Breaking News
Hiring Reporter’s For more Information Contact Above Number 876 225 4007 . Program producer
Home / ತಂತ್ರಜ್ಞಾನ / ಕರ್ನಾಟಕ / ಬೆಳಗಾವಿಯಲ್ಲಿ ಮತ್ತೆ ಮಳೆ ಅಬ್ಬರ : ಜನ ಜೀವನ ಅಸ್ತವ್ಯಸ್ತ

ಬೆಳಗಾವಿಯಲ್ಲಿ ಮತ್ತೆ ಮಳೆ ಅಬ್ಬರ : ಜನ ಜೀವನ ಅಸ್ತವ್ಯಸ್ತ

ಬೆಳಗಾವಿ:- ನೆರೆ ಹಾವಳಿಯಿಂದ ಬದುಕು ಕಳೆದುಕೊಂಡ ಉತ್ತರ ಕರ್ನಾಟಕದ ಜನತೆ ಭಾನುವಾರ ರಾತ್ರಿ ಸುರಿದ ಧಾರಾಕಾರ ಮಳೆಯಿಂದ ಮತ್ತೆ ತತ್ತರಿಸಿ ಹೋಗಿದೆ ಜಿಲ್ಲೆಯಾದ್ಯಾಂತ ಬಾರಿ ಪ್ರಮಾಣದ ಮಳೆಯಾಗಿದ್ದು ರಸ್ತೆ ಸಂಚಾರ ಖಡಿತಗೊಂಡಿದೆ  ಸಂಕೇಶ್ವರ ನಗರವಂತು ಮಳೆಯ ಆರ್ಭಟಕ್ಕೆ ಅಕ್ಷರಶಹಃ ನಲುಗಿಹೋಗಿದೆ.

ಮಳೆ,ಮಳೆ, ಮಳೆ ಎತ್ತ ನೋಡಿದತ್ತ ಮಳೆ ಮತ್ತೆ ಪ್ರವಾದ ಬೀತಿಯಲ್ಲಿ ಉತ್ತರ ಕರ್ನಾಟಕದ ಜನತೆ ಕೈಯಲ್ಲಿ ಜೀವ ಹಿಡಿದು ಬದುಕುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಭಾನುವಾರ ಸುರಿದ ಮಳೆ ಮತ್ತೆ ಆತಂಕ ಸೃಷ್ಟಿಸಿದ್ದು ಕೆಲವೆಡೆ ರಸ್ತೆ, ಸೇತುವೆಗಳು ಸಂಪೂರ್ಣ ಸ್ಥಗಿತಗೊಂಡಿವೆ ಇನ್ನೂ ಕೃಷ್ಣಾ, ಮಲಪ್ರಭಾ, ಘಟಪ್ರಭಾ ನದಿಗಳಲ್ಲಿ ನೀರಿನ ಮಟ್ಟ ಹೆಚ್ಚುತ್ತಲೇ ಇದ್ದು ನದಿ ತಟದ ಗ್ರಾಮಸ್ಥರು ಗಂಟುಮೂಟೆ ಕಟ್ಟುವಂತಾಗಿದೆ ಅದರಲ್ಲೂ ಹುಕ್ಕೇರಿ ತಾಲೂಕಿನ ಸಂಕೇಶ್ವರ ನಗರ ನಿನ್ಞೆಯಾದ ಮಳೆಗೆ ಕಕ್ಕಾಬಿಕ್ಕಿಯಾಗಿದ್ದು ಸುಳ್ಳಲ್ಲ ನಗರದ ಲಕ್ಷ್ಮಿ ಗುಡಿ ಹತ್ತಿರ ಹಳ್ಳದಲ್ಲಿ ಆರು ಕಾರು ಟ್ರ್ಯಾಕ್ಟರ್ ಕ್ರೂಸರ್ ಹಾಗೂ ಸಣ್ಣ ಪ್ರಮಾಣದ ವಾಹನಗಳು ಮುಳುಗಿ ಕೊಚ್ಚಿ ಹೋಗಿವೆ.

