Breaking News
Hiring Reporter’s For more Information Contact Above Number 876 225 4007 . Program producer
Home / ಜಿಲ್ಲೆ / ಅಪಘಾತದಲ್ಲಿ ಮೃತಪಟ್ಟ ಕುಮಾರ್ ಕುಟುಂಬಕ್ಕೆ ಪರಿಹಾರಧನ ವಿತರಣೆ.

ಅಪಘಾತದಲ್ಲಿ ಮೃತಪಟ್ಟ ಕುಮಾರ್ ಕುಟುಂಬಕ್ಕೆ ಪರಿಹಾರಧನ ವಿತರಣೆ.

ಮಂಡ್ಯ : ಮುರುಕನಹಳ್ಳಿ ಬಳಿ ಈಚೆಗೆ ನಡೆದ ರಸ್ತೆ ಅಪಘಾತದಲ್ಲಿ ಟಿಪ್ಪರ್ ಹರಿದು ಮೃತಪಟ್ಟಿದ್ದ
ಬೊಮ್ಮೇಗೌಡನಕೊಪ್ಪಲು ಹೊಸ ಬಡಾವಣೆಯ ನಿವಾಸಿ ಕುಮಾರ್ ಅವರ ಕುಟುಂಬದವರಿಗೆ ಅನರ್ಹ ಶಾಸಕರಾದ ಡಾ.ಕೆ.ಸಿ.ನಾರಾಯಣಗೌಡ ಅವರು ನೀಡಿದ 25 ಸಾವಿರ ರೂಪಾಯಿಗಳ ವಯಕ್ತಿಕ ಪರಿಹಾರದ
ಧನವನ್ನು ಶಾಸಕರ ಆಪ್ತ ಕಾರ್ಯದರ್ಶಿ ದಯಾನಂದ್ ಅವರು ವಿತರಣೆ ಮಾಡಿ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದರು.
ಈ ವೇಳೆ ಮಾತನಾಡಿದ ದಯಾನಂದ್ ಅವರು ಕಳೆದ ಶನಿವಾರ ಸಂಜೆ 5ಗಂಟೆ ಸಮಯದಲ್ಲಿ ಕುಮಾರ್ ಅವರು ಬೈಕ್ ನಲ್ಲಿ ತಮ್ಮ ಗ್ರಾಮಕ್ಕೆ ಹೋಗುತ್ತಿದ್ದರು.
ಈ ವೇಳೆ ಇನ್ನೊಂದು ಬೈಕ್ ಗೆ ಡಿಕ್ಕಿಯಾದ ಸಂದರ್ಭದಲ್ಲಿ ಕುಮಾರ್ ಮತ್ತು ಪುರ ಗ್ರಾಮದ ಸುಲೋಚನ ಅವರು ಮೃತಪಟ್ಡಿದ್ದರು.
ಈ ಹಿನ್ನೆಲೆಯಲ್ಲಿ ನಾರಾಯಣಗೌಡರು ತಲಾ 25ಸಾವಿರ ರೂಗಳ ತಮ್ಮ ವಯಕ್ತಿಕ ಪರಿಹಾರವನ್ನು ನೀಡಿ ಕುಟುಂಬದವರಿಗೆ ನೆರವಿನ ಹಸ್ತಚಾಚಿದ್ದಾರೆ.
ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಪರಿಹಾರವನ್ನು ಕೊಡಿಸಲು ನಾರಾಯಣಗೌಡರು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದಾರೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮೃತ ಕುಮಾರ್ ಪತ್ನಿ ಭವ್ಯ, ತಾಯಿ ರೇವಮ್ಮ, ಸುರೇಶ್, ಗ್ರಾಮ ಪಂಚಾಯಿತಿ ಸದಸ್ಯ ನಾಗೇಶ್, ದೊಡ್ಡರಾಮು, ಬೀರಯ್ಯ, ಸಂತೋಷ್ ಇತರರು ಇದ್ದರು.

Share

About Vijayalakshmi

Check Also

Featured Video Play Icon

ಸ್ಕ್ರ್ಯಾಪ್ ಅಡ್ಡೆಗೆ ತಗುಲಿದ ಬೆಂಕಿ! | Scrapyard caught on fire | BIG TV NEWS

Shaikh BIG TV NEWS, Hubballi See author's posts Share

Leave a Reply

Your email address will not be published. Required fields are marked *

error: Content is protected !!