Hiring Reporter’s For more Information Contact Above Number 876 225 4007 . Program producer
Home / Breaking News / ಪ್ರಧಾನಿ ಮೋದಿ ಟ್ವಿಟರ್ ಅಕೌಂಟ್ ಹ್ಯಾಕ್.

ಪ್ರಧಾನಿ ಮೋದಿ ಟ್ವಿಟರ್ ಅಕೌಂಟ್ ಹ್ಯಾಕ್.

Spread the love

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ವೈಯಕ್ತಿಕ ವೆಬ್​ಸೈಟ್​​ಗೆ ಲಿಂಕ್​ ಆಗಿರುವ ಟ್ವಿಟರ್​ ಅಕೌಂಟ್​ ಹ್ಯಾಕ್​ ಆಗಿದೆ. ಕೋವಿಡ್​​-19 ಪರಿಹಾರ ನಿಧಿಗೆ ಬಿಟ್​ ಕಾಯಿನ್​ ರೂಪದಲ್ಲಿ ದೇಣಿಗೆ ನೀಡಿ ಎಂದು ಹ್ಯಾಕರ್​ ಮನವಿ ಮಾಡಿದ್ದಾನೆ.

ಪ್ರಧಾನಿಯವರ ವೈಯಕ್ತಿಕ ವೆಬ್​ಸೈಟ್​​ಗೆ ಲಿಂಕ್​ ಆಗಿರುವ ಟ್ವಿಟರ್​ ಅಕೌಂಟ್​​ನಲ್ಲಿ ಕ್ರಿಪ್ಟೊ ಕರೆನ್ಸಿಗೆ ಸಂಬಂಧಿಸಿದ ಟ್ವೀಟ್​​ಗಳನ್ನು ಹ್ಯಾಕರ್​​ಗಳು ಪೋಸ್ಟ್​ ಮಾಡಿದ್ದಾರೆ. ಕೋವಿಡ್​-19ಗೆ ಸಂಬಂಧಿಸಿದಂತೆ ರಚಿಸಲಾದ ಪ್ರಧಾನಮಂತ್ರಿಯವರ ಪರಿಹಾರ ನಿಧಿಗೆ ದೇಣಿಗೆ ನೀಡಿ ಎಂದು ನಿಮ್ಮಲ್ಲಿ ಮನವಿ ಮಾಡಿಕೊಳ್ಳುತ್ತಿದ್ದೇನೆ ಎಂದು ಹ್ಯಾಕರ್​ ಟ್ವಿಟರ್​ ಅಕೌಂಟ್​​ನಲ್ಲಿ ಮೆಸೇಜ್​ ಹಾಕಿದ್ದಾನೆ.

ಈ ಖಾತೆಯನ್ನು ಜಾನ್​ ವಿಕ್​​ ಎಂಬಾತ ಹ್ಯಾಕ್​ ಮಾಡಿದ್ದಾನೆ. ನಾವು ಪೇಟಿಮ್​​ ಮಾಲ್​ ಹ್ಯಾಕ್​ ಮಾಡಿಲ್ಲ ಎಂದು ಹ್ಯಾಕರ್​ ಇನ್ನೊಂದು ಟ್ವೀಟ್​​ನಲ್ಲಿ ಬರೆದಿದ್ದಾನೆ. ಈಗ ಈ ಎಲ್ಲಾ ಟ್ವೀಟ್​​ಗಳನ್ನೂ ಡಿಲೀಟ್​ ಮಾಡಲಾಗಿದೆ.

ಪ್ರಧಾನಿ ನರೇಂದ್ರ ಮೋದಿಯವರ ಪರ್ಸನಲ್​​ ವೆಬ್​ಸೈಟ್​​ಗೆ ಲಿಂಕ್​ ಆಗಿರುವ​​ ಟ್ವಿಟರ್​ ಅಕೌಂಟ್ ​​@narendramodiಗೆ 61 ಮಿಲಿಯನ್​​ ಮಂದಿ ಫಾಲೋವರ್ಸ್​ ಇದ್ದಾರೆ.

Check Also

ತಮಿಳು ಚಿತ್ರರಂಗದ ಖ್ಯಾತ ನಟ ಆತ್ಮಹತ್ಯೆಗೆ ಶರಣು

Spread the loveಚೆನ್ನೈ: ಕೌಟುಂಬಿಕ ಕಲಹಕ್ಕೆ ಬೇಸತ್ತು ತಮಿಳು ಚಿತ್ರರಂಗದ ಉದಯೋನ್ಮುಖ ನಟ ತೆನ್ನರಸು ಆತ್ಮಹತ್ಯೆಗೆ ಶರಣಾಗಿದ್ದಾರೆ. 2012ರಲ್ಲಿ ಬಿಡುಗಡೆಯಾಗಿದ್ದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Hiring Reporter’s For more Information Contact Above Number 876 225 4007 . Program producer
error: Content is protected !!