Breaking News
Hiring Reporter’s For more Information Contact Above Number 876 225 4007 . Program producer
Home / ಅಪರಾಧ / ಬೆಳಗಾವಿ / ಮೂರ್ನಾಲ್ಕು ದಿನ ಬಿಟ್ಟು ಬಿಡದೇ ಸುರಿದ ಮಳೆಗೆ ಅನ್ನದಾತ ಕಂಗಾಲು.

ಮೂರ್ನಾಲ್ಕು ದಿನ ಬಿಟ್ಟು ಬಿಡದೇ ಸುರಿದ ಮಳೆಗೆ ಅನ್ನದಾತ ಕಂಗಾಲು.

 

ಚಿಕ್ಕೋಡಿ: ಕಳೆದ ಎರಡು ಮೂರು ದಿನಗಳಿಂದ ಬೆಳಗಾವಿ ಜಿಲ್ಲೆಯ ಹಲವೆಡೆ ಸುರಿದ ಭಾರಿ ಮಳೆಯಿಂದಾಗಿ ಒಂದು ಕಡೆ ಜನಜೀವನ ಅಸ್ತವ್ಯಸ್ತಗೊಂಡರೆ ಇನ್ನೊಂದು ಕಡೆ ಅನ್ನದಾತ ಅಕ್ಷರಶಃ ಬೀದಿಗೆ ಬೀಳುವ ಸ್ಥಿತಿ ಎದುರಾಗಿದೆ..
ಚಿಕ್ಕೋಡಿ ವ್ಯಾಪ್ತಿಯಲ್ಲಿ ಬರುವ ಅಥಣಿ, ರಾಯಭಾಗ, ಹುಕ್ಕೇರಿ, ನಿಪ್ಪಾಣಿ, ಕಾಗವಾಡ ತಾಲೂಕಿನಲ್ಲಿ ಸುರಿದ ಮಳೆ ಸದ್ಯ ಗಾಯದ ಮೇಲೆ ಬರೆ ಎಳೆದಂತಾಗಿದ್ದು ಮುಂಗಾರು ಮಳೆ ಸರಿಯಾಗಿ ಸುರಿಯದೆ ಬರ ಸ್ಥಿತಿ ಎದುರಿಸಿದ್ದ ಅನ್ನದಾತ ಈಗ ಭೋರ್ಗರೆದು ಸುರಿದ ಹಿಂಗಾರು ಮಳೆಗೆ ತತ್ತರಿಸಿ ಹೊಗಿದ್ದಾನೆ..
ರೈತರು ಜಮೀನಿನಲ್ಲಿ ಬೆಳೆದ ಪೈರು ರಾಶಿ ಆಗುವ ಮೊದಲೇ ಮಳೆಯ ಪಾಲಾಗಿದ್ದು ಸೋಯಾಬಿನ್,ಅವರೆ,ಉದ್ದು,ನೆಲಗಡಲೆ,ಮತ್ತು ಜೋಳ,ಹಾಗೂ ಮೆಕ್ಕೆಜೋಳ ಬೆಳೆದ ರೈತರು ಸದ್ಯ ನಷ್ಟ ಅನುಭವಿಸುವಂತಾಗಿದೆ..
ಮಹಾರಾಷ್ಟ್ರ ಘಟ್ಟ ಪ್ರದೇಶಗಳಲ್ಲಿ ಸುರಿದ ಭಾರೀ ಮಳೆಯಿಂದಾಗಿ ಕಳೆದ ಎರಡು ತಿಂಗಳ ಹಿಂದಷ್ಟೇ ಪ್ರವಾಹ ಎದುರಾಗಿ ಕಬ್ಬು,ದ್ರಾಕ್ಷಿ, ಮತ್ತು ಇತರ ಬೆಳೆಗಳು ನೀರು ಪಾಲಾಗಿದ್ದರೆ ಹಿಂಗಾರು ಮಳೆ ನಂಬಿ ಬಿತ್ತನೆ ಮಾಡಿದ ಬೀಜಗಳು ಜಮೀನಿನಲ್ಲಿ ನಿಂತ ನೀರಿನಿಂದಾಗಿ ಕೊಳೆತು‌ಹೊಗುತ್ತಿದ್ದು ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ..
