Breaking News
Hiring Reporter’s For more Information Contact Above Number 876 225 4007 . Program producer
Home / Breaking News / ಬಿಜೆಪಿ ಯಿಂದ ಹಣ ಪಡೆದಿರುವುದು ಸಾಬೀತಾದರೆ ರಾಜಕೀಯ ಬಿಡಲು ಸಿದ್ದ: ಶ್ರೀಮಂತ ಪಾಟೀಲ ಸ್ಪಷ್ಟನೆ.

ಬಿಜೆಪಿ ಯಿಂದ ಹಣ ಪಡೆದಿರುವುದು ಸಾಬೀತಾದರೆ ರಾಜಕೀಯ ಬಿಡಲು ಸಿದ್ದ: ಶ್ರೀಮಂತ ಪಾಟೀಲ ಸ್ಪಷ್ಟನೆ.

ಅಥಣಿ: ನಾನು ಒಂದು ಪೈಸೆ ಹಣ ಪಡೆದಿಲ್ಲ.‌ಹಣ ಪಡೆದಿರುವದನ್ನು ಸಾಬೀತು ಪಡಿಸಿದರೆ ರಾಜಕೀಯ ಬಿಟ್ಟು ಮನೆಯಲ್ಲಿ ಕೂಡುತ್ತೇನೆ ಎಂದು ಅನರ್ಹ ಶಾಸಕ, ಕಾಗವಾಡ ಬಿಜೆಪಿ ಅಭ್ಯರ್ಥಿ ಶ್ರೀಮಂತ ಪಾಟೀಲ ಸ್ಪಷ್ಟನೆ ನೀಡಿದರು.
ಅಥಣಿಯಲ್ಲಿ ಇಂದು ಬಿಜೆಪಿ ಪಕ್ಷವನ್ನು ಸೇರಲು ಹಣ ಪಡೆದಿರುವ ಆರೋಪದ ಕುರಿತು ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, ಬಿಸಿನೆಸ್ ಆಗಲಿ, ರಾಜಕೀಯವಾಗಲಿ ನಾವು ರೈತರು, ಜನರಿಗಾಗಿಯೇ ಮಾಡೋದು ಎಂದರು.
ಕಾಗವಾಡ ಕಾಂಗ್ರೆಸ್ ಅಭ್ಯರ್ಥಿ ರಾಜು‌ ಕಾಗೆಗೆ ಶ್ರೀಮಂತ ಪಾಟೀಲ ಟಾಂಗ್ ನೀಡಿದ ಪಾಟೀಲ, ರೈತರ ಸೇವೆಗಾಗಿ ಸಕ್ಕರೆ ಕಾರ್ಕಾನೆ ತೆರೆದಿದ್ದೇವೆ. ಜನರ ಸೇವೆಗಾಗಿ ರಾಜಕೀಯಕ್ಕೆ ಬಂದಿದ್ದೇವೆ ಎಂದು ತಿಳಿಸಿದರು.
ಡಿಸಿಎಂ‌ ಲಕ್ಷ್ಮಣ ಸವದಿ ನೇತೃತ್ವದಲ್ಲಿ ಚುನಾವಣೆ ಎದುರಿಸುತ್ತೇವೆ ಎಂದರು.

Share

About Prakash s kamble BIG TV NEWS, Athani

Check Also

ಡಿಕೆಶಿ ವಿರುದ್ಧ ಯಡಿಯೂರಪ್ಪ ಹೊಸ ಬಾಂಬ್

ದಾವಣಗೆರೆ: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ವಿರುದ್ಧ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಸ್ಪೋಟಕ ಆರೋಪ ಮಾಡಿದ್ದಾರೆ.ಕೆಪಿಸಿಸಿ ಅಧ್ಯಕ್ಷ ಡಿ.ಕೆ. …

Leave a Reply

Your email address will not be published. Required fields are marked *

error: Content is protected !!