Breaking News
Hiring Reporter’s For more Information Contact Above Number 876 225 4007 . Program producer
Home / Breaking News / ಪೊಲೀಸ್​​ ಜೀಪು ಕಂಡು ಹೆದರಿ ಓಡಿದ ಯುವಕ: ಹೃದಯಾಘಾತದಿಂದ ಸಾವು

ಪೊಲೀಸ್​​ ಜೀಪು ಕಂಡು ಹೆದರಿ ಓಡಿದ ಯುವಕ: ಹೃದಯಾಘಾತದಿಂದ ಸಾವು

Spread the love

ಚಾಮರಾಜನಗರ: ಪೊಲೀಸರ ಜೀಪು ಕಂಡು ಹೆದರಿ ಓಡಿದ ಯುವಕ ಜಮೀನೊಂದರಲ್ಲಿ ಎಡವಿ ಬಿದ್ದು ಪ್ರಾಣ ಕಳೆದುಕೊಂಡ ಘಟನೆ ಚಾಮರಾಜನಗರ ತಾಲ್ಲೂಕಿನ ಯಾಲಕ್ಕೂರು ಗ್ರಾಮದಲ್ಲಿ ನಡೆದಿದೆ. ಶಂಕರ್(22) ಮೃತ ಯುವಕ.

ಕೊರೊನಾ ಲಾಕ್​ಡೌನ್​​ ಕಾರಣದಿಂದ ಯಾರೂ ಗುಂಪುಗೂಡದಂತೆ ನಿನ್ನೆ ನಿಷೇಧಾಜ್ಞೆ ಹೇರಲಾಗಿತ್ತು. ಈ ಹಿನ್ನೆಲೆ ನಿನ್ನೆ ಸಂಜೆ ಕುದೇರು ಪೊಲೀಸರು ಗಸ್ತು ತಿರುಗುತ್ತಿದ್ದರು. ಈ ವೇಳೆ ಯುವಕರ ಗುಂಪೊಂದು ಗ್ರಾಮದ ಪಡಸಾಲೆ ಮೇಲೆ ಗುಂಪಾಗಿ ಕುಳಿತಿದ್ದು, ಪೊಲೀಸ್ ​ಜೀಪ್​ ಕಂಡೊಡನೆ ಗುಂಪಿನಲ್ಲಿದ್ದ ಯುವಕ ಶಂಕರ್​ ದಿಕ್ಕಾಪಾಲಾಗಿ ಓಡಿದ್ದಾನೆ. ಈ ವೇಳೆ ಜಮೀನೊಂದರಲ್ಲಿ ಎಡವಿ ಬಿದ್ದ ಆತ ಪ್ರಜ್ಞೆ ಕಳೆದುಕೊಂಡಿದ್ದ.

ಬಳಿಕ ಗ್ರಾಮಸ್ಧರು ಚಿಕಿತ್ಸೆಗಾಗಿ ಆತನನ್ನು ಸಂತೇಮರಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದಿದ್ದಾರೆ. ಆಸ್ಪತ್ರೆಯಲ್ಲಿ ಪ್ರಥಮಚಿಕಿತ್ಸೆ ನೀಡಿದ ವೈದ್ಯರು, ಹೆಚ್ಚಿನ ಚಿಕಿತ್ಸೆಗಾಗಿ ಆತನನ್ನು ಜಿಲ್ಲಾಸ್ಪತ್ರೆಗೆ ದಾಖಲು ಮಾಡುವಂತೆ ಸೂಚಿಸಿದ್ದರು.ಅದರಂತೆ ಗ್ರಾಮಸ್ಥರು ಶಂಕರ್​ನನ್ನು ಚಾಮರಾಜನಗರದ ಜಿಲ್ಲಾಸ್ಪತ್ರೆಗೆ ಕರೆದೊಯ್ದಿದ್ದಾರೆ.

ಆದರೆ ಜಿಲ್ಲಾಸ್ಪತ್ರಾ ವೈದ್ಯರು ಆತ ಹೃದಯಾಘಾತದಿಂದ ಮೃತಪಟ್ಟಿದ್ದಾನೆಂದು ತಿಳಿಸಿದ್ದಾರೆ. ನಂತರ ಶವವನ್ನು ಆಯಂಬುಲೆನ್ಸ್​ ಮೂಲಕ ಗ್ರಾಮಕ್ಕೆ ತಂದಿದ್ದಾರೆ.

Check Also

Featured Video Play Icon

ಯರಗುಪ್ಪಿ ಮುಖ್ಯ ರಸ್ಥೆಯಲ್ಲಿ ಗುಂಡಿಗಳದೇ ಕಾರುಬಾರು

Spread the love

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Hiring Reporter’s For more Information Contact Above Number 876 225 4007 . Program producer
error: Content is protected !!