ಕಾಕತಿ ಹೊನಗಾ  ರಸ್ತೆಗಳು ಜಲಾವೃತಗೊಂಡಿವೆ. ಗ್ಲೋಬ್ ಟಾಕೀಸ್ ರೋಡ್ ಫಿಶ್ ಮಾರ್ಕೆಟ್ , ಬೆಳಗಾವಿ ನಗರದ ತಗ್ಗು ಪ್ರದೇಶಗಳಂತೂ ತುಂಬಿ ಹರಿಯುತ್ತಿದ್ದು, ಮತ್ತೆ ನಗರದಲ್ಲಿ ಜನಜೀವನ ಕುಂಠಿತಗೊಂಡಿದೆ. ಸುತಗಟ್ಟಿಯ ಶ್ರೀರಾಮ್ ಧಾಬಾ ಹತ್ತಿರವೂ ಇದೇ ರೀತಿಯ ಅವಾಂತರ ಸೃಷ್ಟಿಯಾಗಿದೆ.ಯಾವುದೇ ಅನಾಹುತಗಳು  ನಡೆಯದಂತೆ ಕಾಕತಿ ಪಿಎಸ್ಐ ಶ್ರೀಶೈಲ ಕೌಜಲಗಿ ಮತ್ತು ಸಿಬ್ಬಂದಿಗಳು  ಮುಂಜಾಗ್ರತೆ ಕ್ರಮ ವಹಿಸಿದ್ದಾರೆ. ಭಾರೀ ಸುರಿಯುತ್ತಿರುವ ಮಳೆಗೆ ಸಂಕೇಶ್ವರ್ ಪಟ್ಟಣವೂ ಕೂಡ ನಡುಗಡ್ಡೆ ಯಂತಾಗಿದ್ದು ಇಲ್ಲಿಯ ವಾಹನಗಳು ನೀರಿನ ಪ್ರವಾಹಕ್ಕೆ ಕೊಚ್ಚಿ ಹೋಗುತ್ತಿರುವ ದೃಶ್ಯ ವಿಡಿಯೊಗಳಲ್ಲಿ  ಸೆರೆಯಾಗಿದೆ ಪ್ರವಾಹದಿಂದ ಈಗಾಗಲೇ ನೊಂದು ಬಂದಿರುವ ಸಂಕೇಶ್ವರ ಭಾಗದ ಅನೇಕ ಕುಟುಂಬಗಳು ಮತ್ತೆ ಮಳೆಯ ಹೊಡೆತಕ್ಕೆ   ನಲುಗಿ ಹೋಗಿದೆ ಒಟ್ಟಿನಲ್ಲಿ ಬೆಳಗಾವಿ ಜಿಲ್ಲೆಯಲ್ಲಿ ಮಳೆಯ ಆರ್ಭಟ ಮತ್ತೆ ಶುರುವಾಗಿದ್ದು ಮತ್ತೇನು ರಾದ್ಧಾಂತ ಮಾಡಲಿದೆಯೋ ಕಾದು ನೋಡಬೇಕು‌.

Share

About solaragoppa

Check Also

ರೈತರಲ್ಲಿ ಮನವಿ ಮಾಡಿಕೊಂಡ ಈರಣ್ಣ ಕಾಡಾಡಿ.

ಬೆಳಗಾವಿ : ರೈತರ ಅನುಕೂಲಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ಹಲವು ಕೃಷಿ ಮಸೂದೆಗಳನ್ನು ಜಾರಿಗೆ ತಂದಿದೆ. ಈ ಮಸೂದೆಗಳಲ್ಲಿ ತಪ್ಪಿದ್ರೆ …

Leave a Reply

Your email address will not be published. Required fields are marked *

error: Content is protected !!