು ಕಳುಹಿಸಿರುವ ರಾಖಿ 25ನೆಯದ್ದಾಗಿದೆ.

ನಮಗೆ 30-35 ವರ್ಷದಿಂದ ನರೇಂದ್ರ ಮೋದಿ ಅವರ ಪರಿಚಯವಿದೆ. ನಾನು ದೆಹಲಿಯಲ್ಲಿ ಅವರನ್ನು ಮೊದಲ ಬಾರಿಗೆ ಭೇಟಿಯಾಗಿದ್ದ.

ಎಂಬುದು ಗೊತ್ತಾದ ನಂತರದಲ್ಲಿ ಅವರು ನನ್ನನ್ನು ತಂಗಿ ಎಂದು ಸಂಬೋಧಿಸಿದ್ದರು. ನನಗೆ ಅಣ್ಣ-ತಮ್ಮ ಯಾರೂ ಇಲ್ಲದ್ದರಿಂದ ಅವರನ್ನೇ ನಾನು ಅಣ್ಣ ಎಂದು ಭಾವಿಸಿದ್ದೇನೆ. ಎರಡು-ಮೂರು ವರ್ಷಗಳ ಬಳಿಕ ಮತ್ತೊಮ್ಮೆ ನಾವು ದೆಹಲಿಗೆ ತೆರಳಿ ರಕ್ಷಾಬಂಧನ ಹಬ್ಬದ ದಿನದಂದು ಅವರನ್ನು ಭೇಟಿಯಾಗಿ, ಅವರ ಕೈಗೆ ರಾಖಿ ಕಟ್ಟಿದ್ದೆ ಎಂದು ಶೇಖ್​ ಸ್ಮರಿಸಿಕೊಂಡಿದ್ದಾರೆ.

ಅಂದು ನಾನು ನರೇಂದ್ರ ಮೋದಿ ಅವರಿಗೆ ರಾಖಿ ಕಟ್ಟುವಾಗ ನೀವು ಆದಷ್ಟು ಬೇಗ ಗುಜರಾತ್​ನ ಸಿಎಂ ಆಗುವಂತೆ ಪ್ರಾರ್ಥಿಸಿರುವುದಾಗಿ ಹೇಳಿದ್ದೆ. ಆದರೆ ಆಗ ಅವರು ನಕ್ಕು ಸುಮ್ಮನಾಗಿದ್ದರು. ಆದರೆ, ಮುಂದೆ ಅವರು ಗುಜರಾತ್​ ಮುಖ್ಯಮಂತ್ರಿಯಾದರು. ಮುಂದಿನ ರಕ್ಷಾಬಂಧನದ ಹಬ್ಬದಂದು ಅವರನ್ನು ಭೇಟಿ ಮಾಡಿದಾಗ, ನನ್ನ ಪ್ರಾರ್ಥನೆ ದೇವರನ್ನು ತಲುಪಿದ್ದಕ್ಕೆ ಸಿಎಂ ಆದಿರಿ ಎಂದು ಹೇಳಿದೆ. ಈಗ ಅವರು ದೇಶದ ಪ್ರಧಾನಿಯಾಗಿದ್ದಾರೆ ಎಂದು ಹರ್ಷ ವ್ಯಕ್ತಪಡಿಸಿದರು.

Check Also

ಹವಾಮಾನ ಇಲಾಖೆಯಿಂದ ರಾಜ್ಯದ ಜನತೆಗೆ ಮಹತ್ವದ ಸೂಚನೆ

Spread the loveಬೆಂಗಳೂರು: ಮುಂದಿನ 24 ಗಂಟೆಗಳಲ್ಲಿ ಕರ್ನಾಟಕದ ಕರಾವಳಿ ಭಾಗ ಮತ್ತು ದಕ್ಷಿಣ ಒಳನಾಡಿನಲ್ಲಿ ಅತಿ ಹೆಚ್ಚು ಮಳೆಯಾಗುವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Hiring Reporter’s For more Information Contact Above Number 876 225 4007 . Program producer
error: Content is protected !!