Breaking News
Hiring Reporter’s For more Information Contact Above Number 876 225 4007 . Program producer
Home / Breaking News / ನೆರೆ ಪರಿಹಾರಕ್ಕೆ ವಾಟಾಳ ನಾಗರಾಜರಿಂದ ರಸ್ತೆ ತಡೆದು ಪ್ರತಿಭಟನೆ.

ನೆರೆ ಪರಿಹಾರಕ್ಕೆ ವಾಟಾಳ ನಾಗರಾಜರಿಂದ ರಸ್ತೆ ತಡೆದು ಪ್ರತಿಭಟನೆ.

 

ಹುಬ್ಬಳ್ಳಿ: ರಾಜ್ಯದಲ್ಲಿ ನೆರೆ ಪರಿಹಾರ ವಿಷಯದಲ್ಲಿ ಕೇಂದ್ರ ಸರ್ಕಾರ ಮಲತಾಯಿ ಧೋರಣೆ ಅನುಸರಿಸುತ್ತಿದೆ. ಈವರೆಗೆ ಒಂದು ಪೈಸೆ ನೆರೆ ಪರಿಹಾರ ಒದಗಿಸುವ ಕೆಲಸ ಮಾಡಿಲ್ಲ. ಕೂಡಲೇ 50 ಕೋಟಿ ನೆರೆ ಪರಿಹಾರ ಬಿಡುಗಡೆ ಮಾಡುವಂತೆ ಆರೋಪಿಸಿ ಕನ್ನಡ ಚಳುವಳಿ ವಾಟಾಳ ಪಕ್ಷ ಇಲ್ಲಿನ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದಲ್ಲಿ ತಪ್ಪು ಬಟ್ಟೆ ಧರಿಸಿ ರಸ್ತೆ ತಡೆ ನಡೆಸಿ ಪ್ರತಿಭಟನೆ ಮಾಡಿದರು.
ಈ ವೇಳೆ ಕನ್ನಡ ಚಳುವಳಿ ವಾಟಾಳ್ ಪಕ್ಷದ ವಾಟಾಳ ನಾಗರಾಜ ಮಾತನಾಡಿ, ರಾಜ್ಯದ ಬಹುತೇಕ ಜಿಲ್ಲೆಗಳು ನೆರೆಗೆ ತುತ್ತಾಗಿ, ಜನರು ಕಷ್ಟದಲ್ಲಿ ಜೀವನ ಸಾಗಿಸುವಂತಾಗಿದೆ. ಉತ್ತರ ಕರ್ನಾಟಕ ಸಂಪೂರ್ಣ ಕತ್ತಲೆಯಲ್ಲಿ ಮುಳುಗಿದ್ದು, ಕಣ್ಣೀರು, ನೋವು ಗೋಳು, ಮನೆ ಮಠ ಇಲ್ಲದೇ, ತುತ್ತು ಗಂಜಿಗೆ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.‌ ಹೀಗಾಗಿ ಉತ್ತರ ಕರ್ನಾಟಕದ ಜನರಿಗೆ ದೀಪಾವಳಿ ಹಬ್ಬ ಇಲ್ಲ. ಉತ್ತರ ಕರ್ನಾಟಕದ ಜನರ ಸಮಸ್ಯೆಗಳನ್ನು ಯಾರು ಕೇಳುವವರಿಲ್ಲ. ಇದು ಅತ್ಯಂತ ಗಂಭೀರ ಪರಿಸ್ಥಿತಿಯಾಗಿದೆ‌. ಕೇಂದ್ರ ಸರ್ಕಾರ ರಾಜ್ಯದ ನೆರೆ ವಿಚಾರದಲ್ಲಿ ಐವತ್ತು ಸಾವಿರ ಬಿಡುಗಡೆ ಮಾಡಲಿಲ್ಲ. ಈ ಬಗ್ಗೆ ರಾಜ್ಯದ ಕೇಂದ್ರದ ಸಂಸದರು ಪ್ರಮಾಣಿಕವಾಗಿ ಕೆಲಸ ಮಾಡಲಿಲ್ಲ ಎಂದು ಆರೋಪಿಸಿದರು.
