Breaking News
Hiring Reporter’s For more Information Contact Above Number 876 225 4007 . Program producer
Home / Breaking News / ವಿಜಯಪುರ ಸೈನಿಕ ಶಾಲೆಯ ಹಳೆ ವಿದ್ಯಾರ್ಥಿಗೆ ರಫೆಲ್‌ ಸಾರಥ್ಯ

ವಿಜಯಪುರ ಸೈನಿಕ ಶಾಲೆಯ ಹಳೆ ವಿದ್ಯಾರ್ಥಿಗೆ ರಫೆಲ್‌ ಸಾರಥ್ಯ

Spread the love

ವಿಜಯಪುರ : ದೇಶದ ರಕ್ಷಣಾ ಸಾಮರ್ಥ್ಯದ ಬಲಿಷ್ಠ ಬತ್ತಳಿಕೆ ಸೇರುತ್ತಿರುವ ರಫೆಲ್‌ ಯುದ್ಧ ವಿಮಾನದ ಮೊದಲ ಪೈಲಟ್ ತಂಡದಲ್ಲಿ ವಿಜಯಪುರ ಸೈನಿಕ ಶಾಲೆಯ ಹಳೆಯ ವಿದ್ಯಾರ್ಥಿ ಸ್ಥಾನ ಗಿಟ್ಡಿಸಿದ್ದಾನೆ. ಹೀಗಾಗಿ ಇಲ್ಲಿನ ಸೈನಿಕ ಶಾಲೆಯಲ್ಲಿ ಸಂಭ್ರಮ ಮನೆ ಮಾಡಿದೆ.

1994 – 2001 ರ ವರೆಗೆ 7 ವರ್ಷ ವಿಜಯಪುರ ಸೈನಿಕ ಶಾಲೆಯಲ್ಲಿ ಓದಿದ್ದ ಅರುಣಕುಮಾರ ಎಂಬ ಪ್ರತಿಭಾವಂತ ವಿದ್ಯಾರ್ಥಿ. ಈ ಸಮರ ಸೇನಾನಿಗೆ ಭಾರತಕ್ಕೆ ಆಗಮಿಸಿರುವ ಫ್ರಾನ್ಸ್ ನಿರ್ಮಿತ ರಫೆಲ್‌ ಯುದ್ಧ ವಿಮಾನ ಮುನ್ನಡೆಸುವ ಅವಕಾಶ ದೊರಕಿದೆ.

ಇದೇ ಮೊದಲ ಬಾರಿಗೆ ಭಾರತದ ರಕ್ಷಣಾ ಪಡೆಯ ವಾಯು ಸೇನಾ ಬಲಕ್ಕೆ ಫ್ರಾನ್ಸ್ ನಿರ್ಮಿತ ಐದು ರಫೆಲ್ ವಿಮಾನಗಳು ಸೇರ್ಪಡೆ ಆಗುತ್ತಿದೆ.

ಬುಧವಾರ ಭಾರತದ ಹರಿಯಾಣದ ಅಂಬಾಲಾ ಏರಬೇಸ್ ಗೆ ಬಂದಿಳಿದ ರಫೆಲ್ ವಿಮಾನ ನಡೆಸುವ ಅವಕಾಶ ಅರುಣಕುಮಾರಗೆ ದೊರಕಿದೆ. ಹೀಗಾಗಿ ಸದರಿ ಅರುಣಕುಮಾರ ಓದಿದ ವಿಜಯಪುರ ಸೈನಿಕ ಶಾಲೆಯಲ್ಲಿ ಹಬ್ಬದ ಸಂಭ್ರಮ ಮನೆ ಮಾಡಿದೆ.

Check Also

ವಿಮಾನ ದುರಂತ: ಮೃತಪಟ್ಟ ಕುಟುಂಬಕ್ಕೆ ಪರಿಹಾರ ಘೋಷಿಸಿದ ಕೇರಳ

Spread the loveತಿರುವನಂತಪುರಂ: ಕೋಳಿಕ್ಕೋಡ್ ವಿಮಾನ ದುರಂತದಲ್ಲಿ ಮೃತಪಟ್ಟ ಕುಟುಂಬಗಳಿಗೆ ಕೇರಳ ಸರ್ಕಾರ ತಲಾ 10 ಲಕ್ಷ ರೂಪಾಯಿ ಪರಿಹಾರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Hiring Reporter’s For more Information Contact Above Number 876 225 4007 . Program producer
error: Content is protected !!