Breaking News
Hiring Reporter’s For more Information Contact Above Number 876 225 4007 . Program producer
Home / ಜಿಲ್ಲೆ / ಮಂಡ್ಯ / ಸರ್ಕಾರಿ ಕಚೇರಿ ಎದುರು ಪಡಿತರಕ್ಕಾಗಿ ಸಾರ್ವಜನಿಕರ ಪರದಾಟ.

ಸರ್ಕಾರಿ ಕಚೇರಿ ಎದುರು ಪಡಿತರಕ್ಕಾಗಿ ಸಾರ್ವಜನಿಕರ ಪರದಾಟ.

ಚಿಕ್ಕೋಡಿ: ಇಲ್ಲಿ ರಾತ್ರಿ ಆದರೆ ಸಾಕು ಸರ್ಕಾರಿ ಕಚೇರಿ ಎದುರು ಜಮಾವಣೆ ಆಗುತ್ತಿದ್ದಾರೆ ಜನ,ನಿತ್ಯವೂ ಇವರಿಗೆ ತಪ್ಪದ ಪರದಾಟ,ದಿನದ ದುಡಿಮೆ ಬಿಟ್ಟು ಕ್ಯೂನಲ್ಲಿ ಕಾಯುತ್ತ ನಿಲ್ಲುವ ಸ್ಥಿತಿ..ಅದ್ಯಾಕೆ ಅಂತೀರಾ ಈ ಸ್ಟೋರಿ ನೊಡಿ..
ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನಲ್ಲಿ ಕೃಷ್ಣಾ ನದಿ ಪ್ರವಾಹ ಬಂದು ಹೋಗಿ ಎರಡು ತಿಂಗಳು ಕಳೆಯಿತು ಹಲವು ಜನ ಮನೆಗಳನ್ನು ಕಳೆದುಕೊಂಡು ಬೀದಿಗೆ ಬಿದ್ದರು.
ಜೀವ ಉಳಿಸಿಕೊಳ್ಳುವ ಧಾವಂತದಲ್ಲಿ ಮನೆ ಬಿಟ್ಟು ಬಂದವರ ದಾಖಲೆಗಳು ಹೊಳೆಯ ನೀರಿನಲ್ಲಿ ಹರಿದುಹೋಗಿದ್ದರಿಂದ ಸದ್ಯ ಪಡಿತರ ಚೀಟಿ ಇಲ್ಲದೆ ತಿಂಗಳ ರೇಷನ್ ಕೂಡ ಸಿಗುತ್ತಿಲ್ಲ ಹೀಗಾಗಿ ಹೊಸ ಪಡಿತರ ಚೀಟಿ ಮತ್ತು ಹಳೆಯ ಪಡಿತರ ಚೀಟಿಯ ನಕಲು ಪ್ರತಿ ಪಡೆಯಲು ಜನರು ಆಹಾರ ಇಲಾಖೆಯ ಎದುರು ಕ್ಯೂ ಮಾಡಿ ನಿಲ್ಲಬೇಕಾಗಿದೆ..
ಒಂದು ಕಡೆ ಜಮೀನುಗಳಿಗೆ ನೀರು ನುಗ್ಗಿ ಬೆಳೆ ಹಾನಿಯಾಗಿದ್ದರಿಂದ ಅತ್ತ ಕೂಲಿ ಕೆಲಸವೂ ಸಿಗದೆ ಇತ್ತ ಕಡೆ ರೇಷನ್ ಕೂಡ ಸಿಗದೆ ಸಂತ್ರಸ್ಥರು ತುತ್ತು ಅನ್ನಕ್ಕಾಗಿ ಪರಿತಪಿಸುವಂತಾಗಿದ್ದು ಹಗಲು ರಾತ್ರಿ ಎನ್ನದೆ ಅಥಣಿ ತಹಶಿಲ್ದಾರ ಕಚೆರಿ ಎದುರು ವಾಸ್ತವ್ಯ ಮಾಡುತ್ತಿದ್ದಾರೆ…
ಇನ್ನೂ ಅಧಿಕಾರಿಗಳು ಮದ್ಯಾಹ್ನ ಒಂದು ಗಂಟೆಗೆ ಬಂದು ನಾಲ್ಕು ಗಂಟೆಗೆ ಮನೆಗೆ ತೆರಳುತ್ತಿದ್ದು ಸರ್ವರ್ ಬ್ಯೂಜಿ ಎಂದು ಹೇಳಿ ಕೈ ತೊಳೆದುಕೊಳ್ಳುತ್ತಿದ್ದಾರೆ ಆದ್ದರಿಂದ ತಮ್ಮ ಸಮಸ್ಯೆ ಆದಷ್ಟು ಬೇಗ ಬಗೆಹರಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ..

Share

About Site Default

Check Also

ರಾಜ್ಯ ಸರ್ಕಾರದಿಂದ ರೈತ ಸಮುದಾಯಕ್ಕೆ `ಶುಭಸುದ್ದಿ

ಮಂಡ್ಯ : ರಾಜ್ಯ ಸರ್ಕಾರವು ರೈತರಿಗೆ ಸಿಹಿಸುದ್ದಿ ನೀಡಲು ಮುಂದಾಗಿದ್ದು, ರಾಜ್ಯದಲ್ಲಿ ಯಶಸ್ವಿನಿ ಯೋಜನೆಯನ್ನು ಮತ್ತೆ ಜಾರಿಗೆ ತರಲು ಚಿಂತನೆ …

Leave a Reply

Your email address will not be published. Required fields are marked *

error: Content is protected !!