Breaking News
Hiring Reporter’s For more Information Contact Above Number 876 225 4007 . Program producer
Home / Breaking News / ಅಥಣಿ‌, ಕಾಗವಾಡದಲ್ಲಿ ರಾಷ್ಟ್ರೀಯ ಪಕ್ಷಗಳಿಗೆ ಬಂಡಾಯದ ಬಿಸಿ.

ಅಥಣಿ‌, ಕಾಗವಾಡದಲ್ಲಿ ರಾಷ್ಟ್ರೀಯ ಪಕ್ಷಗಳಿಗೆ ಬಂಡಾಯದ ಬಿಸಿ.

 

 

ಚಿಕ್ಕೋಡಿ: ಅಥಣಿ ಹಾಗೂ ಕಾಗವಾಡ ಮತಕ್ಷೇತ್ರದ ಅಬ್ಯರ್ಥಿ ಗಳ ನಾಮಪತ್ರ ಸಲ್ಲಿಕೆ ಇಂದು ಚುನಾವಣೆಯ ರಣರಂಗವಾಗಿ ಮಾರ್ಪಟ್ಟಿದ್ದು ಕಾಂಗ್ರೆಸ್ ಹಾಗೂ ಬಿಜೆಪಿ ಬಂಡಾಯ ಅಬ್ಯರ್ಥಿಗಳು ನಾಮಪತ್ರ ಸಲ್ಲಿಸಿ ರಾಷ್ಟ್ರೀಯ ಪಕ್ಷಗಳಿಗೆ ಬಂಡಾಯ ಅಬ್ಯರ್ಥಿಗಳು ತಲೆ ಬಿಸಿ ಉಂಟುಮಾಡಿದ್ದಾರೆ.

ಒಂದು ಕಡೆ ಕಾಂಗ್ರೆಸ್ ಬಂಡಾಯ ಅಬ್ಯರ್ಥಿ ಆಗಿ ಎಸ್ ಕೆ ಬುಟಾಳಿ,ಮಾಜಿ ಶಾಸಕ ಶಹಜಹಾನ್ ಡೋಂಗರ್ ಗಾಂವ ಮತ್ತು ಸುರೇಶಗೌಡ ಪಾಟೀಲ ಸೇರಿದಂತೆ ಹಲವರು ತಮ್ಮ ಉಮೇದುವಾರಿಕೆ ಸಲ್ಲಿಸಿದ್ದಾರೆ.
ಕಳೆದಬಾರಿ ಮಹೇಶ ಕುಮಠಳ್ಳಿ ಅವರನ್ನು ಪಂಚಮಸಾಲಿ ಸಮುದಾಯದ ಅತಿಹೆಚ್ಚು ಮತಗಳ ಮೂಲಕ ಗೆಲ್ಲಿಸುವಲ್ಲಿ ಯಶಸ್ವಿ ಆಗಿದ್ದ ಸುರೇಶಗೌಡ ಪಾಟೀಲ ಅಥಣಿ ಮತಕ್ಷೇತ್ರದ ಕಾಂಗ್ರೆಸ್ ಬಂಡಾಯ ಅಬ್ಯರ್ಥಿಯಾಗಿ ಸಲ್ಲಿಸಿದ್ದಾರೆ.

ಸುರೇಶಗೌಡ ಪಾಟೀಲ ತಮ್ಮ ಮನೆಯಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ಹೇಳಿಕೆ ನೀಡಿದ್ದು, ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿ ನಾನು ಆರು ಚುನಾವಣೆ ಮಾಡಿದ್ದೇನೆ ಆದರೆ ಪಕ್ಷದ ಮುಖಂಡರು ನನಗೆ ಟಿಕೆಟ್ ಕೊಟ್ಟಿಲ್ಲ.
ಕಳೆದ ಎರಡು ಚುನಾವಣೆಯಲ್ಲೂ
ನಾನು ಟಿಕೆಟ್ ಕೇಳಿದ್ದೆ ಪಂಚಮಸಾಲಿ ಹೋಟ್ ಬ್ಯಾಂಕ್ ನಿಂದಲೇ ಮಹೇಶ ಕುಮಠಳ್ಳಿ ಆಯ್ಕೆ ಆಗಿದ್ದರು ಈ ಬಾರಿ ಗೆಲ್ಲುವ ನಿರೀಕ್ಷೆ ಇಟ್ಟುಕೊಂಡಿದ್ದೇನೆ
ಪಕ್ಷದಲ್ಲಿ ನಿಷ್ಠಾವಂತನಾಗಿ ಕಳೆದ ಇಪ್ಪತ್ತು ವರ್ಷಗಳಿಂದ ದುಡಿದಿದ್ದು ನನಗೆ ಅನ್ಯಾಯವಾಗಿದೆ ಕಾಂಗ್ರೆಸ್ ಬಂಡಾಯ ಅಬ್ಯರ್ಥಿ ಆಗಿ ಅಥಣಿಯಲ್ಲಿ ಸ್ಪರ್ದೆ ಮಾಡುತ್ತಿದ್ದೇನೆ‌.ಸ್ವಾಭಿಮಾನ ಇರುವ ಅಥಣಿ ಮತದಾರರು ನನ್ನನ್ನು ಕಡೆಗಣಿಸುವದಿಲ್ಲ ನನ್ನ ಪರ ಮತಚಲಾಯಿಸಿ ಪ್ರಜಾಪ್ರಭುತ್ವ ಮೌಲ್ಯಗಳನ್ನು ಎತ್ತಿ ಹಿಡಿಯುತ್ತಾರೆ ಅನ್ನುವ ನಂಬಿಕೆ ಇದೆ ಎಂದರು…

Share

About Prakash s kamble BIG TV NEWS, Athani

Check Also

ಡಿಕೆಶಿ ವಿರುದ್ಧ ಯಡಿಯೂರಪ್ಪ ಹೊಸ ಬಾಂಬ್

ದಾವಣಗೆರೆ: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ವಿರುದ್ಧ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಸ್ಪೋಟಕ ಆರೋಪ ಮಾಡಿದ್ದಾರೆ.ಕೆಪಿಸಿಸಿ ಅಧ್ಯಕ್ಷ ಡಿ.ಕೆ. …

Leave a Reply

Your email address will not be published. Required fields are marked *

error: Content is protected !!