Breaking News
Hiring Reporter’s For more Information Contact Above Number 876 225 4007 . Program producer
Home / ಜಿಲ್ಲೆ / ಮಂಡ್ಯ / ಪ್ರಗತಿ ಪರಿಶೀಲನಾ ಸಭೆ.

ಪ್ರಗತಿ ಪರಿಶೀಲನಾ ಸಭೆ.

ಮಂಡ್ಯ: ಚೌಡೇನಹಳ್ಳಿ ಗ್ರಾಮ ಪಂಚಾಯಿತಿ ಕಾರ್ಯಾಲಯ ವತಿಯಿಂದ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮ (ಕೆಡಿಪಿ) ಪ್ರಗತಿ ಪರಿಶೀಲನೆ ಕಾರ್ಯಕ್ರಮವು ಕೋಡಿಮರನಹಳ್ಳಿ ಗ್ರಾಮದ ದಿವ್ಯಚೇತನ್ಯ ಶಾಲೆಯಲ್ಲಿ ಆಯೋಜಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಗ್ರಾಮಗಳ ಕುಂದು ಕೊರೆತೆಗಳ ಬಗ್ಗೆ ಹಾಗೂ ಅರಣ್ಯ ಇಲಾಖೆ, ತೋಟಗಾರಿಕೆ ಇಲಾಖೆ, ಶಾಲಾ ಅಭಿವೃದ್ಧಿ, ಅಂಗನವಾಡಿ, ಕಾರ್ಯಕರ್ತರ, ಆಶಾ ಕಾರ್ಯಕರ್ತೆಯರ ಸಮಸ್ಯ ಬಗ್ಗೆ ಚರ್ಚಿಸಲಾಯಿತು,
ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳಿಗೆ ನೀಡುತ್ತಿರುವ ಪೌಷ್ಟಿಕ ಆಹಾರದ ಲೋಪಗಳು ಕಾಣುತ್ತಿದ್ದು ಇದ್ದರ ಬಗ್ಗೆ ಸೂಕ್ತ ಕ್ರಮ ಜರುಗಿಸುವುದಾಗಿ ತಿಳಿಸಿದರು, ಅರಣ್ಯ ಇಲಾಖೆ ಇಂದ ರೈತರಿಗೆ ಗಿಡಗಳನ್ನು ನೀಡುತ್ತಿದ್ದು
ಅದರ ಪೋಷಣೆ ಗಾಗಿ ಸರ್ಕಾರ ಹಣ ನೀಡುತ್ತಿದೆ ಆದರೆ ಕೆಲ ಅಧಿಕಾರಿಗಳು ಲಂಚದ ದುರಾಸೆಯಿಂದ ಗಿಡವನ್ನು ನೆಡಿಸದೆ ಸಾವಿರಾರು ಗಿಡಗಳನ್ನು ಪಡೆದು ಹತ್ತು ಗಿಡಗಳನ್ನು‌ಮಾತ್ರ ನೆಟ್ಟು ಸರ್ಕಾರ ಹಣವನ್ನು ದುರ್ಬಳಕೆ ಮಾಡಿಕೊಂಡಿದ್ದು ಸೂಕ್ತ ತನಿಖೆ ನೆಡೆಸಬೇಕು ಎಂಬುವ ಚರ್ಚೆ ನೆಡೆಯಿತು.
ಗ್ರಾಮ ಪಂಚಾಯಿತಿಗೆ ಸೇರಿದ ಅಲವು ಶಾಲಾ ಕಟ್ಟಡ ಮಳೆಯಿಂದ ಸೂರುತ್ತಿದ್ದು ಇದನ್ನು‌ ಕೋಡಲೆ ಸರಿ ಪಡಿಸಬೇಕು, ಹಲವು ಶಾಲೆಗಳಿವೆ ಕಾಂಪೌಂಡ್ ವ್ಯವಸ್ತೆಗಳನ್ನು ಒದಗಿಸಬೇಕು ಎಂದು ಅಲವು ಶಿಕ್ಷಕರು ತಿಳಿಸಿದರು. ಅಂತರ್ಜಲ ಹೆಚ್ಚಿಸಲು ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ಚಕ್ ಡ್ಯಾಮ್ ನಿರ್ಮಾಣ ಮಾಡಿ, ಗುತ್ತಿಗೆದಾರ ಹಣ ಮಾಡುವ ಉದ್ದೇಶದಿಂದ ಕಳಪೆ ಕಾಮಗಾರಿಗಳು ನೆಡೆದಿದೆ, ಚಕ್ ಡ್ಯಾಮ್ ನಿರ್ಮಾಣವಾಗಿ 15 ದಿನದಲ್ಲೆ ಹೊಡೆದು ಹೋಗಿರುವ ಘಟನೆಗಳು ಬೆಳಗಿಕೆ ಬಂದಿದೆ ಇದರ ಬಗ್ಗೆ ಸೂಕ್ತ ತನಿಕೆ ನೆಡೆಸಬೇಕು ಎಂದು ಅಲವರು ಒತ್ತಾಯಿಸಿದರು. ಕಾರ್ಯಕ್ರಮದಲ್ಲಿ ಚೌಡೇನಹಳ್ಳಿ ಗ್ರಾಮ ಪಂಚಾಯಿತಿ ಉಪಾದ್ಯಕ್ಷ ಚಿಕ್ಕಳಲೆ ಆಶೋಕ್ ಮಾತನಾಡಿ ಕೆಡಿಪಿ ಸಭೆಕೆ ಸಕಾಲಕ್ಕೆ ಎಲ್ಲಾ ಇಲಾಖೆಯ ಅಧಿಕಾರಿಗಳು ಭಾಗವಯಿಸುವಂತೆ ತಿಳಿಸಿದರೂ ಕೆಲ ಇಲಾಖೆಯವರು ಮಾತ್ರ ಸಭೆ ಹಾಜರಿದ್ದು ಸಭೆಯಗೆ ಬಾರದೆ ಇರುವ
ಇಲಾಖೆಯ ಅಧಿಕಾರಿಗಳ ವಿರುದ್ದ ‌ನೋಟೀಸ್ ನೀಡಿ ಸೂಕ್ತ ಕ್ರಮ ಜರುಗಿಸುವುದಾಗಿ ತಿಳಿಸಿದರು ಅಲ್ಲದೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶಾಲೆಗಳಿಗೆ ಮತ್ತು ಅಂಗನವಾಡಿ ಕೇಂದ್ರಗಳಿಗೆ ಕುಡಿಯುವ ನೀರಿನ ಸಮಸ್ಯೆಗಳನ್ನು ಕೋಡಲೇ ಬಗೆಹರಿಸುವಂತೆ ತಿಳಿಸಿದರು.
ಕಾರ್ಯಕ್ರಮದಲ್ಲಿ ಚೌಡೇನಹಳ್ಳಿ ಗ್ರಾಮ ಪಂಚಾಯಿತಿಯ ಅದ್ಯಕ್ಷರಾದ ಶ್ರೀಮತಿ ಶುಭಾ ರವೀಂದ್ರ, ಉಪಾದ್ಯಕ್ಷ ಆಶೋಕ್, ಪಿ ಡಿ ಓ ಶಿವಕುಮಾರ್ ಸಿಬ್ಬಂದಿಗಳು ಇದ್ದರು.

Share

About Bora nayak BIG TV NEWS, Mandya

Check Also

ರಾಜ್ಯ ಸರ್ಕಾರದಿಂದ ರೈತ ಸಮುದಾಯಕ್ಕೆ `ಶುಭಸುದ್ದಿ

ಮಂಡ್ಯ : ರಾಜ್ಯ ಸರ್ಕಾರವು ರೈತರಿಗೆ ಸಿಹಿಸುದ್ದಿ ನೀಡಲು ಮುಂದಾಗಿದ್ದು, ರಾಜ್ಯದಲ್ಲಿ ಯಶಸ್ವಿನಿ ಯೋಜನೆಯನ್ನು ಮತ್ತೆ ಜಾರಿಗೆ ತರಲು ಚಿಂತನೆ …

Leave a Reply

Your email address will not be published. Required fields are marked *

error: Content is protected !!