Breaking News
Hiring Reporter’s For more Information Contact Above Number 876 225 4007 . Program producer
Home / Breaking News / ರಾಮ ಜನ್ಮಭೂಮಿ ತೀರ್ಪು ಹಿಂದುಗಳ ಪರ ಬರುವ ನಿರೀಕ್ಷೆಯಿದೆ: ಪ್ರಮೋದ ಮುತಾಲಿಕ್ ವಿಶ್ವಾಸ.

ರಾಮ ಜನ್ಮಭೂಮಿ ತೀರ್ಪು ಹಿಂದುಗಳ ಪರ ಬರುವ ನಿರೀಕ್ಷೆಯಿದೆ: ಪ್ರಮೋದ ಮುತಾಲಿಕ್ ವಿಶ್ವಾಸ.

 

ಹುಬ್ಬಳ್ಳಿ: ರಾಮಜನ್ಮ ಭೂಮಿ ತೀರ್ಪು ಹಿಂದುಗಳ ಪರ ಬರುವ ನಿರೀಕ್ಷೆ ಇದೆ‌ ಎಂಬ ವಿಶ್ವಾಸವನ್ನು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ ಮುತಾಲಿಕ್ ವ್ಯಕಪಡಿಸಿದರು.
ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಯ್ಯೋಧ್ಯ ರಾಮ‌ಜನ್ಮ ಸ್ಥಾನ ಎಂಬ ಬಗ್ಗೆ ಸಾಕಷ್ಟು ಪುರಾವೆಗಳನ್ನು ಕೋರ್ಟ್ ಗೆ ಒದಗಿಸಲಾಗಿದೆ. ದೇವಸ್ಥಾನ ಮೇಲ್ಗಡೆ ಮಸೀದ ‌ಕಟ್ಟಲಾಗಿದೆ ಎಂಬ ಪುರಾವೆ ಒದಗಿಸಿದ್ದು, ಹೀಗಾಗಿ ತೀರ್ಪು ಹಿಂದೂಪರ ಬರುವ ನಿರೀಕ್ಷೆ ಇದ್ದು, ಅಂದು ಕರ್ನಾಟಕದ ಎಲ್ಲಾ ದೇವಾಲಯಗಳಲ್ಲಿ ಪೂಜೆ ಹಾಗೂ ಸಿಹಿ‌ ಹಂಚಲಾಗುವದು.ಯಾರುಉ ಗಲಾಟೆ ಮಾಡುವದು, ಕಾನೂನಿ ಕೈಗೆ ತಗೆದುಕೊಳ್ಳುವದು ಮಾಡಬಾರದು ಎಂದು ಮನವಿ ಮಾಡಿದರು.
ಒಂದು ವೇಳೆ ತೀರ್ಪು ವ್ಯತರಿಕ್ತವಾಗಿ ಬಂದ್ರೆ ಎಲ್ಲಾ ಸಂಸದರಿಗೆ ಮನವಿ ಸಲ್ಲಿಸಲಾಗುವದು. ಪಾರ್ಲಿಮೆಂಟ್ ನಲ್ಲಿ ವಿಶೇಷ ನಿರ್ಣಯ ಪಾಸ್ ಮಾಡಿ ಹಿಂದುಗಳಿಗೆ ಒಪ್ಪಿಸುವಂತೆ ಮನವಿ ಮಾಡಲಾಗುವದು ಎಂದರು.
ರಾಜ್ ಸರ್ಕಾರ
ಟಿಪ್ಪು ವಿಚಾರಕ್ಕೆ ತಗೆದುಕೊಂಡ ನಿರ್ಧಾರ ಸ್ವಾಗತ. ಸಚಿವ ಸುರೇಶ ಕುಮಾರ ಅವರು ಪಠ್ಯ ಪುಸ್ತಕ ದಿಂದ ಟಿಪ್ಪು ಪಾಠವನ್ನು ತಗೆದುಹಾಕುವದಕ್ಕೆ ಸ್ವಾಗತ. ಟಿಪ್ಪು ‌ಮತಾಂಧ, ಹಿಂದುಉ ವಿರೋಧಿಯಾಗಿದ್ದು, ಇಸ್ಲಾಂ ರಾಜ್ಯ ಸ್ಥಾಪನೆ ಮಾಡಲು ಮುಂದಾಗಿದ್ದ.‌ ಹೀಗಾಗಿ ಪಠ್ಯಪುಸ್ತಕದಿಂದ ಟಿಪ್ಪುವನ್ನು ಕೈ ಬಿಡಬೇಕು ಎಂದರು.
ಬಾಂಗ್ಲಾ‌ ವಲಸಿಗರನ್ನು ಗುರುತಿಸಿ ಗಡಿಪಾರು ಮಾಡಿದ ಕಮೀಷನರ್ ಭಾಸ್ಕರ್ ರಾವ್ ಅವರಿಗೆ ಅಭಿನಂದನೆ. ಯಾವುದೇ ಒತ್ತಡಕ್ಕೆ ಮಣಿಯದೆ ಬಾಂಗ್ಲಾ ವಲಸಿಗರನ್ನು ಹೊರಹಾಕಬೇಕು. ಶ್ರೀರಾಮಸೇನೆ ಐವರನ್ನು ಒಳಗೊಂಡ ಸತ್ಯಶೋಧಕ‌ ಸಮಿತಿ ರಚನೆ ಮಾಡಿದೆ. ಜನವರಿಯಿಂದ ಬಾಂಗ್ಲಾ ವಲಸಿಗರನ್ನು ಒದ್ದು ಓಡಿಸಿಉ ಎಂಬ ಬೃಹತ್ ಹೋರಾಟ ಹಮ್ಮಿಕೊಳ್ಳಲಾಗುವದು ಎಂದರು.
ರಾಜ್ಯ ಸರ್ಕಾರ ಬಹಳ ದಿನ ಹೋಗುವದು ಕಷ್ಟ. ಸದ್ಯದ ಪರಸ್ಥಿತಿ‌ ನೋಡಿದ್ರೆ ರಾಜ್ಯದ ಜನರು ಗೊಂದಲದಲಿದೆ. ರಾಜ್ಯದಲ್ಲಿ ಅಸ್ತಿರ ವಾತಾವರಣ ಇದೆ ಎಂದರು.
ಸುದ್ದಿಗೋಷ್ಟಿಯಲ್ಲಿ
ಗಂಗಾಧರ ಕುಲಕರ್ಣಿ, ಮಹಾಲಿಂಗಪ್ಪ ಗುಂಜಿಗಾವಿ, ಆನಂದ ಶೆಟ್ಟಿ ಆಡ್ಯಾರ ಇದ್ದರು.

Share

About Shaikh BIG TV NEWS, Hubballi

Check Also

ಡಿಕೆಶಿ ವಿರುದ್ಧ ಯಡಿಯೂರಪ್ಪ ಹೊಸ ಬಾಂಬ್

ದಾವಣಗೆರೆ: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ವಿರುದ್ಧ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಸ್ಪೋಟಕ ಆರೋಪ ಮಾಡಿದ್ದಾರೆ.ಕೆಪಿಸಿಸಿ ಅಧ್ಯಕ್ಷ ಡಿ.ಕೆ. …

Leave a Reply

Your email address will not be published. Required fields are marked *

error: Content is protected !!