Breaking News
Hiring Reporter’s For more Information Contact Above Number 876 225 4007 . Program producer
Home / ಕ್ರೀಡೆ / ಅಧಿಕಾರ ಸಿಕ್ಕ ಮೇಲೆ ಮಿತೃತ್ವ ಮೆರೆಯುತ್ತಿರುವ ರವಿಶಾಸ್ರ್ತಿ.

ಅಧಿಕಾರ ಸಿಕ್ಕ ಮೇಲೆ ಮಿತೃತ್ವ ಮೆರೆಯುತ್ತಿರುವ ರವಿಶಾಸ್ರ್ತಿ.

ಮುಂಬೈ: ಅಧಿಕಾರವಿದ್ದಾಗ ಶತ್ರುಗಳೂ ಮಿತ್ರರಾಗುತ್ತಾರೆ ಎಂಬುದು ಬಿಸಿಸಿಐ ಅಧ‍್ಯಕ್ಷ ಸೌರವ್ ಗಂಗೂಲಿ ಮತ್ತು ರವಿಶಾಸ್ತ್ರಿ ವಿಚಾರದಲ್ಲೂ ಸತ್ಯವಾಗಿದೆ.
ಕೋಚ್ ಆಯ್ಕೆ ಪ್ರಕ್ರಿಯೆ ಸಂದರ್ಭ ರವಿಶಾಸ್ತ್ರಿ ಮತ್ತು ಅಂದು ಆಯ್ಕೆ ಸಮಿತಿ ಸದಸ್ಯರಾಗಿದ್ದ ಸೌರವ್ ಗಂಗೂಲಿ ನಡುವೆ ಕಿತ್ತಾಟ ನಡೆದಿತ್ತು. ಗಂಗೂಲಿ ಅಧ್ಯಕ್ಷರಾದ ಸುದ್ದಿ ತಿಳಿದ ಕೂಡಲೇ ಟ್ವಿಟರಿಗರೂ ಮೊದಲು ಕೋಚ್ ರವಿಶಾಸ್ತ್ರಿಯನ್ನು ಕಿತ್ತು ಹಾಕಿ ಎಂದು ಟಾಂಗ್ ಕೊಟ್ಟಿದ್ದರು.
ಆದರೆ ಇದೀಗ ಗಂಗೂಲಿ ಅಧ‍್ಯಕ್ಷರಾಗಿರುವುದರ ಬಗ್ಗೆ ರವಿಶಾಸ್ತ್ರಿಯನ್ನು ಕೇಳಿದಾಗ ‘ಗಂಗೂಲಿಗೆ ನಾಯಕತ್ವ ಎನ್ನುವುದು ಸ್ವಾಭಾವಿಕವಾಗಿ ಬಂದಿದೆ. ಅವರ ಆಯ್ಕೆ ಭಾರತೀಯ ಕ್ರಿಕೆಟ್ ಸರಿಯಾದ ದಿಕ್ಕಿನಲ್ಲಿ ಸಾಗುತ್ತಿದೆ ಎನ್ನುವುದಕ್ಕೆ ಸಾಕ್ಷಿ. ಇದು ಭಾರತೀಯ ಕ್ರಿಕೆಟ್ ಗೇ ಸಂದ ಗೆಲುವು’ ಎಂದು ರವಿಶಾಸ್ತ್ರಿ ಭರಪೂರ ಹೊಗಳಿಕೆಯಿತ್ತಿದ್ದಾರೆ.

Share

About Vijayalakshmi

Check Also

ಅಂತರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಘೋಷಿಸಿದ ಕ್ರಿಕೆಟಿಗ.

ರಾವಲ್ಪಿಂಡಿ : ಪಾಕಿಸ್ತಾನದ ವಿರುದ್ಧ ರಾವಲ್ಪಿಂಡಿಯಲ್ಲಿ ಟಿ20 ಸರಣಿ ಮುಗಿಯುತ್ತಿದ್ದಂತೆ ಜಿಂಬಾಬ್ವೆ ಮಾಜಿ ನಾಯಕ ಹಾಗೂ ಅನುಭವಿ ಆಲ್​ರೌಂಡರ್ ಎಲ್ಟನ್ ಚಿಗುಂಬುರ …

Leave a Reply

Your email address will not be published. Required fields are marked *

error: Content is protected !!