Breaking News
Hiring Reporter’s For more Information Contact Above Number 876 225 4007 . Program producer
Home / ಜಿಲ್ಲೆ / ಬೆಂಗಳೂರು ಗ್ರಾಮಾಂತರ / ಮಕ್ಕಳ ಮುಗುಳು ನಗೆ ಮಾಸ ಪತ್ರಿಕೆ ಬಿಡುಗಡೆ ಮಾಡುವ ಮೂಲಕ ರಾಜ್ಯೋತ್ಸವ ಆಚರಣೆ.

ಮಕ್ಕಳ ಮುಗುಳು ನಗೆ ಮಾಸ ಪತ್ರಿಕೆ ಬಿಡುಗಡೆ ಮಾಡುವ ಮೂಲಕ ರಾಜ್ಯೋತ್ಸವ ಆಚರಣೆ.

ಆನೇಕಲ್: ಈ ಬಾರಿ ಕೆಲವು ಗೊಂದಲಗಳ ಮಧ್ಯೆಯು ರಾಜ್ಯದಲ್ಲಿ ಕನ್ನಡಿಗರ ಹಬ್ಬವಾದ ಕನ್ನಡ ರಾಜ್ಯೋತ್ಸವನ್ನು ಅದ್ದೂರಿಯಾಗಿ ಆಚರಣೆ ಮಾಡಿದ್ದು ಅದರಲ್ಲೂ ಈ ಬಾರಿ ಆನೇಕಲ್ ನಲ್ಲಿ ಕನ್ನಡ ರಾಜ್ಯೋತ್ಸವ ಸಾಕಷ್ಟು ವಿಶೇಷವಾಗಿತ್ತು , ಮಕ್ಕಳೆ ರೂಪಿಸಿರುವ ಮಾಸ ಪತ್ರಿಕೆಯೊಂದು ಕನ್ನಡ ರಾಜ್ಯೋತ್ಸವದಲ್ಲಿ ಬಿಡುಗಡೆಯಾಗಿದ್ದು ವಿಶೇಷ,
“ಮಕ್ಕಳ ಮುಗುಳು ನಗೆ” ಮಾಸ ಪತ್ರಿಕೆ ಬಿಡುಗಡೆ ಮಾಡಿ ಮಾತನಾಡಿದ ಆನೇಕಲ್ನ ಶಾಸಕರಾದ ಬಿ. ಶಿವಣ್ಣ ರವರು
“ಸರ್ಕಾರಿ ಶಾಲೆ ಮಕ್ಕಳು ಪತ್ರಿಕೆ ತರ್ತಾ ಇರೋದು ತುಂಬಾ ಖುಷಿ ವಿಷಯ ಇದನ್ನು ಮುಂದುವರೆಸಿ ಎಂದು ಹೇಳಿದರು, ನಾವು ಓದುತ್ತೇವೆ ನಮಗೂ ಕಳಿಸಿ ಕೊಡಿ ಎಂದು ಹೇಳಿದರು” ಮಕ್ಕಳ ಕಲಿಕಾ ಕೇಂದ್ರದಲ್ಲಿ ಕಲಿಯುತ್ತಿರುವ ಸರ್ಕಾರಿ ಶಾಲೆ ಮಕ್ಕಳು ಸೇರಿ ಮಾಸ ಪತ್ರಿಕೆ ರೂಪಿಸಿದ್ದಾರೆ.ಇನ್ನು ಪತ್ರಿಕೆಯಲ್ಲಿ ಮಕ್ಕಳ ಅದ್ಬುತವಾದ ಲೇಖನ ಬರೆದಿದ್ದು ಪತ್ರಿಕೆಯನ್ನು ನೋಡಿದ ನಾಯಕರು ಮಕ್ಕಳಿಗೆ ಪ್ರೋತ್ಸಾಹದ ನುಡಿಗಳನ್ನು ಹಾಡಿದರು.ನಂತರ ಮಾಸ ಪತ್ರಿಕೆ ಬಿಡುಗಡೆ ಮಾಡಿದ ಮಕ್ಕಳು ಮಾತನಾಡಿ ಕಾರ್ಯಕ್ರಮದ ಮಧ್ಯೆ ನಮ್ಮ ಮಾಸ ಪತ್ರಿಕೆ ಬಿಡುಗಡೆಗೆ ಅವಕಾಶ ಮಾಡಿಕೊಟ್ಟಿದ್ದು ತುಂಬಾ ಖುಷಿ ತಂದು ಕೊಟ್ಟಿದೆ ಅದರಲ್ಲೂ ಎಲ್ಲಾ ಶಾಲೆಯ ಶಿಕ್ಷಕರು ಹಾಗು ವಿಧ್ಯಾರ್ಥಿಗಳ ಮಧ್ಯೆ ನಮ್ಮ ಪತ್ರಿಕೆ ಹೊರ ಬಂದಿದೆ‌.ಅದಲ್ಲದೆ ಇಂದು ಕನ್ನಡಿಗರ ಹಬ್ಬದ ದಿನ ಇಂದು ನಮ್ಮ ಪತ್ರಿಕೆ ಇಂತಹ ವೇದಿಕೆಯಲ್ಲಿ ಬಿಡುಗಡಿಯಾಗಿದ್ದು ತುಂಬಾ ಸಂತೋಷ ತಂದು ಕೊಟ್ಟಿದೆ,ಅವಕಾಶ ಮಾಡಿಕೊಟ್ಟ ಎಲ್ಲರಿಗೂ ಧನ್ಯವಾದಗಳನ್ನು ತಿಳಿಸುತ್ತೇವೆಂದು ತಿಳಿಸಿದರು.ಕಾರ್ಯಕ್ರಮದಲ್ಲಿ ಸ್ಥಳೀಯ ಆನೇಕಲ್ ಶಾಸಕ ಬಿ.ಶಿವಣ್ಣ,ದಂಡಾಧಿಕಾರಿ ದಿನೇಶ್, ಪುರಸಭಾ ಸದಸ್ಯರು,ಶಿಕ್ಷಕರು,ವಿವಿಧ ಶಾಲಾ ಮಕ್ಕಳು,ಮಕ್ಕಳ ಜೊತೆಯಲ್ಲಿ ಸುಭಾಷ್ ಕಲಿಕಾ ಕೇಂದ್ರದ ಅನುರಾಧ ಆರ್,ಪುರುಷೋತ್ತಮ್ ವಕೀಲರು, ಹಾಗು ಹಲವರು ಭಾಗಿಯಾಗಿದ್ದರು.

Share

About Ambrish BIG TV NEWS,Anekal

Check Also

ನೂರಾರು ಜನರಿಂದ ಅಂತಾರಾಷ್ಟ್ರೀಯ ಯೋಗದಿನ ಆಚರಣೆ

ಇಂದು 5 ನೇ ಅಂತಾರಾಷ್ಟ್ರೀಯ ಯೋಗದಿನವಾಗಿದ್ದು ಈ ಹಿನ್ನೆಲೆ ದೇಶಾದ್ಯಂತ ಬೃಹತ್ ಯೋಗ ಶಿಬಿರಗಳನ್ನ ಆಯೋಜಿಸುವ ಮೂಲಕ ಯೋಗ ದಿನವನ್ನು …

Leave a Reply

Your email address will not be published. Required fields are marked *

error: Content is protected !!