Breaking News
Hiring Reporter’s For more Information Contact Above Number 876 225 4007 . Program producer
Home / Breaking News / ಗೌಪ್ಯ ಸಭೆ ನಡೆಸಿದವರನ್ನು ಬಿಡುಗಡೆಗೊಳಿಸಿದ ಪೋಲೀಸರ ಕ್ರಮ ಖಂಡಿಸಿ ಪ್ರತಿಭಟನೆ.‌

ಗೌಪ್ಯ ಸಭೆ ನಡೆಸಿದವರನ್ನು ಬಿಡುಗಡೆಗೊಳಿಸಿದ ಪೋಲೀಸರ ಕ್ರಮ ಖಂಡಿಸಿ ಪ್ರತಿಭಟನೆ.‌

ಮಂಡ್ಯ : ಆಲಂಬಾಡಿಕಾವಲು ಗ್ರಾಮದಲ್ಲಿ ಪಿ.ಎಫ್.ಐ.ಸಂಘಟನೆಯ ಕಾರ್ಯಕರ್ತರು ಅಜ್ಞಾತ ಸ್ಥಳದಲ್ಲಿ ಗೌಪ್ಯ ಸಭೆ ನಡೆಸಿದವರನ್ನು ಕೇವಲ ಒಂದೇ ದಿನದಲ್ಲಿ ಜೈಲಿನಿಂದ ಬಿಡುಗಡೆ ಮಾಡಿದ ಪೋಲೀಸರ ಕ್ರಮವನ್ನು ಖಂಡಿಸಿ ಮಂಡ್ಯ ಕೆ.ಆರ್.ಪೇಟೆ ತಾಲ್ಲೂಕಿನ ವಿವಿಧ ಸಂಘಟನೆಗಳು ನೀಡಿದ್ದ ಕೆ.ಆರ್.ಪೇಟೆ ಸ್ವಯಂ ಪ್ರೇರಿತ ಬಂದ್ ಯಶಸ್ವಿಯಾಗಿ ನಡೆಯಿತು.
ಮೆಡಿಕಲ್, ಆಸ್ಪತ್ರೆ, ಹೊರತು ಪಡಿಸಿ ಉಳಿದ ಎಲ್ಲಾ ಸೇವೆಗಳು ಬಂದ್ ಆಗಿವೆ.
ಪಟ್ಟಣದ ಎಲ್ಲಾ ರಸ್ತೆಗಳು ಬಿಕೋ ಎನ್ನುತ್ತಿವೆ.ಪೊಲೀಸ್ ಇಲಾಖೆಯು ಅಹಿತಕರ ಘಟನೆಗಳು ನಡೆಯದಂತೆ ಸರ್ಕಲ್ ಇನ್ಸ್ ಪೆಕ್ಟರ್ ಸುಧಾಕರ್, ಸಬ್ ಇನ್ಸ್ ಪೆಕ್ಡರ್ ರವರಾದ ಡಿ.ಲಕ್ಷ್ಮಣ್, ಚಂದ್ರಶೇಖರ್ ನೇತೃತ್ವದಲ್ಲಿ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ.
ಪುರಸಭಾ ಸದಸ್ಯ ನಟರಾಜ್,
ವಿವಿಧ ಸಂಘಟನೆಗಳ ಪ್ರಮುಖರಾದ ಹೆಚ್.ಬಿ.ಮಂಜುನಾಥ್, ಡಿ.ಎಸ್.ವೇಣು, ಕೆ.ಎಸ್.ಕುಮಾರ್, ಭಾಸ್ಕರರಾಜೇ ಅರಸ್, ಬೇಕರಿ ದಿನೇಶ್, ಮುರುಗೇಶ್ ಸೇರಿದಂತೆ ನೂರಾರು ಪ್ರತಿಭಟನಾಕಾರರು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು.
ಗೌಪ್ಯ ಸಭೆ ನಡೆಸಿದ ಪಿ.ಎಫ್.ಐ ಸಂಘಟನೆಯ ಕಾರ್ಯಕರ್ತರನ್ನು ಒಂದೇ ದಿನದಲ್ಲಿ ಬುಡುಗಡೆ ಮಾಡಿದ ಪೋಲೀಸರ ಕ್ರಮವನ್ನು ಖಂಡಿಸಿದರು. ಪಿ.ಎಫ್.ಐ.ಸಂಘಟನೆಯನ್ನು ನಿಷೇಧಿಸುವಂತೆ ಒತ್ತಾಯ ಮಾಡಿದರು.

Share

About Bora nayak BIG TV NEWS, Mandya

Check Also

ಡಿಕೆಶಿ ವಿರುದ್ಧ ಯಡಿಯೂರಪ್ಪ ಹೊಸ ಬಾಂಬ್

ದಾವಣಗೆರೆ: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ವಿರುದ್ಧ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಸ್ಪೋಟಕ ಆರೋಪ ಮಾಡಿದ್ದಾರೆ.ಕೆಪಿಸಿಸಿ ಅಧ್ಯಕ್ಷ ಡಿ.ಕೆ. …

Leave a Reply

Your email address will not be published. Required fields are marked *

error: Content is protected !!