ಇತ್ತ ಕೆಂದ್ರ ಸರ್ಕಾರ ಅಥವಾ ರಾಜ್ಯ ಸರ್ಕಾರ ರೈತರ ಕೈ ಹಿಡಿಯುತ್ತದೆ ಎನ್ನುವ ನಂಬಿಕೆ ಕೂಡ ದಿನಗಳೆದಂತೆ ಹುಸಿಯಾಗುತ್ತಿದ್ದು ಮಳೆಯಿಂದಾಗಿ ಹಸಿಯಾದ ನೆಲದ ಮೇಲೆ ಕುಳಿತು ರೈತರು ಕಣ್ಣೀರು ಹಾಕುತ್ತಿದ್ದಾರೆ..ಕೃಷ್ಣಾ ನದಿಯಲ್ಲಿ ಹೆಚ್ಚಿದ ಹರಿವಿನಿಂದಾಗಿ ಪ್ರವಾಹ ಸ್ಥಿತಿ ಎದುರಾಗಿದ್ದ 81 ಗ್ರಾಮಗಳಲ್ಲಿ ಸದ್ಯ ಮತ್ತೆ ನೀರವ ಮೌನ ಆವರಿಸಿದ್ದು ಬದುಕು ಕಟ್ಟಿಕೊಳ್ಳುವ ಸಮಯದಲ್ಲೇ ಮತ್ತೆ ಚಂಡಿ ಹಿಡಿದಂತೆ ಸುರಿಯುತ್ತಿರುವ ಮಳೆ ಸದ್ಯ ಜನರ ಕಣ್ಣೀರು ಹಾಕಿಸುತ್ತಿದೆ
ಇನ್ನೂ ಪ್ರವಾಹದಲ್ಲಿ ಕೊಚ್ಚಿಹೊದ ಹಾಗೂ ಹಾಳಾದ ಬೆಳೆಗೆ ಪರಿಹಾರ ಸಿಗುವ ನಿರೀಕ್ಷೆ ಯಲ್ಲಿ ಇದ್ದ ರೈತರು ಸಾಲ ಸೊಲ ಮಾಡಿ ಬಿತ್ತನೆ ಮಾಡಿದ್ದ ಬೀಜಗಳು ಕುಡಿ ಒಡೆವ ಮೊದಲೇ ಜಮೀನಿನಲ್ಲಿ ನಿಂತ ನೀರಿನಿಂದ ಹಾಳಾಗಿ ಹೋಗಿದ್ದು ಕೆಲ ತಿಂಗಳ ಹಿಂದಷ್ಟೇ ಹುಯ್ಯೋ ಹುಯ್ಯೋ ಮಳೆರಾಯ ಅಂದಿದ್ದ ರೈತರು ಮತ್ತು ಜನಸಾಮಾನ್ಯರು ಸದ್ಯ ಅಯ್ಯೋ ಸಾಕು ಮಹರಾಯ ಅನ್ನುವ ಸ್ಥಿತಿ ತಂದ ಮಳೆರಾಯನಿಗೆ ಹಿಡಿಶಾಪ ಹಾಕುತ್ತಿದ್ದಾರೆ..

ಪ್ರಕಾಶ BiG Tv News Chikodi

Share

About Vijayalakshmi

Check Also

ಕೈ ಕೊಟ್ಟ ಇವಿಎಂ ಪ್ಯಾಡ್

ಅಥಣಿ :  ಬಿಜೆಪಿ ಅಭ್ಯರ್ಥಿ ಮಹೇಶ ಕುಮಠಳ್ಳಿ ಕುಟುಂಬ ಸಮೇತ ಮತದಾನ ಮಾಡಲು ಬೆಳ್ಳಂಬೆಳಿಗ್ಗೆ ಮತಗಟ್ಟೆಗೆ ಬಂದಿದ್ದರು.ಮತಗಟ್ಟೆಯ ಪಕ್ಕದ ಆಂಜನೇಯ ದೇವಸ್ಥಾನಕ್ಕೆ …

Leave a Reply

Your email address will not be published. Required fields are marked *

error: Content is protected !!