Breaking News
Hiring Reporter’s For more Information Contact Above Number 876 225 4007 . Program producer
Home / ಸುದ್ದಿ / ದೇಶ-ವಿದೇಶ / ಆಟಗಾರರ ಆಯ್ಕೆ ವಿಚಾರವಾಗಿ ಬದಲಾವಣೆ ಮಾಡಿಕೊಂಡ ಆರ್ ಸಿಬಿ.

ಆಟಗಾರರ ಆಯ್ಕೆ ವಿಚಾರವಾಗಿ ಬದಲಾವಣೆ ಮಾಡಿಕೊಂಡ ಆರ್ ಸಿಬಿ.

ಬೆಂಗಳೂರು: ಐಪಿಎಲ್ ಕ್ರಿಕೆಟ್‌ನ 13ನೇ ಆವೃತ್ತಿಯ ಹರಾಜು ಪ್ರಕ್ರಿಯೆ ಡಿಸೆಂಬರ್​ನಲ್ಲಿ ನಡೆಯಲಿದ್ದು ಎಲ್ಲಾ ತಂಡಗಳೂ ಕೂಡಾ ಸಾಮರ್ಥ್ಯ ತೋರಿಸದ ಕೆಲವು ಆಟಗಾರರನ್ನು ಕೈಬಿಡಲು ನಿರ್ಧರಿಸಿವೆ. ಈ ಮಧ್ಯೆ ಆರ್‌ಸಿಬಿ ತಾನು ತಂಡದಿಂದ ಕೈಬಿಡಲು ನಿರ್ಧರಿಸಿದ ಆಟಗಾರನನ್ನು ಪ್ರತಿಭೆ ಪುರಸ್ಕರಿಸಿ ಇದೀಗ ತನ್ನಲ್ಲೇ ಉಳಿಸಿಕೊಳ್ಳಲು ನಿರ್ಧರಿಸಿದೆ.ಆರ್​ಸಿಬಿ 5 ಕೋಟಿ ರೂ ಮೊತ್ತ ನೀಡಿ ಖರೀದಿಸಿದ್ದ ಮುಂಬೈನ ಆಲ್​ರೌಂಡರ್​ ಶಿವಂ ದುಬೆಯನ್ನು ಕೈಬಿಡಲು ನಿರ್ಧರಿಸಿತ್ತು. ಆದರೆ ದುಬೆ ಕಳೆದವಾರವಷ್ಟೇ ಮುಗಿದ ವಿಜಯ್ ​ಹಜಾರೆ ಟ್ರೋಫಿಯಲ್ಲಿ ಉತ್ತಮ ಬ್ಯಾಟಿಂಗ್​ ಪ್ರದರ್ಶನ ನೀಡಿದ್ದರು. ಇದರ ಬೆನ್ನಲ್ಲೇ ಬಾಂಗ್ಲಾದೇಶದ ವಿರುದ್ಧದ ಟಿ20 ಸರಣಿಗೂ ಆಯ್ಕೆಯಾಗಿದ್ದಾರೆ. ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾದ ಬೆನ್ನಲ್ಲೇ ಶಿವಂ ದುಬೆಯನ್ನು ತಂಡದಿಂದ ಕೈಬಿಡುವ ಆಲೋಚನೆಯಿಂದ ಆರ್​ಸಿಬಿ ಹೊರಬಂದಿದ್ದು ತಂಡದಲ್ಲೇ ಉಳಿಸಿಕೊಳ್ಳಲು ನಿರ್ಧರಿಸಿದೆ. ಶಿವಂ ದುಬೆಯನ್ನು ಆರ್​ಸಿಬಿ ಬಿಟ್ಟುಕೊಟ್ಟಿದ್ದರೆ ಉತ್ತರದ ಫ್ರಾಂಚೈಸಿಗಳು ಖರೀದಿಸಲು ಕಾಯುತ್ತಿದ್ದರು ಎನ್ನಲಾಗಿದೆ. ದುಬೆ ವಿಜಯ್​ ಹಜಾರೆಯಲ್ಲಿ ಕರ್ನಾಟಕ ವಿರುದ್ದ ಕೇವಲ 67 ಎಸೆತಗಳಲ್ಲಿ ಶತಕ ಸಿಡಿಸಿ ತಂಡವನ್ನು ಗೆಲುವಿನ ಸನಿಹ ತಂದಿದ್ದರು. ಆರ್‌ಸಿಬಿ ಆಲ್​ರೌಂಡರ್​ ಆಟಗಾರನನ್ನು ತನ್ನಲ್ಲೇ ಉಳಿಸಿಕೊಂಡು ತಂಡದ ಸಮತೋಲನ ಕಾಪಾಡಲು ನಿರ್ಧರಿಸಿದೆ.13ನೇ ಆವೃತ್ತಿಯ ಐಪಿಎಲ್ ಹರಾಜು ಪ್ರಕ್ರಿಯೆ ಡಿಸೆಂಬರ್ 19 ರಂದು ಕೋಲ್ಕತ್ತಾದಲ್ಲಿ ನಡೆಯಲಿದೆ.

Share

About Vijayalakshmi

Check Also

ಟ್ರಂಪ್ ನೀತಿ ರದ್ದುಗೊಳಿಸಿದ ಜೋ ಬೈಡನ್.

ವಾಷಿಂಗ್ಟನ್: ರಾಷ್ಟ್ರೀಯ ವಲಸೆ ಕಾನೂನು ನ್ಯಾಯಯುತ ಹಾಗೂ ದಕ್ಷವಾಗಿ ಕಾರ್ಯನಿರ್ವಹಿಸುತ್ತಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳುವ ಭಾಗವಾಗಿ ಅಮೆರಿಕ ಅಧ್ಯಕ್ಷ ಜೋ ಬೈಡನ್, ಡೊನಾಲ್ಡ್ …

Leave a Reply

Your email address will not be published. Required fields are marked *

error: Content is protected !!