Breaking News
Hiring Reporter’s For more Information Contact Above Number 876 225 4007 . Program producer
Home / Breaking News / ಕನಕಪೀಠದ ಶ್ರೀಗಳಿಗೆ ಅಪಮಾನ: ಸಚಿವ ಮಾಧುಸ್ವಾಮಿ ಅಮಾನತಿಗೆ ಆಗ್ರಹಿಸಿ ಪ್ರತಿಭಟನೆ.

ಕನಕಪೀಠದ ಶ್ರೀಗಳಿಗೆ ಅಪಮಾನ: ಸಚಿವ ಮಾಧುಸ್ವಾಮಿ ಅಮಾನತಿಗೆ ಆಗ್ರಹಿಸಿ ಪ್ರತಿಭಟನೆ.

 

ಹುಬ್ಬಳ್ಳಿ: ಕನಕ ಗುರು ಪೀಠದ ಶ್ರೀಗಳ ವಿರುದ್ದ ಕಾನೂನು ಮತ್ತು ಸಂಸದೀಯ ಸಚಿವ ಜೆ.ಸಿ.ಮಾಧುಸ್ವಾಮಿ ಅವಹೇಳನಕಾರಿ ಹೇಳಿಕೆ ನೀಡುವ ಮೂಲಕ ಕುರುಬರಿಗೆ ಅಪಮಾನ ಮಾಡಿದ್ದು, ಕೂಡಲೇ ಸಚಿವರನ್ನು ಪಕ್ಷದಿಂದ ವಜಾಗೊಳಿಸಬೇಕೆಂದು ಆಗ್ರಹಿಸಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಯುವ ಘರ್ಜನೆ ಇಲ್ಲಿನ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಭಾವಚಿತ್ರಕ್ಕೆ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸಿತು.
ಕನಕಜಯಂತಿ ನಿಮಿತ್ತ ನಡೆದ ಕಾರ್ಯಕ್ರಮ ಒಂದರಲ್ಲಿ ಅಧ್ಯಕ್ಷತೆ ವಹಿಸಿದ್ದ ಸಚಿವ ಜೆ.ಸಿ.ಮಾಧುಸ್ವಾಮಿ ಕಾರ್ಯಕ್ರಮದ ಉದ್ದಕ್ಕೂ ಕನಕಗುರು ಪೀಠದ ಸ್ವಾಮಿಗಳಿಗೆ ಏಕವಚನದಲ್ಲಿ ವಾಗ್ದಾಳಿ ನಡೆಸಿದಲ್ಲದೇ ಅವಾಚ್ಯ ಶಬ್ದಗಳ ಬಳಕೆ ಮಾಡಿದ್ದಾರೆ.‌ ಅಲ್ಲದೇ ಕನಕ ಜಯಂತಿ ಮೂರು ದಿನಗಳ ಮುಂಚೆ ಕನಕದಾಸರ ವೃತ್ತದಲ್ಲಿ ಕನಕದಾಸರ ಬೋರ್ಡ್ ನ್ನು ತೆರವುಗೊಳಿಸಿ ಕುರುಬ ಸಮೂದಾಯಕ್ಕೆ ಅಪಮಾನ ಮಾಡಿದ್ದು, ಕೂಡಲೇ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಸರ್ಕಾರ ತಕ್ಷಣವೇ ಮಾಧುಸ್ವಾಮಿ ಅವರನ್ನು ಅಮಾನತ್ತುಗೊಳಿಸಿ ಪಕ್ಷದಿಂದ ಉಚ್ಚಾಟನೆ ಮಾಡಬೇಕೆಂದು ಆಗ್ರಹಿಸಿ ತಹಶಿಲ್ದಾರರ ಮೂಲಕ ರಾಜ್ಯಪಾಲರಿಗೆ, ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.
ಇನ್ನೂ ಸರ್ಕಾರ ಈ ಬಗ್ಗೆ ಗಮನಹರಿಸದೇ ಹೋದರೆ ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಸಮಾಜದಿಂದ ಉಗ್ರ ಹೋರಾಟ ಮಾಡಲಾಗುವುದು. ಅಲ್ಲದೇ ಆ ಹೋರಾಟದಲ್ಲಿ ಸರ್ಕಾರಿ ಆಸ್ತಿ – ಪಾಸ್ತಿಗೆ ದಕ್ಕೆ ಆದರೆ ಅದಕ್ಕೆ ಸಚಿವ ಮಾಧುಸ್ವಾಮಿಯೇ ನೇರ ಹೊಣೆಯಾಗಲಿದ್ದಾರೆ. ಕೂಡಲೇ ರಾಜ್ಯಪಾಲರು ಮಾಧುಸ್ವಾಮಿಯನ್ನು ಅಮಾನತುಗೊಳಿಸಬೇಕೆಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಸಿದ್ದಣ್ಣ ತೇಜಿ, ಕಲ್ಲನಗೌಡ ಪಾಟೀಲ, ಧರ್ಮಣ್ಣ ಕುರಿ, ಗುರು ಲಕ್ಕುಂಡಿ, ರವಿ ಕಂಬಳಿ, ಚಂದ್ರಶೇಖರ ಕಣವಿ, ದೇವರಾಜ ಕನ್ಯಾಳ, ಲಕ್ಷ್ಮಣ ರಂಗಪ್ಪ, ನವೀನ ಮುನಿಯಪ್ಪನವರ, ರವಿ ಕಟ್ಟಿಮನಿ, ಗುರುಶಾಂತಗೌಡ ಪಾಟೀಲ ಸೇರಿದಂತೆ ಮುಂತಾದವರು ಇದ್ದರು.

Share

About Shaikh BIG TV NEWS, Hubballi

Check Also

ಡಿಕೆಶಿ ವಿರುದ್ಧ ಯಡಿಯೂರಪ್ಪ ಹೊಸ ಬಾಂಬ್

ದಾವಣಗೆರೆ: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ವಿರುದ್ಧ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಸ್ಪೋಟಕ ಆರೋಪ ಮಾಡಿದ್ದಾರೆ.ಕೆಪಿಸಿಸಿ ಅಧ್ಯಕ್ಷ ಡಿ.ಕೆ. …

Leave a Reply

Your email address will not be published. Required fields are marked *

error: Content is protected !!