Breaking News
Home / Breaking News / ಮಾನವೀಯತೆ ಮೆರೆದ ಮಹಿಳಾ PSI.

ಮಾನವೀಯತೆ ಮೆರೆದ ಮಹಿಳಾ PSI.

Spread the love

ಅಮರಾವತಿ : ಮಹಿಳಾ ಪಿಎಸ್ ಐವೊಬ್ಬರು ಅಂತ್ಯಕ್ರಿಯೆಗಾಗಿ ಅನಾಥ ಶವವನ್ನು ಭುಜದ ಮೇಲೆ ಇಟ್ಟು 2 ಕಿ.ಮೀ ದೂರ ಹೊತ್ತುಕೊಂಡು ಹೋಗಿ ಶವ ಸಂಸ್ಕಾರ ಮಾಡಿ ಮಾನವೀಯತೆ ಮರೆದಿದ್ದಾರೆ.

ಆಂಧ್ರಪ್ರದೇಶದ ಶ್ರೀಕಾಕುಲಂ ಜಿಲ್ಲೆಯಲ್ಲಿ ಗ್ರಾಮವೊಂದರಲ್ಲಿ ಈ ಘಟನೆ ನಡೆದಿದೆ. ಕಾಸಿಬುಗ್ಗ ಪೊಲೀಸ್ ಠಾಣೆಯ ಮಹಿಳಾ ಪಿಎಸ್ ಐ ಕೆ.ಸಿರಿಶಾ ಅನಾಥ ಶವವನ್ನು ಇಬ್ಬರು ವ್ಯಕ್ತಿಗಳೊಂದಿಗೆ ಸೇರಿ 2 ಕಿ.ಮೀ ನಡೆದು ಶವವನ್ನು ಅಂತ್ಯಕ್ರಿಯೆ ನೆರವೇರಿಸಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಅಡವಿ ಕೊಥುರ್ ಬಳಿ ಅಪರಿಚಿತ ವ್ಯಕ್ತಿಯ ಶವ ಇರುವ ಮಾಹಿತಿ ತಿಳಿದ ಮಹಿಲಾ ಪಿಎಸ್ ಐ ಸಿರಿಶಾ ತಕ್ಷಣ ಆ ಸ್ಥಳಕ್ಕೆ ತೆರಳಿದ್ದಾರೆ. ಅಪರಿಚಿತ ವ್ಯಕ್ತಿ ಭಿಕ್ಷುಕನಾಗಿದ್ದು, ಅನಾರೋಗ್ಯದಿಂದ ರಸ್ತೆ ಬದಿಯಲ್ಲಿ ಸತ್ತು ಬಿದ್ದಿದ್ದಾನೆ.

ಸಿರಿಶಾ ಅವರೇ ಸ್ವತಃ ಮುಂದೆ ಬಂದು ಕೆಲ ಸ್ಥಳೀಯರ ಜೊತೆಗೆ ಮೃತದೇಹಕ್ಕೆ ಹೆಗಲು ಕೊಟ್ಟು ಅಂತ್ಯಕ್ರಿಯೆ ನಡೆಸಿದ್ದಾರೆ. ಸದ್ಯ ಎಸ್ ಐ ಯ ಈ ಕೆಲಸ ಭಾರೀ ಮೆಚ್ಚುಗೆಗೆ ಪಾತ್ರವಾಗಿದೆ.

About Admin BIG TV NEWS

Check Also

Featured Video Play Icon

ಎಲ್ಲಡೆ ಶಿವನ ಆರಾಧನೆ ಭಕ್ತಿಯಲ್ಲಿ ಮಿಂದೆದ್ದ ಹುಬ್ಬಳ್ಳಿಯ ಜನರು | MAHA SHIVARATRI | BIG TV NEWS

Spread the love

Leave a Reply

Your email address will not be published. Required fields are marked *

error: Content is protected !!