ಇನ್ನೂ ಬಿಜೆಪಿ ಯವರು ಹುಬ್ಬಳ್ಳಿಯಲ್ಲಿ ಸಭೆ ಮಾಡಿ ಮುಂಬರುವ ಉಪಚುನಾವಣೆ ಬಗ್ಗೆ ಮಾತನಾಡಲು ಬರುವುದು. ಆದರೆ ನೆರೆಗೆ ಸಂಬಂಧಿಸಿದಂತೆ ಚರ್ಚೆ ಮಾಡಲು ಅವರಿಗೆ ಆಸಕ್ತಿ ಇಲ್ಲ‌‌. ಬಿಜೆಪಿ, ಕಾಂಗ್ರೇಸ್, ಜೆಡಿಎಸ್ ಗೆ ಜನರಿಗಿಂತ ರಾಜಕಾರಣ ಮುಖ್ಯವಾಗಿದೆ‌. ಕರ್ನಾಟಕ ಸರ್ಕಾರದಲ್ಲಿ ಮೂರು ಕಾಸು ಇಲ್ಲ. ಉತ್ತರ ಕರ್ನಾಟಕದಲ್ಲಿ ಎಷ್ಟು ಸಾವು-ನೋವು ಸೇರಿದಂತೆ ನೆರೆ ವಿಷಯಕ್ಕೆ ಸಂಬಂಧಿಸಿದಂತೆ ಸಮಗ್ರವಾಗಿ ಶ್ವೇತಪತ್ರ ಹೊರಡಿಸಬೇಕು. ಈ ದಿಸೆಯಲ್ಲಿ ಉತ್ತರ ಕರ್ನಾಟಕಕ್ಕೆ ಹೊಸ ಶಕ್ತಿ ಬೇಕಾಗಿದೆ. ಎಲ್ಲ ಪಕ್ಷದವರಿಗೆ ಈ ರೀತಿಯ ಕೆಲಸ ಮಾಡಲು ಆಗುವುದಿಲ್ಲ‌. ಹಾಗಾಗಿ ಎಲ್ಲ ಕನ್ನಡಪರ ಸಂಘಟನೆಗಳ ಒಂದಾಗಿ ನವಕರ್ನಾಟಕ ಕೆಲಸ ಮಾಡಬೇಕು ಆ ನಿಟ್ಟಿನಲ್ಲಿ ಎಲ್ಲ ಕನ್ನಡ ಪರ ಸಂಘಟನೆಗಳು ಕೆಲಸ ಮಾಡಬೇಕು. ಮುಂದಿನ ದಿನಗಳಲ್ಲಿ ಕೇಂದ್ರದ ಮಂತ್ರಿಗಳು ಎಲ್ಲೇ ಬಂದರು ಅವರ ವಿರುದ್ಧ ಪ್ರತಿಭಟನೆ ಮಾಡಿ ಆಕ್ರೋಶ ಹೊರಹಾಕಲಾಗುವುದು ಎಂದರು.
ಇನ್ನೂ ಮಹದಾಯಿ ವಿಚಾರದಲ್ಲಿ ಯಾರು ರಾಜಕೀಯ ಮಾಡದೇ ಯೋಜನೆ ಜಾರಿಗೆ ತರಲು ಶ್ರಮಿಸಬೇಕು. ಅಲ್ಲದೇ ಮಹದಾಯಿ ಯೋಜನೆಗೆ ಮಾಡಿದ ಖರ್ಚುಗಳನ್ನು ಪಾರದರ್ಶಕವಾಗಿ ಜನರಿಗೆ ತಿಳಿಸಬೇಕು. ಔರತ್ಕರ್ ವರದಿ ಜಾರಿಯಲ್ಲಿ ಮೋಸ ಆಗಿದ್ದು, ಸಂಪೂರ್ಣ ವರದಿ ಇನ್ನೂ ಜಾರಿಗೆ ಬಂದಿಲ್ಲ. ಕೂಡಲೇ ಸಂಪೂರ್ಣ ವರದಿ ಜಾರಿಗೆ ಮಾಡಬೇಕೆಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಕನ್ನಡ ಪರ ಸಂಘಟನೆಗಳ ಕಾರ್ಯಕರ್ತರು ಇದ್ದರು.

Share

About Vijayalakshmi

Check Also

ಡಿಕೆಶಿ ವಿರುದ್ಧ ಯಡಿಯೂರಪ್ಪ ಹೊಸ ಬಾಂಬ್

ದಾವಣಗೆರೆ: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ವಿರುದ್ಧ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಸ್ಪೋಟಕ ಆರೋಪ ಮಾಡಿದ್ದಾರೆ.ಕೆಪಿಸಿಸಿ ಅಧ್ಯಕ್ಷ ಡಿ.ಕೆ. …

Leave a Reply

Your email address will not be published. Required fields are marked *

error: Content is protected !!