Breaking News
Hiring Reporter’s For more Information Contact Above Number 876 225 4007 . Program producer
Home / Breaking News / ಶಿಕ್ಷಣ ಇಲಾಖೆಯ ಆಯುಕ್ತರ ವಜಾಗೆ ಆಗ್ರಹಿಸಿ ಪ್ರತಿಭಟನೆ.‌

ಶಿಕ್ಷಣ ಇಲಾಖೆಯ ಆಯುಕ್ತರ ವಜಾಗೆ ಆಗ್ರಹಿಸಿ ಪ್ರತಿಭಟನೆ.‌

 

ಹುಬ್ಬಳ್ಳಿ: ಸಾರ್ವಜನಿಕ ಶಿಕ್ಷಣ ಇಲಾಖೆ ನ. 26 ಸಂವಿಧಾನ ದಿನದ ವಿಷಯವಾಗಿ ವಿವಾದಾತ್ಮಕ ಸುತ್ತೊಲೆಯನ್ನು ಹೊರಡಿಸಿರುವ ಅಧಿಕಾರಿಗಳನ್ನು ಕೂಡಲೇ ಸೇವೆಯಿಂದ ವಜಾಗೊಳಿಸಬೇಕೆಂದು ಆಗ್ರಹಿಸಿ ಕರ್ನಾಟಕ ದಲಿತ ವಿಮೋಚನೆ ಸಮಿತಿ ತಹಶಿಲ್ದಾರರ ಕಚೇರಿ ಎದುರು ಪ್ರತಿಭಟನೆ ಮಾಡಿತು.
ಈ ವೇಳೆ ಪ್ರತಿಭಟನಾಕಾರರು ಕರ್ನಾಟಕ ಸರ್ಕಾರದ ಸಾರ್ವಜನಿಕ ಶಿಕ್ಷಣ ಇಲಾಖೆ ನ. 26 ರಂದು ಸಂವಿಧಾನ ದಿನ ಆಚರಿಸುವ ಕುರಿತು ಅ.28 ರಂದು ಸಂವಿಧಾನ ಮತ್ತು ಸಂವಿಧಾನದ ಪಿತಾಮಹ ಡಾ.ಬಿ.ಆರ್.ಅಂಬೇಡ್ಕರ್ ಕುರಿತು ವಿವಾದಾತ್ಮಕ ಅಂಶಗಳನ್ನು ಸುತ್ತೋಲೆಯಲ್ಲಿ ಪ್ರಕಟ ಮಾಡಿದ್ದು, ಅದರಲ್ಲಿ ಅಂಬೇಡ್ಕರ್ ಅವರ ಕುರಿತು ಅಪಮಾನ ಮಾಡುವ ಪದಗಳನ್ನು ಬರೆಯಲಾಗಿದೆ. ಈ ಮೂಲಕ ಮಕ್ಕಳಿಗೆ ಇತಿಹಾಸ ಕುರಿತು ತಪ್ಪು ಮಾಹಿತಿ ಹೇಳಿಕೊಡಲಾಗುತ್ತಿದ್ದು ಇದನ್ನು ಕರ್ನಾಟಕ ದಲಿತ ವಿಮೋಚನೆ ಸಮಿತಿ ತೀವ್ರವಾಗಿ ಖಂಡಿಸುವುದು ಎಂದು ಆಗ್ರಹಿಸಿದರು.
ಇನ್ನೂ ಇಂತಹ ವಿವಾದಾತ್ಮಕ ಸುತ್ತೋಲೆ ಹೊರಡಿಸಿರುವ ಶಿಕ್ಷಣ ಇಲಾಖೆ ಆಯುಕ್ತರು ವಿದ್ಯಾರ್ಥಿಗಳಿಗೆ ಮತ್ತು ಶಿಕ್ಷಕರಿಗೆ ತಪ್ಪು ಮಾಹಿತಿ ನೀಡಿ ಮನುವಾದದ ವಿಷಬೀಜ ಬಿತ್ತುವ ಹುನ್ನಾರ ಮಾಡುತ್ತಿದ್ದಾರೆ. ಇಂತಹ ವಿವಾದಾತ್ಮಕ ಸುತ್ತೋಲೆ ಹೊರಡಿಸಿದ ಇಲಾಖೆಯ ಪ್ರಧಾನ ಕಾರ್ಯದರ್ಶಿ ಉಮಾಶಂಕರ ನೇರ ಕಾರಣರಾಗಿದ್ದು, ಇವರನ್ನು ಕೂಡಲೇ ನೈತಿಕ ಹೊಣೆ ಹೊತ್ತು ರಾಜ್ಯ ಸರ್ಕಾರ ಸೇವೆಯಿಂದ ವಜಾ ಮಾಡಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ತಹಶಿಲ್ದಾರರ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.
ಇನ್ನೂ ಇದಕ್ಕೂ ಮುನ್ನ ರೈಲ್ವೆ ನಿಲ್ದಾಣದ ಬಳಿಯ ಅಂಬೇಡ್ಕರ್ ವೃತ್ತದಿಂದ ಶವಯಾತ್ರೆ ಮಾಡಿದ ಪ್ರತಿಭಟನಾಕಾರರು ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಶವವನ್ನು ಸುಟ್ಟು ತಮ್ಮ ಆಕ್ರೋಶ ಹೊರಹಾಕಿದರು.
ಪ್ರತಿಭಟನೆಯಲ್ಲಿ ಸುರೇಶ ಖಾನಾಪುರ, ಆನಂದ ಪೂಜಾರ, ಕೆಂಚಪ್ಪ ಮಲ್ಲಮ್ಮನವರ, ಎಮ್‌.ಸಿದ್ದಾರ್ಥ ಸೇರಿದಂತೆ ನೂರಾರು ಸಮಿತಿಯ ಪದಾಧಿಕಾರಿಗಳು ಇದ್ದರು.

Share

About Shaikh BIG TV NEWS, Hubballi

Check Also

ಡಿಕೆಶಿ ವಿರುದ್ಧ ಯಡಿಯೂರಪ್ಪ ಹೊಸ ಬಾಂಬ್

ದಾವಣಗೆರೆ: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ವಿರುದ್ಧ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಸ್ಪೋಟಕ ಆರೋಪ ಮಾಡಿದ್ದಾರೆ.ಕೆಪಿಸಿಸಿ ಅಧ್ಯಕ್ಷ ಡಿ.ಕೆ. …

Leave a Reply

Your email address will not be published. Required fields are marked *

error: Content is protected !!