Breaking News
Hiring Reporter’s For more Information Contact Above Number 876 225 4007 . Program producer
Home / ಕ್ರೀಡೆ / ಕ್ರಿಕೆಟ್ / ರಿಷಬ್ ಪಂತ್ ಬೆಂಬಲಕ್ಕೆ ನಿಂತ ಕೋಚ್ ರವಿಶಾಸ್ರ್ತಿ.

ರಿಷಬ್ ಪಂತ್ ಬೆಂಬಲಕ್ಕೆ ನಿಂತ ಕೋಚ್ ರವಿಶಾಸ್ರ್ತಿ.

 

ನವದೆಹಲಿ: ಮಹೇಂದ್ರ ಸಿಂಗ್ ಧೋನಿ ಬದಲಿಗೆ ಟೀಂ ಇಂಡಿಯಾದಲ್ಲಿ ಸ್ಥಾನ ಪಡೆದಿರುವ ಯುವ ವಿಕೆಟ್​ ಕೀಪರ್ ರಿಷಭ್ ಪಂತ್​ರನ್ನ ಉತ್ತಮ ಆಟಗಾರನನ್ನಾಗಿ ತಯಾರು ಮಾಡುತ್ತೇನೆ ಎಂದು ಟೀಂ ಇಂಡಿಯಾ ಕೋಚ್ ರವಿಶಾಸ್ತ್ರಿ ಹೇಳಿದ್ದಾರೆ.ರಿಷಭ್ ಪಂತ್ಏಕದಿನ ವಿಶ್ವಕಪ್​ ನಂತರ ಟೀಂ ಇಂಡಿಯಾದಲ್ಲಿ ರಿಷಭ್ ಪಂತ್​ಗೆ ಸಾಕಷ್ಟು ಅವಕಾಶ ನೀಡಲಾಗುತ್ತಿದೆ. ಆದ್ರೆ, ಇಲ್ಲಿಯವರೆಗೆ ಪಂತ್ ಉತ್ತಮ ಪ್ರದರ್ಶನ ತೋರುವಲ್ಲಿ ವಿಫಲರಾಗಿದ್ದಾರೆ. ಹೀಗಾಗಿ ಪಂತ್ ಆಯ್ಕೆ ಬಗ್ಗೆ ಸಾಕಷ್ಟು ಚರ್ಚೆ ಶುರುವಾಗಿದೆ.ನವೆಂಬರ್ 3 ರಿಂದ ಆರಂಭವಾಗುವ ಬಾಂಗ್ಲಾ ವಿರುದ್ಧದ ಸರಣಿಗೆ ಪಂತ್​ ಆಯ್ಕೆಯಾಗಿದ್ದು, ನಮ್ಮ ಆಯ್ಕೆ ಏನಿದ್ದರೂ ರಿಷಭ್ ಪಂತ್ ಮಾತ್ರ ಎಂದು ಟೀಂ ಇಂಡಿಯಾ ಆಯ್ಕೆ ಸಮಿತಿ ಅಧ್ಯಕ್ಷ ಎಂಎಸ್​ಕೆ ಪ್ರಸಾದ್ ಹೇಳಿದ್ದರು. ಇದೀಗ ಸುದ್ದಿ ಮಾಧ್ಯಮವೊಂದರ ಸಂದರ್ಶನದಲ್ಲಿ ಮಾತನಾಡಿರುವ ಟೀಂ ಇಂಡಿಯಾ ಕೊಚ್ ರವಿಶಾಸ್ತ್ರಿ, ರಿಷಭ್ ಪಂತ್ ಅವರನ್ನು ಉತ್ತಮ ಆಟಗಾರನಾಗಿ ತಯಾರು ಮಾಡುವುದು ನನ್ನ ಜವಾಬ್ದಾರಿ ಎಂದಿದ್ದಾರೆ.

Share

About Vijayalakshmi

Check Also

ಅಂತರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಘೋಷಿಸಿದ ಕ್ರಿಕೆಟಿಗ.

ರಾವಲ್ಪಿಂಡಿ : ಪಾಕಿಸ್ತಾನದ ವಿರುದ್ಧ ರಾವಲ್ಪಿಂಡಿಯಲ್ಲಿ ಟಿ20 ಸರಣಿ ಮುಗಿಯುತ್ತಿದ್ದಂತೆ ಜಿಂಬಾಬ್ವೆ ಮಾಜಿ ನಾಯಕ ಹಾಗೂ ಅನುಭವಿ ಆಲ್​ರೌಂಡರ್ ಎಲ್ಟನ್ ಚಿಗುಂಬುರ …

Leave a Reply

Your email address will not be published. Required fields are marked *

error: Content is protected !!