Hiring Reporter’s For more Information Contact Above Number 876 225 4007 . Program producer
Home / Breaking News / ಸಂಜನಾ ಆಪ್ತ ಫಾಸಿಲ್‌ ಗಾಗಿ ಪೋಲಿಸರಿಂದ ಶೋಧ:ಸಿಸಿಬಿಯಿಂದ ಕುಟುಂಬಸ್ಥರ ವಿಚಾರಣೆ

ಸಂಜನಾ ಆಪ್ತ ಫಾಸಿಲ್‌ ಗಾಗಿ ಪೋಲಿಸರಿಂದ ಶೋಧ:ಸಿಸಿಬಿಯಿಂದ ಕುಟುಂಬಸ್ಥರ ವಿಚಾರಣೆ

Spread the love

ಬೆಂಗಳೂರು: ಸಂಜನಾ ಗಲ್ರಾನಿ ಆಪ್ತ ಶೇಕ್ ಫಾಸಿಲ್ ಮನೆ ಮೇಲೆ ಸಿಸಿಬಿ ಪೊಲೀಸರು ತಡರಾತ್ರಿ ದಾಳಿ ಮಾಡಿದ್ದರು. ಆದರೆ ಆ ವೇಳೆ ವಿಜಯನಗರದ ನಿವಾಸದಲ್ಲಿ ಫಾಸಿಲ್​ ಇರಲಿಲ್ಲ. ಹಾಗಾಗಿ ಆತನ ಪತ್ನಿ ಹಾಗೂ ಸಹೋದರನನ್ನು ವಿಚಾರಣೆ ನಡೆಸಿ ಇ‌ಂದು‌ ಸಿಸಿಬಿ ಕಚೇರಿಗೆ ಬರುವಂತೆ ಕುಟುಂಬಸ್ಥರಿಗೆ ಅಧಿಕಾರಿಗಳು ಸೂಚಿಸಿದ್ದರು.

ಹೀಗಾಗಿ ಸಿಸಿಬಿ ಕಚೇರಿಗೆ ಶೇಖ್ ಫಾಸಿಲ್ ಕುಟುಂಬಸ್ಥರು ಫಾಸಿಲ್ ಪರ ವಕೀಲ ಕುಮಾರ್ ಗೌಡ ಸಿಸಿಬಿ ವಿಚಾರಣೆಗೆ ಹಾಜರಾಗಿದ್ದಾರೆ. ಸ್ಯಾಂಡಲ್​​​ವುಡ್ ಡ್ರಗ್ ಪ್ರಕರಣದಲ್ಲಿ ಫಾಸಿಲ್ ಹೆಸರೂ ಕೇಳಿಬಂದಿತ್ತು. ಶ್ರೀಲಂಕಾದ ಕೊಲೊಂಬೊದಲ್ಲಿರುವ ಕೆಸಿನೊಗೆ ಏಜೆಂಟ್ ಎಂಬ ಆರೋಪ ಈತನ ಮೇಲಿದೆ. ಹಾಗೆ ‌ಬಂಧಿತ ನಟಿ ಸಂಜನಾರೊಂದಿಗೆ ಲಿಂಕ್ ಇದ್ದು, ಈತ ಮಾಜಿ ಸಚಿವರ ಆಪ್ತನೂ ಆಗಿದ್ದಾನೆ.

ಡ್ರಗ್ ಪ್ರಕರಣದಲ್ಲಿ ಹೆಸರು ಕೇಳಿ ಬರ್ತಿದ್ದಂತೆ ಫಾಸಿಲ್ ತಲೆಮರೆಸಿಕೊಂಡಿದ್ದು, ನಿನ್ನೆ ಆತನ ಸಹೋದರನನ್ನು ಕಚೇರಿಗೆ ಕರೆಸಿ ವಿಚಾರಣೆ ಮಾಡಿದ್ದ ಸಿಸಿಬಿ ತಂಡ, ತದ ನಂತರ ಮನೆ ಮೇಲೆ ದಾಳಿ ‌ಮಾಡಿ ಕುಟುಂಬಸ್ಥರಿಗೆ ಫಾಸಿಲ್ ಕುರಿತು ಮಾಹಿತಿ ನೀಡುವಂತೆ ಕೇಳಿದ್ದಾರೆ. ಹಾಗೆ ಸಿಸಿಬಿ ಇನ್ಸ್​ಪೆಕ್ಟರ್ ಪುನೀತ್ ತಂಡ ಪಾಸಿಲ್​ಗಾಗಿ ಹುಡುಕಾಟ‌ ನಡೆಸಿದ್ದಾರೆ.

Check Also

ತಮಿಳು ಚಿತ್ರರಂಗದ ಖ್ಯಾತ ನಟ ಆತ್ಮಹತ್ಯೆಗೆ ಶರಣು

Spread the loveಚೆನ್ನೈ: ಕೌಟುಂಬಿಕ ಕಲಹಕ್ಕೆ ಬೇಸತ್ತು ತಮಿಳು ಚಿತ್ರರಂಗದ ಉದಯೋನ್ಮುಖ ನಟ ತೆನ್ನರಸು ಆತ್ಮಹತ್ಯೆಗೆ ಶರಣಾಗಿದ್ದಾರೆ. 2012ರಲ್ಲಿ ಬಿಡುಗಡೆಯಾಗಿದ್ದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Hiring Reporter’s For more Information Contact Above Number 876 225 4007 . Program producer
error: Content is protected !!