Breaking News
Hiring Reporter’s For more Information Contact Above Number 876 225 4007 . Program producer
Home / Breaking News / ಬಂಜಾರ ಸೇವಾ ಸಂಘದಿಂದ ಪ್ರತಿಭಟನೆ.

ಬಂಜಾರ ಸೇವಾ ಸಂಘದಿಂದ ಪ್ರತಿಭಟನೆ.

ಗುರುಮಠಕಲ್; ಯಾದಗಿರಿ ಜಿಲ್ಲಾ ಗುರುಮಠಕಲ್
ಪಟ್ಟಣದಲ್ಲಿ ಸೋಮವಾರದಂದು ಅಖಿಲ ಭಾರತೀಯ ಬಂಜಾರ ಸೇವ ಸಂಘ ಗುರುಮಠಕಲ್ ತಾಲ್ಲೂಕು ಘಟಕದ ವತಿಯೀದ ಕಲಬುರಗಿ ವಿಮಾನಾಶ್ರಯಕ್ಕೆ ಸೇವಾಲಾಲ್ ಸಂತರ ಹೆಸರಿಡುವಂತೆ ಆಗ್ರಹಿಸಿ ಪ್ರತಿಭಟನೆ ಮಾಡುವ ಮೂಲಕ ಮನವಿ ಪತ್ರವನ್ನು ತಹಸೀಲ್ದಾರರಿಗೆ ಸಲ್ಲಿಸಲಾಯಿತು.
ಪಟ್ಟಣದ ಕಾಕಲವಾರ ಕ್ರಾಸ್ ನಿಂದ ಬಸ್ ನಿಲ್ದಾಣದ ಮರ‍್ಗವಾಗಿ ಪ್ರತಿಭಟನಾ ಮೆರವಣ ಗೆಯ ಮೂಲಕ ಬಸವೇಶ್ವರ ವೃತ್ತದಲ್ಲಿ ಜಮಾವಣೆಗೊಂಡ ಸಮಾಜದ ಕರ‍್ಯರ‍್ತರು ತಹಸೀಲ್ದಾರ ಶ್ರೀಧರಾಚರ‍್ಯ ಅವರಿಗೆ ಮನವಿಪತ್ರವನ್ನು ಸಲ್ಲಿಸಿದರು.
ಕಲಬುರಗಿ ವಿಮಾನಾಶ್ರಯಕ್ಕೆ ಜಮೀನು ನೀಡಿದವರು ಬಂಜಾರ ಸಮುದಾಯದ ರೈತರು, ನ.೨೧ ರಂದು ಮಂದಿರವನ್ನು ಧ್ವಂಸಗೊಳಿಸಿದ್ದು ಬಂಜಾರ ಸಮುದಾಯದಲ್ಲಿ ನೋವುಂಟುಮಾಡಿದ್ದು, ದೇವಸ್ಥಾನವನ್ನು ಅದೆ ಸ್ಥಳದಲ್ಲಿ ಮರು ನರ‍್ಮಾಣ ಮಾಡುವುದು, ದೇವಸ್ಥಾನ ದ್ವಂಸ ಮಾಡಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದು ಮೂಲಕ ನಮ್ಮ ಸಮುದಾಯಕ್ಕೆ ನ್ಯಾಯ ನೀಡಿ ಮತ್ತು ಬಂಜಾರ ಸಮಾಜಕ್ಕೆ ಗೌರವ ಕೊಡುವ ಕೆಲಸವನ್ನು ರ‍್ಕಾರ ಮಾಡಬೇಕು ಎಂದು ಪ್ರತಿಭಟನಾಕಾರರು ಮನವಿ ಮಾಡಿದ್ದಾರೆ.
ಒಂದು ವೇಳೆ ರ‍್ಕಾರವು ನಮ್ಮ ಮನವಿ ಕೂಡಲೆ ಸ್ಪಂದಿಸದಿದ್ದರೆ ಅಥವ ವಿಳಂಭ ಧೋರಣೆ ಅನುಸರಿಸಿದರೆ ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಎಲ್ಲಾ ಭಾಗಗಳಿಂದ ಬಂಜಾರ ಸಮುದಾಯದ ಎಲ್ಲಾ ಜನರೊಡನೆ ಬೆಂಗಳೂರಿಗೆ ಬಂದು ಪ್ರತಿಭಟನೆಯನ್ನು ಮಾಡಲಾಗುತ್ತದೆ ಎಂದು ಎಚ್ಚಸಿದ್ದಾರೆ.
ಸಂಘದ ಗುರುಮಠಕಲ್ ತಾಲ್ಲೂಕು ಅಧ್ಯಕ್ಷ ಕಾಶಿನಾಥ ರಾಠೋಡ್, ಉದ್ಯಮಿ ನರೇಂದ್ರ ರಾಠೋಡ್, ಸುರೇಶ ರ‍್ಮಪೂರ, ಶರಣಪ್ಪ ಪವಾರ, ಚಂದು ನಾಯಕ, ಮೋಹನ ರಾಠೋಡ್, ಮನೋಹರ ಪವಾರ ಠಾಣಾಗುಂದಿ, ಜಯೇಂದ್ರ ಚವ್ಹಾಣ, ಬಾಲು ರಾಠೋಡ್, ಜೇಮ್ಲಾ ನಾಯಕ, ರವಿ ಪವಾರ, ತುಳಸಿರಾಮ ಪುಟಪಾಕ, ಭಿಕ್ಯಾ ನಾಯಕ, ಚಕ್ರಪಾಣ , ಹಣಮಂತು ರಾಠೋಡ, ಗೋಪಾಲ ಚವ್ಹಾಣ ಹಾಜರಿದ್ದರು.

Share

About NAGARAJ Patange BIG TV NEWS, Yadgiri

Check Also

ಡಿಕೆಶಿ ವಿರುದ್ಧ ಯಡಿಯೂರಪ್ಪ ಹೊಸ ಬಾಂಬ್

ದಾವಣಗೆರೆ: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ವಿರುದ್ಧ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಸ್ಪೋಟಕ ಆರೋಪ ಮಾಡಿದ್ದಾರೆ.ಕೆಪಿಸಿಸಿ ಅಧ್ಯಕ್ಷ ಡಿ.ಕೆ. …

Leave a Reply

Your email address will not be published. Required fields are marked *

error: Content is protected !!